ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಗಾಯಗೊಂಡ ವಿದ್ಯಾರ್ಥಿಗಳನ್ನು ಫಾತಿಮತ್ ಸುಹಾನ, ರಶ್ಮಿ, ದೀಕ್ಷಿತ, ಯಶ್ಮಿತಾ ಎಂದು ಗುರುತಿಸಲಾಗಿದೆ. ಗಾಯಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ:ಸುಮಾರು ೫೦ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಕಟ್ಟಡ ಗೋಡೆ ಬಿರುಕು ಬಿಟ್ಟು ಶಿಥಿಲಾವಸ್ಥೆ ತಲುಪಿತ್ತು. ಈ ಬಗ್ಗೆ ಶಾಲಾಭಿವೃದ್ದಿ, ಸ್ಥಳಿಯಾಡಳಿತದಿಂದ ದುರಸ್ತಿ ಅಥವಾ ಕೆಡವಲು ಅನುಮತಿಗಾಗಿ ಸಂಬಂಧಿಸಿದ ಇಲಾಖೆಗೆ ಮನವಿ ನೀಡಲಾಗಿತ್ತು. ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಎಂಜಿನಿಯರ್ ಸಂಗಪ್ಪ ಹುಕ್ಕೇರಿ ಕಟ್ಟಡ ಗುಣಮಟ್ಟ ಪರಿಶೀಲಿಸಿ ಯಾವುದೆ ಅಪಾಯವಿಲ್ಲ ಎಂದು ದಾಖಲಿಸಿದ್ದರು. ದುರಸ್ತಿಗಾಗಿ ಮಳೆಹಾನಿ ಯೋಜನೆಯಡಿಯಲ್ಲಿ ೧.೫೦ ಲಕ್ಷ ರು. ಮಂಜೂರಾಗಿತ್ತು. ಈ ಮೊತ್ತದಲ್ಲಿ ಗೊಡೆ ಬಿರುಕು ಬಿಟ್ಟ ಕಟ್ಟಡದ ಅಡಿಪಾಯ ಗಟ್ಟಿಗೊಳಿಸುವ ಕಾಮಗಾರಿ ನಡೆಸುವ ಸಲುವಾಗಿ ಮಂಗಳವಾರ ಹಿಟಾಚಿ ಮೂಲಕ ಗೋಡೆ ಅಡಿಪಾಯಕ್ಕೆ ತಾಗಿಕೊಂಡಂತೆ ಕಲ್ಲು ಕಟ್ಟಿ ಅಡಿಪಾಯ ಗಟ್ಟಿಗೊಳಿಸುವ ಸಲುವಾಗಿ ಹೊಂಡ ತೆಗೆಯಲಾಗುತ್ತಿತ್ತು. ೫ ಮತ್ತು ೭ ನೇ ತರಗತಿ ನಡೆಯುವ ಕೊಠಡಿಯ ಸುಮಾರು ೨೫ ಮೀಟರ್ ಕಾಮಗಾರಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು.
ಶಿಕ್ಷಕರು, ಸ್ಥಳಿಯರು, ಎಸ್ ಡಿ ಎಂ ಸಿ ಪದಾಧಿಕಾರಿಗಳು ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೇ ಕಟ್ಟಡದ ಮುಂದಿನ ಕೊಠಡಿಯಲ್ಲಿಯೂ ಇತರ ತಗರತಿಗಳಲ್ಲಿ ಪಾಠಗಳು ನಡೆಯುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ವಿದ್ಯಾರ್ಥಿಗಳು ಶಿಕ್ಷಕರು ಹೊರಗಡೆ ಓಡಿ ಹೋಗಿದ್ದಾರೆ.
ಘಟನೆ ನಡೆದ ಕಟ್ಟಡದೊಳಗಡೆ ೭ ಮತ್ತು ೫ ನೇ ತರಗತಿ ನಡೆಯುತ್ತಿತ್ತು. ಶಾಲೆಯಲ್ಲಿ ಮುಂದಿನ ತಿಂಗಳು ನಡೆಯಲಿದ್ದ ಖೋ ಖೋ ಪಂದ್ಯಾಟದ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಮೈದಾನದಲ್ಲಿದ್ದರು. ಇದರಿಂದಾಗಿ ಕಟ್ಟಡ ಏಕಾಏಕಿ ಕುಸಿದು ಬಿದ್ದಾಗ ಮಕ್ಕಳು ಕಟ್ಟಡದೊಳಗೆ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಹಾನಿ ತಪ್ಪಿದಂತಾಗಿದೆ.
ಘಟನೆ ಮಾಹಿತಿ ತಿಳಿದು ಸಾರ್ವಜನಿಕರು ಜಮಾಯಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ , ಜಿಲ್ಲಾ ಪಂಚಾಯಿತಿ ಇಂಜಿನಿಯಾರ್ ಸಂಗಪ್ಪ ಹುಕ್ಕೇರಿ ಅವರನ್ನು ತರಾಟೆಗೆತ್ತಿಕೊಂಡರು. ಅವರಲ್ಲಿ ಘಟನೆ ಬಗ್ಗೆ ಸಾರ್ವಜನಿಕರು ಅಸಮಾದನ ವ್ಯಕ್ತಪಡಿಸಿ ಇದೊಂದು ಇಂಜಿನಿಯಾರ್ ಬೇಜವ್ದಾರಿ ಕೆಲಸ ಅವರ ವಿರುದ್ದ ಶಿಸ್ತು ಕೈಗೊಳ್ಳಬೇಕೆಂದು ಆಗ್ರಹಿಸಿದರು.
..........................