- ಖ್ಯಾತ ವನ್ಯಜೀವಿ ಛಾಯಾಗ್ರಾಹಕ
ಫೋಟೋ- 6ಎಂವೈಎಸ್12ಮೈಸೂರಿನ ಕಿರು ರಂಗಮಂದಿರದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.6ಎಂವೈಎಸ್13
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನ.----
ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರಕವಿ ಕುವೆಂಪು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಗ್ರೀನ್ಆಸ್ಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ತಿಳಿಸಿದರು.
ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರವರ ಥಿಯೇಟರ್, ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ಪ್ರದರ್ಶನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.1880ರಲ್ಲಿ ಖ್ಯಾತ ಚಿತ್ರಕಲಾವಿದ ವಿನ್ಸೆಂಟ್ವ್ಯಾನ್ ಗೋ ಬರೆದ ಕಲಾಕೃತಿ ಮೇಲೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಕುವೆಂಪು ಅವರು 1940- 50ನೇ ದಶಕದಲ್ಲಿ ಬರೆದದ್ದು ಇವತ್ತು ಚರ್ಚೆ ಮತ್ತು ಸಂವಾದ ಆಗುತ್ತಿದೆ. ಹೀಗಾಗಿ, ಸಾಹಿತಿಗಳು, ಕಲಾವಿದರೂ ಎಲ್ಲಾ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂದು ನುಡಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಮಾತನಾಡಿ, ಅಣ್ಣನ ನೆನಪು ಕುವೆಂಪು ಅವರ ಜೀವನ ಚರಿತ್ರೆ. ಇದನ್ನು ನಾಟಕ ರೂಪಕ್ಕೆ ತರುವುದು ಸುಲಭವಲ್ಲ. ಇದು ನಾಟಕವಲ್ಲದ ನಾಟಕ. ಅಣ್ಣನ ನೆನಪು ಸಾಕ್ಷ್ಯ ನಾಟಕವನ್ನು 2ನೇ ಬಾರಿಗೆ ನೋಡುತ್ತಿದ್ದೇವೆ. ಕಲಾವಿದರು ಸಾಕಷ್ಟು ಬದಲಾವಣೆಯೊಂದಿಗೆ ಅಭಿನಯಿಸುತ್ತಿದ್ದು, ನಾಟಕ ವೀಕ್ಷಣೆಗೆ ಕುತೂಹಲಿಯಾಗಿದ್ದೇನೆ ಎಂದು ತಿಳಿಸಿದರು.ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಮಾತನಾಡಿ, ಅಣ್ಣನ ನೆನಪು ಸಾಕ್ಷ್ಯ ನಾಟಕ ನೋಡಬೇಕೆಂದುಕೊಂಡಾಗ ನನ್ನ ಬಾಲ್ಯವನ್ನು ನೆನಪು ಮಾಡಿಕೊಂಡೆ. ಸಭಿಕರಂತೆಯೇ ನಾಟಕ ನೋಡಿ ಸಂತೋಷಪಡಲು ಬಂದಿದ್ದೇನೆ ಎಂದು ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಮಾತನಾಡಿ, ಜಾಗತೀಕರಣದ ಬದುಕಿನಲ್ಲಿ ಸಮಾಜದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಈ ಹೊತ್ತಿನಲ್ಲಿ ತಂದೆಯನ್ನು ನೆನಪು ಮಾಡಿಕೊಳ್ಳುವುದು ಭಾವನಾತಕ ಸಂಬಂಧವಾಗಿದೆ. ಹೀಗಾಗಿ, ಅಣ್ಣನ ನೆನಪು ನಾಟಕ ಪ್ರಸ್ತುತವಾಗಿದೆ ಎಂದು ತಿಳಿಸಿದರು.ರಾಯಚೂರು ಜಿಲ್ಲೆ ಹೆಚ್ಚುವರಿ ಎಸ್ಪಿ ಡಾ. ಶಿವಕುಮಾರ ದಂಡಿನ ಸ್ವಾಗತಿಸಿದರು. ರಾಮನಹಳ್ಳಿ ಸ್ವಾಮಿ ಪ್ರಾರ್ಥಿಸಿದರು.
ನಾಟಕ ವೀಕ್ಷಣೆಗೆ ಮುಗಿಬಿದ್ದ ಜನನಗರದ ಕಿರುರಂಗ ಮಂದಿರದಲ್ಲಿ ಪ್ರವರ ಥಿಯೇಟರ್ ಪ್ರಸ್ತುತಪಡಿಸಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಸಾಕ್ಷ್ಯ ನಾಟಕ ವೀಕ್ಷಣೆಗೆ ಜನರು ಮುಗಿಬಿದ್ದರು. ಸ್ಥಳಾವಕಾಶದ ಸಿಗದೇ ಕೆಲವರು ನಿರಾಸೆಯಿಂದಲೂ ಮರಳಿದರು. ನಾಟಕದ ರಂಗರೂಪ- ಕರಣಂ ಪವನ್ಪ್ರಸಾದ್, ಹನು ರಾಮಸಂಜೀವ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.