ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಜ್ರ ಮಹೋತ್ಸವ ಹಾಗೂ ಶತಮಾನೋತ್ಸವದ ವಿಚಾರಪೂರ್ಣ ಆಚರಣೆಗೆ ಪೂರ್ವಭಾವಿ ಸಭೆಯನ್ನು ವಿದ್ವಾಂಸರು, ಹಿರಿಯ ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರ ಸಮ್ಮುಖದಲ್ಲಿ ನಡೆಸಿತು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು ವಿಶ್ವವಿದ್ಯಾನಿಲಲಯದ ಕುಲಪತಿ ಪ್ರೊ.ಎನ್.ಕೆ. ಲೋಕ್‌ನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.(1966) 2026ರ ಡಿಸೆಂಬರ್ ವೇಳೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ 60 ವರ್ಷಗಳು ತುಂಬಲಿದೆ ಹಾಗೂ (1927) 2027ರ ಜುಲೈ ತಿಂಗಳಿಗೆ ಕನ್ನಡ ವಿಷಯ (ಕೋರ್ಸ್ )ಕ್ಕೆ 100 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಒಂದು ವರ್ಷ ಪೂರ್ತಿ ಕಾರ್ಯಯೋಜನೆ ರೂಪಿಸುವ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿತ್ತು.ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಪ್ರಾಧ್ಯಾಪಕ ವೆಂಕಟಾಚಲಶಾಸ್ತ್ರೀ ಮಾತನಾಡಿ, 100 ವರ್ಷಗಳ ನೆನಪಿನ ಅಂಗವಾಗಿ ಕನ್ನಡದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿವಿಯಲ್ಲಿ ಚಿನ್ನದ ಪದಕ ಮೀಸಲಿಡುವುದು. ಸಂಸ್ಥೆಯ 60 ವರ್ಷಗಳ ಪೂರೈಕೆಯ ಅಂಗವಾಗಿ ಷಷ್ಟಿಯಕ್ತಿ ಸ್ಮಾರಕ ಗ್ರಂಥಮಾಲೆ ಸ್ಮರಣೆ ಎಂಬ 60 ಪುಸ್ತಕಗಳ ಬಿಡುಗಡೆ, ಸಂಸ್ಥೆಯ ಪ್ರಕಟಣೆಗಳ ಪ್ರದರ್ಶನ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.ವಿಶ್ರಾಂತ ಪ್ರಾಧ್ಯಾಪಕ ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಅಖಿಲ ಕರ್ನಾಟಕ ಮಟ್ಟದ ಲೇಖಕ/ಲೇಖಕಿಯರ ಸಮಾವೇಶ ಆಯೋಜಿಸಿಬೇಕು. ಸಂಸ್ಥೆಯ ಎಲ್ಲಾ ವಿಷಯ ವಿಭಾಗಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಬೇಕು, ಜೊತೆಗೆ ಕುವೆಂಪು ಸಾಹಿತ್ಯವನ್ನು ದ್ರಾವಿಡ ಭಾಷೆಗೆ ತರ್ಜಿಮೆ ಮಾಡುವುದು ಎಂದು ಅಭಿಪ್ರಾಯ ವ್ಯಕ್ತವಾಯಿತು.ಹಿರಿಯ ಚಿಂತಕರಾದ ಅರವಿಂದ ಮಾಲಗತ್ತಿ ಮಾತನಾಡಿ, ಹಸ್ತಪ್ರತಿ ಡಿಜಿಟಲೀಕರಣದ ನಂತರ ಸಂಸ್ಥೆಯಲ್ಲಿನ ಶಾಸನಗಳ ಡಿಜಿಟಲೀಕರಣವೂ ಆಗಲಿ ಎಂದು ಹೇಳಿದರು.ಹಿರಿಯ ವಿದ್ವಾಂಸರಾದ ಪ್ರೊ.ಪಿ.ಕೆ. ರಾಜಶೇಖರ್, ಪ್ರೊ. ಹನೂರು ಕೃಷ್ಣಮೂರ್ತಿ, ಪ್ರೊ.ಸಿ.ಪಿ. ಸಿದ್ಧಾಶ್ರಮ, ಪ್ರೊ.ಡಿ.ಕೆ. ರಾಜೇಂದ್ರ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಪಂಡಿತರಾಧ್ಯ, ಪ್ರೊ. ಗಂಗಾನಾಯಕ, ಪ್ರೊ.ಆರ್. ರಾಮಕೃಷ್ಣ, ಡಾ. ಕ್ಯಾತನಹಳ್ಳಿ ರಾಮಣ್ಣ, ಡಾ. ಮೈಲಹಳ್ಳಿ ರೇವಣ್ಣ, ಶಾಸನ ತಜ್ಞರಾದ ಸೀತಾರಾಮ್ ಜಾಗೀರ್ದಾರ್, ಎಚ್.ಎಂ. ನಾಗರಾಜರಾವ್, ಪ್ರೊ. ರವೀಂದ್ರನಾಥ್, ಡಾ.ಟಿ.ಎನ್. ನಾಗರತ್ನ, ಡಾ.ವೈ.ಸಿ. ಭಾನುಮತಿ, ಯು.ಎಸ್. ರಾಮಣ್ಣ, ಡಾ. ಅಕ್ಕಮಹಾದೇವಿ, ಪ್ರೊ.ಎಸ್.ಡಿ. ಶಶಿಕಲಾ, ಪ್ರೊ.ಎನ್.ಕೆ. ಲೋಲಾಕ್ಷಿ, ಕೆ.ಟಿ. ವೀರಪ್ಪ ಮಾತನಾಡಿದರು.---ಕೋಟ್ಸಂಸ್ಥೆಯ ವಜ್ರ ಮಹೋತ್ಸವ ಹಾಗೂ ಕನ್ನಡ ವಿಷಯದ ಶತಮಾನೋತ್ಸವನ್ನು ಸಂಭ್ರಮ ಆಚರಿಸುವ ಸಂಬಧ ವಿವಿಧ ಸಮಿತಿ ಮಾಡುತ್ತೇವೆ. ವಿಶ್ವವಿದ್ಯಾನಿಲಯದಿಂದ ಎಷ್ಟು ಸಹಕರ ನೀಡಬೇಕು ಅಷ್ಟನ್ನೂ ನೀಡಲು ಸಿದ್ದರಿದ್ದೇವೆ. ಕನ್ನಡ ಕೆಲಸಕ್ಕಾಗಿ ಶ್ರಮಿಸೋಣ. ಈ ಸಂಭ್ರಮ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ಸಂಗತಿ.-ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ---ಕುವೆಂಪು ಕನ್ನಡ ಅಧಯ್ಯನ ಸಂಸ್ಥೆಗೆ ೨2026ರ ಡಿಸೆಂಬರ್ ತಿಂಗಳಿಗೆ 60 ವರ್ಷ ತುಂಬಲಿದೆ ಹಾಗೂ ಮೊದಲಿಗೆ ಕನ್ನಡ ವಿಷಯವು ಮಹಾರಾಜ ಕಾಲೇಜಿನಲ್ಲಿ ಆರಂಭವಾಗಿ ನಂತರ ಸಂಸ್ಥೆ ಕಟ್ಟಿದ ಮೇಲೆ ಇಲ್ಲಿಗೆ ವರ್ಗಾವಣೆಯಾಯಿತು. ಈ ನಿಟ್ಟಿನಲ್ಲಿ ಕನ್ನಡ ವಿಷಯಕ್ಕೆ 2027ರ ಜುಲೈಗೆ 100 ವರ್ಷ ತುಂಬಲಿದೆ. ಇದು ನಮ್ಮ ವಿಭಾಗಕ್ಕೆ ಹೆಮ್ಮೆಯ ಸಂಗತಿ. ಕುವೆಂಪು ಅವರ ಕನಸಗಳು ಸಾಕಾರಗೊಳ್ಳುತ್ತಿವೆ. ಇದನ್ನು ಸಂಭ್ರಮಿಸುತ್ತ, ಒಂದು ವರ್ಷ ವಿಚಾರಪೂರ್ಣವಾದ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಸಹಕಾರವಾಗುb ಭವಿಷ್ಯದ ಕಾರ್ಯಯೋಜನೆ ರೂಪಿಸಲಾಗುವುದು.-ಪ್ರೊ.ಎಂ. ನಂಜಯ್ಯ ಹೊಂಗನೂರು, ನಿರ್ದೇಶಕ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.