ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಮಾತನಾಡಿದ ಶಾಸಕರು, ಸೆ.4ರಂದು ನಡೆಯುವ ಮಡಿಲು ತುಂಬುವ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಕುಳಿತುಕೊಳ್ಳಲು ಆಸನ, ಬೃಹತ್ ಶಾಮಿಯಾನ, ವೇದಿಕೆಗಳ ನಿರ್ಮಿಸಲಾಗುತ್ತಿದೆ. ಅವರಿಗೆ ಯಾವುದೇ ಲೋಪ ಬರದ ನೋಡಿಕೊಳ್ಳಬೇಕು. ಸ್ಥಳೀಯ ಆಶಾ ಕಾರ್ಯಕರ್ತರು ಮಹಿಳೆಯರನ್ನು ಜೋಪಾನವಾಗಿ ವಾಹನಗಳ ಮೂಲಕ ಕರೆತರಲು ಸೂಚಿಸಲಾಗಿದೆ ಎಂದರು.
ಅಂದು ಪುರಸಭೆ ಕಚೇರಿ ಆವರಣದಲ್ಲಿ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಸವಲತ್ತು ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು ಎಂದರು.ಈ ವೇಳೆ ನಿಮಿಷಾಂಬ ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
ಮದ್ದೂರು:
ತಾಲೂಕಿನ ವಳಗೆರೆಹಳ್ಳಿಯ ಗುರುದತ್ತ ಆಶ್ರಮದಲ್ಲಿ ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಮೊಮ್ಮಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಸ್ಕೃತಿ ಲಯನ್ಸ್ ಸಂಸ್ಥೆ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಟಿ.ಆರ್.ಕೆಂಗಲ್ ಗೌಡ, ಹೆಚ್.ಸುರೇಶ, ಎಸ್ .ಬಿ.ನಾಗರಾಜು, ಅನಾಥಾಶ್ರಮದ ಮೇಲ್ವಿಚಾರಕಿ ಸುಷ್ಮಾ ಭಾಗವಹಿಸಿದ್ದರು.