ಕನ್ನಡಪ್ರಭ ವಾರ್ತೆ ಮಾಲೂರು ನವೋದಯ, ನವ್ಯ, ನವ್ಯೋತರ, ದಲಿತ, ಬಂಡಾಯ ಕಾವ್ಯ ಪರಂಪರೆಗಳು ಜನರ ಒಡನಾಟದ ಬದುಕನ್ನು ಆಯಾ ಕಾಲಘಟ್ಟಕ್ಕೆ ಅನ್ವಯಿಸಿ ರಚಿತವಾದರೂ ಪ್ರಚಲಿತ ಸಂದರ್ಭಗಳಿಗೆ ಮುಖಾಮುಖಿಯಾಗುವ ಸಾಹಿತ್ಯ ಪ್ರಕಾರವಾಗಿದ್ದು, ಸಾಹಿತಿ ಜಮುಚಂದ್ರ ಅವರ ಕವಿತೆಗಳಲ್ಲಿ ಇಂತಹ ಕಾವ್ಯಧರ್ಮವನ್ನು ಕಾಣಬಹುದಾಗಿದೆ ಎಂದು ಕವಿ ಡಾ.ಟಿ. ಯಲ್ಲಪ್ಪ ಹೇಳಿದರು.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ನ ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕುಂತೂರು ಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ವಿಜೇತ ಜಮುಚಂದ್ರ ಅವರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಕಾವ್ಯ ಸಮಾಜದ ಪ್ರತಿಬಿಂಬಾಕತ್ಮಕ ರೂಪಕಗಳಾಗಿದ್ದು, ಜಮು ಚಂದ್ರ ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ ಎಂದರು.ದತ್ತಿ ಸ್ಥಾಪಿಸುವ ಮೂಲಕ ಗೌರವ
ಸಾಹಿತಿಗಳ ಪ್ರೋತ್ಸಾಹಿಸಲು ದತ್ತಿ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ, ಸಾಹಿತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ವಿವಿಧ ರೀತಿಯ ದತ್ತು ನಿಧಿ ಸ್ಥಾಪಿಸಿದ್ದು, ಅದರಲ್ಲಿ ಬರುವ ಬಡ್ಡಿಯಿಂದ ಸಾಹಿತ್ಯಕ್ಕೆ ಪೂರಕವಾದ ಕಾರ‍್ಯಕ್ರಮಗಳು ರೂಪಿಸಿ ಉದಯೋನ್ಮುಖ ಸಾಹಿತಿಗಳನ್ನು ಗುರ್ತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಂ.ವಿ. ಹನುಮಂತಯ್ಯ ವಹಿಸಿದ್ದರು. ಗೌರವ ಕರ‍್ಯದರ್ಶಿ ಡಾ.ನಾ. ಮುನಿರಾಜು, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿಗಳಾದ ಡಾ. ಕುಮಾರಸ್ವಾಮಿ ಬೆಜ್ಜಿ ಹಳ್ಳಿ ,ಡಾ. ಮಂಜುನಾಥ್,ಕವಿ ಮಾಸ್ತಿ ಕೃಷ್ಣಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಹಿತಿ ಜಮುಚಂದ್ರ ದಂಪತಿಗಳನ್ನು ಸನ್ಮಾನಿಸಲಾಯಿತು. ದಾ.ಮು.ವೆಂಕಟೇಶ್ ಭಾಗವಹಿಸಿದ್ದರು.