ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತ, ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದಿಂದ ಆಷಾಢ ಮಾಸದಲ್ಲಿ ಮೂರು ದಿನ ಅದ್ಧೂರಿಯಿಂದ ನಡೆಯುವ ದೇವರಹೊಸಹಳ್ಳಿ ಶ್ರೀ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬ್ರಹ್ಮ ರಥೋತ್ಸವಕ್ಕೆ ದೇವಾಲಯದ ಆವರಣದಲ್ಲಿ ಗೋ ಪೂಜೆ, ಆಶ್ವ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು. ಸಾವಿರಾರು ಭಕ್ತಾಧಿಗಳು ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿದ್ದರು.
ದೇವಾಲಯದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರತಿಮೆ ಹಾಗೂ ಹಲವು ದೇವರ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ದೇವರ ವಿಶೇಷ ಅಲಂಕಾರ ಹಾಗೂ ಮುಂಜಾನೆಯಿಂದಲೇ ನಾನಾ ಪೂಜಾ ಕೈಕರ್ಯಗಳು ನಡೆದವು. ಸಂಜೆ ದೀಪೋತ್ಸವ, ತೆಪ್ಪೋತ್ಸವ ಹಾಗೂ ಬಾಣಬಿರುಸಿನ ಪ್ರದರ್ಶನ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಖಾಸಗಿ ವ್ಯಕ್ತಿಗಳಿಂದ ಪಾಸ್ ವಿತರಣೆ ಆರೋಪ
ಸಾವಿರಾರು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ವೇಳೆ, ಪಾಸ್ ಹೊಂದಿದ್ದವರಿಗೆ ಸರತಿ ಸಾಲನ್ನು ಬದಿಗೊತ್ತಿ ವಿಶೇಷ ಪ್ರವೇಶ ಕಲ್ಪಿಸಲಾಗಿದೆ. ಈ ವಿಚಾರ ಜಾತ್ರಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು.
೨೬ಸಿಪಿಟಿ೨:ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.