ತಾತನಹಳ್ಳಿಯಲ್ಲಿ ಲಕ್ಷ್ಮೀದೇವಿ ತಾತೇಶ್ವರಸ್ವಾಮಿ ಸಿಡಿ ಜಾತ್ರೆ

KannadaprabhaNewsNetwork |  
Published : Mar 30, 2026, 12:30 AM IST
29ಎಚ್ಎಸ್ಎನ್3 : ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಗ್ರಾಮದೇವರ ಶ್ರೀ ಲಕ್ಷ್ಮಿದೇವಿ ಸಿಡಿ ಜಾತ್ರಾ ಮಹೋತ್ಸವ ಜರುಗಿತು. | Kannada Prabha

ಸಾರಾಂಶ

ತಾತನಹಳ್ಳಿಯ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ದೇವಾಲಯಲ್ಲಿ ಶನಿವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀದೇವಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ, ಸಹಸ್ರ ನಾಮಾರ್ಚನೆ ನೆರವೇರಿಸಲಾಯಿತು. ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಮಂಗಳಾರತಿ ನೆರವೇರಸಿ, ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಲಾಯಿತು. ಸಿಡಿ ರಥವನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ಎಡೆ ಸಮರ್ಪಿಸಿ, ಪೂಜಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕಿನ ತಾತನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿ ಹಾಗೂ ಶ್ರೀ ತಾತೇಶ್ವರಸ್ವಾಮಿ ಸಿಡಿ ಜಾತ್ರಾ ಮಹೋತ್ಸವ ಸಂಪ್ರದಾಯದ ಆಚರಣೆಯಂತೆ ಶನಿವಾರ ವೈಭವದಿಂದ ನಡೆಯಿತು.ತಾತನಹಳ್ಳಿಯ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ದೇವಾಲಯಲ್ಲಿ ಶನಿವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀದೇವಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ, ಸಹಸ್ರ ನಾಮಾರ್ಚನೆ ನೆರವೇರಿಸಲಾಯಿತು. ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಮಂಗಳಾರತಿ ನೆರವೇರಸಿ, ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಲಾಯಿತು. ಸಿಡಿ ರಥವನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ಎಡೆ ಸಮರ್ಪಿಸಿ, ಪೂಜಿಸಲಾಯಿತು. ಶ್ರೀದೇವಿಯ ಅಡ್ಡೆ ಹೊತ್ತವರು ಹಾಗೂ ಭಕ್ತರು ಸಿಡಿ ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಮಹಾಮಂಗಳಾರತಿ ನೆರವೇರಿಸಿ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಮುಖಂಡರು ಹಾಗೂ ಯುವಕರು ಹಿರಿಯರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಮಾಡುವ ಜತೆಗೆ ಪರ ಊರುಗಳಿಂದ ಬರುವ ಭಕ್ತರಿಗಾಗಿ ಸಮುದಾಯ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ಪೂರ್ವಿಕರ ಆಚರಣೆಯಂತೆ ದೇವಾಂಗ ಜನಾಂಗದ ಮಳಲಿಶೆಟ್ಟರ ಕುಟುಂಬಸ್ಥರು ನೂರಾರು ಭಕ್ತರಿಗೆ ಪಾನಕ ವಿತರಿಸಿ, ಶ್ರೀ ದೇವಿಯ ಸೇವೆಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಶ್ರೀರಾಮನವಮಿ ವೈಭವ ಸಾಮೂಹಿಕ ಯಜ್ಞ
ಕಡೂರಿನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಭಂಡಾರಿ ಶ್ರೀನಿವಾಸ್