ಲಕ್ಕೋಜನಹಳ್ಳಿ ಡೇರಿ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

KannadaprabhaNewsNetwork | Published : Feb 11, 2024 1:48 AM

ಸಾರಾಂಶ

ರಾಮನಗರ: ತಾಲೂಕಿನ ಲಕ್ಕೋಜನಹಳ್ಳಿ ಡೇರಿ ನೂತನ ಅಧ್ಯಕ್ಷರಾಗಿ ಚಿಕ್ಕೇಗೌಡ ಮತ್ತು ಉಪಾಧ್ಯಕ್ಷರಾಗಿ ಮಂಗಳಗೌರಮ್ಮ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆ ಘೋಷಿಸಿದರು.

ರಾಮನಗರ: ತಾಲೂಕಿನ ಲಕ್ಕೋಜನಹಳ್ಳಿ ಡೇರಿ ನೂತನ ಅಧ್ಯಕ್ಷರಾಗಿ ಚಿಕ್ಕೇಗೌಡ ಮತ್ತು ಉಪಾಧ್ಯಕ್ಷರಾಗಿ ಮಂಗಳಗೌರಮ್ಮ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆ ಘೋಷಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜೆಡಿಎಸ್ ಮುಖಂಡ ದೊರೆಸ್ವಾಮಿ ಮಾತನಾಡಿ, ಸಂಘ 1994 ರಲ್ಲಿ 150 ಲೀಟರ್ ಹಾಲು ಶೇಖರಣೆಯಿಂದ ಪ್ರಾರಂಭವಾಗಿ ಇಂದು ಪ್ರತಿದಿನ 900, 1000 ಲೀಟರ್ ಹಾಲು ಶೇಖರಣೆ ಮಾಡುತ್ತಿದೆ. ಬೆಂಗಳೂರು ಹಾಲು ಒಕ್ಕೂಟ, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಅನುದಾನ, ಧರ್ಮಸ್ಥಳ ಸಂಸ್ಥೆ, ಸಂಘದ ಅನುದಾನದಲ್ಲಿ ದಾನಿಗಳ ನೆರವಿನಿಂದ ಆಡಳಿತ ಮಂಡಳಿ ಸಹಕಾರದಿಂದ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲಾಗಿದೆ. ಶಾಸಕ ಇಕ್ಬಾಲ್ ಹುಸೇನ್ ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ರಾಜಕೀಯ ದುರುದ್ದೇಶದಿಂದ ಸಂಘದ ಸದಸ್ಯರಲ್ಲದ ಹೊರಗಿನವರು ಸಂಘದ ಚುನಾವಣೆ ನಡೆಯುವ ಕೆಲವು ದಿನಗಳ ಮುನ್ನಾ ಗೊಂದಲ ಉಂಟು ಮಾಡಿದ್ದರು. ಸಂಘದಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು ಕಾನೂನು ರೀತಿಯಲ್ಲಿ ಸಂಘ ಮುನ್ನಡೆಯುತ್ತಿದೆ ಎಂದು ದೊರೆಸ್ವಾಮಿ ತಿಳಿಸಿದರು.

ನೂತನ ಅಧ್ಯಕ್ಷ ಚಿಕ್ಕೇಗೌಡ ಮಾತನಾಡಿ, ಸಂಘದ ಅಭಿವೃದ್ಧಿಗೆ ಹಾಲು ಉತ್ಪಾದಕ ರೈತರ ಶ್ರಮ ಕಾರಣ ಸಂಘವನ್ನು ನೂತನ ಆಡಳಿತ ಮಂಡಳಿ ಸದಸ್ಯರ ಸಹಕಾರದಿಂದ ಮತ್ತಷ್ಟು ಪ್ರಗತಿಯೆಡೆಗೆ ಕೊಂಡೊಯ್ಯಲಾಗುತ್ತದೆ. ಸಂಘವನ್ನು ರೈತ ಸ್ನೇಹಿಯಾಗಿಸಿ ಸಂಘದಲ್ಲಿ ಬಿಎಂಸಿ ಕೇಂದ್ರ ತೆರೆಯಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ನೂತನ ಅಧ್ಯಕ್ಷ ಚಿಕ್ಕೇಗೌಡ ಮತ್ತು ಉಪಾಧ್ಯಕ್ಷೆ ಮಂಗಳಗೌರಮ್ಮ ಅವರನ್ನು ಹಾಲು ಉತ್ಪಾದಕರು, ಎಪಿಎಂಸಿ ಮಾಜಿ ಅಧ್ಯಕ್ಷ ಜೆಡಿಎಸ್ ಮುಖಂಡ ದೊರೆಸ್ವಾಮಿ ಹಾಗೂ ಮುಖಂಡರು ಅಭಿನಂದಿಸಿದರು.

ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮುಖಂಡರಾದ ನಾಗರಾಜು, ಶಿವನಂಜಯ್ಯ, ಆನಂದ್, ಎಲ್.ಎಂ. ಸಂತೋಷ್, ವೈರಮುಡಿಗೌಡ, ವೈಕುಂಟೇಗೌಡ, ಕಾಂತರಾಜು, ಮಧು, ಪುರುಷೋತ್ತಮ್, ಜಯಕುಮಾರ್, ಕೆಂಪರಾಜು ಕಾರ್ಯದರ್ಶಿ ಟಿ.ಲತಾ, ಸಂಘದ ನಿರ್ದೇಶಕರಾದ ಸತೀಶ, ಕುಮಾರ, ಚಲುವರಾಜು, ಮಂಜು, ಎಲ್.ಎಸ್. ಸ್ವಾಮಿ, ಮಹದೇವ, ಶೇಖರ್, ಕೆಂಪಮ್ಮ ಮತ್ತಿತರರಿದ್ದರು.

10ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಚಿಕ್ಕೇಗೌಡ ಮತ್ತು ಉಪಾಧ್ಯಕ್ಷೆ ಮಂಗಳಗೌರಮ್ಮ ಅವರನ್ನು ಮುಖಂಡರು ಅಭಿನಂದಿಸಿದರು.

Share this article