- ಬೀರೂರು ಮಾರ್ಗದ ಕ್ಯಾಂಪ್ ಬಡಾವಣೆ ನಿವಾಸಿಗಳಿಗೆ ನಿತ್ಯ ಸಮಸ್ಯೆ
ಬೀರೂರು ಪಟ್ಟಣದ ಜನಸಂಖ್ಯೆ; 22723 (2011ರ ಜನಗಣತಿಯಂತೆ)ಒಟ್ಟು ನಲ್ಲಿಗಳು ಸಂಪರ್ಕ;3,696 ಗೃಹಬಳಕೆ- ವಾಣಿಜ್ಯ ಬಳಕೆ ನಿತ್ಯ ಬೇಕಾಗುವ ನೀರು; 2 ದಶಲಕ್ಷ ಲೀ.
ಕನ್ನಡ ಪ್ರಭ ವಾರ್ತೆ, ಬೀರೂರುಬೀರೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಭದ್ರಾ ಜಲಾಶಯದಲ್ಲಿ ನೀರಿದ್ದರೂ, ನೀರು ಸಂಗ್ರಹಕ್ಕೆ ಟ್ಯಾಂಕ್‌ಗಳ ಕೊರತೆಯಿಂದಾಗಿ ಕೆಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.ಪಟ್ಟಣಕ್ಕೆ ಭದ್ರಾ ಜಲಾಶಯದಲ್ಲಿ ನೀರಿದ್ದು ಸದ್ಯಕ್ಕೆ ತೊಂದರೆ ಇಲ್ಲ. ಸಮಸ್ಯೆ ಬಂದರೆ 20ಕ್ಕೂ ಹೆಚ್ಚು ಕೊಳವೆಬಾವಿಗಳು ಸುಸ್ಥಿತಿಯಲ್ಲಿವೆ. ಪಟ್ಟಣಕ್ಕೆ ನಿತ್ಯ 2 ಎಂಎಲ್‌ಡಿ ನೀರಿನ ಅಗತ್ಯವಿದೆ. ಕನಿಷ್ಠ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುವ ವ್ಯವಸ್ಥೆ ಇದೆ. ಅಗತ್ಯವಿರುವ ನೀರಿನ ಶೇ 65ರಷ್ಟು (1.30 ಎಂಎಲ್‌ಡಿ) ಮಾತ್ರ ಸದ್ಯಕ್ಕೆ ಪೂರೈಕೆಯಾಗುತ್ತಿದೆ.ಪಟ್ಟಣದಲ್ಲಿ ಪುರಸಭೆ ಹಿಂಭಾಗ ಹಾಗೂ ರಾಜಾಜಿನಗರ ಬಡಾವಣೆಯಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ, ಸಂತೆ ಬಳಿ ಹಾಗೂ ಕೆಎಲ್‌ಕೆ ಮೈದಾನದಲ್ಲಿ ತಲಾ 50ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಇವೆ. ದೊಡ್ಡಘಟ್ಟ ಬಳಿ ಸಂಗ್ರಹಾಗಾರದಿಂದ ಬೀರೂರು ಪಂಪ್‌ಹೌಸ್ ಮೂಲಕ ಈ ಟ್ಯಾಂಕ್‌ಗಳಿಗೆ ನೀರು ಬರುತ್ತದೆ. ಈ ನೀರು 1ರಿಂದ 16ನೇ ವಾರ್ಡ್‌ಗಳಿಗೆ ಪೂರೈಕೆಯಾಗುತ್ತದೆ.
‘ಕ್ಯಾಂಪ್ ಭಾಗದ ಜನರ ನೀರಿನ ಸಮಸ್ಯೆ ಬಗೆಹರಿಸಲು ಪುರಸಭೆ ಯತ್ನಿಸುತ್ತಿದೆ. ಹೊಸ ಟ್ಯಾಂಕ್ ನಿರ್ಮಾಣಕ್ಕೆ ನಗರ ನೀರು ಸರಬರಾಜು ಮಂಡಳಿ ಅಮೃತ್–2 ಯೋಜನೆಯಲ್ಲಿ ಮಂಜೂರಾತಿ ದೊರೆತಿದ್ದು, ಕಾರ್ಯಾದೇಶವಾಗಿದೆ. 10 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುವುದು. ನೀತಿ ಸಂಹಿತೆ ಕಾರಣಕ್ಕೆ ವಿಳಂಬವಾಗಿದ್ದು, ಜಿಲ್ಲಾಧಿಕಾರಿ ಗಮನ ಸೆಳೆದು ಶೀಘ್ರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು’ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಜಿ.ಪ್ರಕಾಶ್ ಪ್ರತಿಕ್ರಿಯಿಸಿದರು.
---29 ಬೀರೂರು 1ಬೀರೂರು ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ನೀರು ಸಂಗ್ರಹಕ್ಕೆ ಡ್ರಮ್ ಗಳನ್ನು ಅವಲಂಬಿಸಿರುವ ಮನೆಗಳು