ಕನ್ನಡಪ್ರಭ ವಾರ್ತೆ ಚಿಂಚೋಳಿ
ರಾಜ್ಯದ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಾಮಾಣಿಕತೆಯನ್ನು ಸಹಿಸದೆ ಕೆಲವು ಕುತಂತ್ರಿಗಳ ಒತ್ತಡಕ್ಕೆ ಮಣಿದು ಒಬ್ಬ ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇರೆಗೆ ಮುಖ್ಯಮಂತ್ರಿಗೆ ನೋಟಿಸ್ ನೀಡಿರುವುದು ದುರದುಷ್ಟಕರವಾಗಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದು ಅವುಗಳ ತನಿಖೆ ನಡೆಸಬೇಕು, ಸಂವಿಧಾನ ಕಾನೂನುಗಳನ್ನು ಗಾಳಿಗೆ ತೂರಿ ಬಿಜೆಪಿ ನಾಯಕರ ಅಣತಿಯಂತೆ ಕೆಲಸ ಮಾಡುವ ರಾಜ್ಯಪಾಲರನ್ನು ಕೂಡಲೇ ವಜಾ ಮಾಡಬೇಕು ಎಂದು ಅಗ್ರಹಿಸಿದರು.
ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಕುರುಬರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಯಿತು. ಚಿಂಚೋಳಿ ಪಿಎಸ್‌ಐ ಗಂಗಮ್ಮ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿದ್ದರು.ತಾಲೂಕು ಕುರುಬ ಸಮಾಜದ ಮುಖಂಡರಾದ ರೇವಣಸಿದ್ದಪ್ಪ ಅಣಕಲ, ಹಣಮಂತ ಪೂಜಾರಿ, ರವೀಂದ್ರ ಪೂಜಾರಿ, ರಾಜಕುಮಾರ ಕನಕಪೂರ, ಗೋಪಾಲ ಗಾರಂಪಳ್ಳಿ, ಮಹಾದೇವಪ್ಪ ಚಿಮ್ಮಾಇದಲಾಯಿ, ಗಂಗಾಧರ ಗಡ್ಡಿಮನಿ, ಸೋಮಶೇಖರ ಕರಕಟ್ಟಿ, ಲಕ್ಷ್ಮಣ ಆವಂಟಿ ಇನ್ನಿತರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ನೀಡಲಾಯಿತು.ಪೋಟೊ ೧೮ಜಿಯು-ಸಿಎಚ್‌ಐ೧
ಚಿಂಚೋಳಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಹತ್ತಿರ ಕುರುಬ ಸಮಾಜದವರು ರಸ್ತೆ ತಡೆ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.