ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕುವೆಂಪು: ಸಜ್ಜನ

KannadaprabhaNewsNetwork |  
Published : Jan 02, 2025, 12:31 AM IST
ಪೋಟೊ1ಕೆಎಸಟಿ2: ಕುಷ್ಟಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಕುವೆಂಪು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕುವೆಂಪು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಎಂದು ಸಾಹಿತಿ ನಿಂಗಪ್ಪ ಸಜ್ಜನ ಹೇಳಿದರು.

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದ್ದು, ಆದರ್ಶ ಜೀವನಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಎಸ್.ಜಿ. ಕಡೇಮನಿ ಮಾತನಾಡಿ, ಕುವೆಂಪು ಅವರು ಸಮಾಜದಲ್ಲಿನ ಅನಿಷ್ಠಗಳ ವಿರುದ್ಧ ಸಾಮಾಜಿಕ ಜಾಗೃತಿಯ ಅರಿವನ್ನು ಮೂಡಿಸಿದ ಶತಮಾನದ ಕವಿ ಎಂದರು. ಕುವೆಂಪು ಮನುಜಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ ಎಂದರು.

ಕುವೆಂಪು ಅವರು ಅಧ್ಯಾಪಕರಾಗಿ, ಪ್ರಾಚಾರ್ಯ, ಶಿಕ್ಷಣ ತಜ್ಞರಾಗಿಯೂ ಶ್ರೇಷ್ಠ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆಗೆ ಶಕ್ತಿ ನೀಡಿದ್ದಾರೆ. ಶಬ್ದಗಳಲ್ಲಿ ಅವರ ವರ್ಣನೆ ಅಸಾಧ್ಯ. ಅವರದ್ದು ಮೇರು ವ್ಯಕ್ತಿತ್ವ ಎಂದು ತಿಳಿಸಿದರು.

ಪ್ರಮಾಣ ಪತ್ರ ವಿತರಣೆ:

ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಕನ್ನಡ ಪರವಾದ ಕಾರ್ಯ ಚಟುವಟಿಕೆ ಮಾಡಿಕೊಂಡು ಹೋಗುವಂತೆ ತಿಳಿಸಲಾಯಿತು.

ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ನಬಿಸಾಬ ಕುಷ್ಟಗಿ, ಶ್ರೀನಿವಾಸ ಜಹಗೀರದಾರ, ಅಬ್ದುಲ್ ಕರಿಂ ವಂಟೇಳಿ, ತಾಜುದ್ದೀನ ದಳಪತಿ, ಶರಣಪ್ಪ ವಡಗೇರಿ, ಹನುಮೇಶ ಗುಮಗೇರಿ, ರವೀಂದ್ರ ಬಾಕಳೆ, ಶರಣಪ್ಪ ಲೈನದ, ಹನುಮಂತರಾವ ದೇಸಾಯಿ, ವೀರಬಸಯ್ಯ ಕಾಡಗಿಮಠ, ದೊಡ್ಡಪ್ಪ ಕೈಲವಾಡಗಿ, ನಟರಾಜ ಸೋನಾರ, ಮಂಜುನಾಥ ಗುಳೆದಗುಡ್ಡ, ಭರತೇಶ ಜೋಷಿ, ಬುಡ್ನೇಸಾಬ ಕಲಾದಗಿ, ಚಂದಪ್ಪ ಹಕ್ಕಿ, ಅಡಿವೆಪ್ಪ ನೆರೆಬೆಂಚಿ, ಉಮೇಶ ಹಿರೇಮಠ, ಶ್ರೀನಿವಾಸ ಕಂಟ್ಲಿ, ಬಸವರಾಜ ಉಪಲದಿನ್ನಿ, ಫಕೀರಪ್ಪ ಹೊಸವಕ್ಕಲ, ಶೈಲಜಾ ಬಾಗಲಿ, ವಿದ್ಯಾ ಕಂಪಾಪೂರಮಠ, ಲಲಿತಮ್ಮ ಹಿರೇಮಠ, ಪರಶಿವಮೂರ್ತಿ ಮಾಟಲದಿನ್ನಿ, ದೇವರಾಜ ವಿಶ್ವಕರ್ಮ,ಶರಣಪ್ಪ ಪಾಟೀಲ,ಸೇರಿದಂತೆ ಅನೇಕ ಕಸಾಪ ಆಜೀವ ಸದಸ್ಯರು ಕನ್ನಡಾಭಿಮಾನಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!