)
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಡಿ.ಕೆ. ಲಕ್ಷ್ಮೀಶ ಆಯ್ಕೆಯಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಲಕ್ಷ್ಮೀಶ ಅವರು ನಮ್ಮ ಸಹಕಾರಿ ಸಂಘದಲ್ಲಿ ೧೭೦೦ ಜನ ಶೇರುದಾರರಿದ್ದು ಅದರಲ್ಲಿ ೧೧೦೦ ಜನರಿಗೆ ೮ ಕೋಟಿಯ? ಸಾಲ ಒದಗಿಸಲಾಗಿದೆ. ೩೦ ಸ್ವಸಾಯ ಸಂಘ ಗುಂಪುಗಳಿಗೆ ೯೪ ಲಕ್ಷ ಸಾಲ ನೀಡಲಾಗಿದೆ. ಸಕಾಲಕ್ಕೆ ಮರುಪಾವತಿಸುವ ಸದಸ್ಯರಿಗೆ ಹೆಚ್ಚುವರಿ ಸಾಲ ನೀಡುವ ಸಾಧ್ಯತೆ ಇದ್ದು ಶಾಸಕರಾದ ರೇವಣ್ಣನವರ ಸಹಕಾರ ಹಾಗೂ ವಿಧಾನ ಪರಿ?ತ್ ಸದಸ್ಯರಾದ ಸೂರಜ್ ರೇವಣ್ಣನವರ ಸಹಕಾರದಿಂದ ಇನ್ನೂ ಹೆಚ್ಚಿನ ಸಲಹೆಗಳು ರೈತರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಜಯರಾಮ್ ನಿರ್ದೇಶಕರಾದ ಬಿ. ಆರ್. ನಾರಾಯಣಸ್ವಾಮಿ, ಸಿ.ಎಸ್. ನಾಗೇಶ, ಬಿ.ಪಿ. ಹರೀಶ, ಹೇಮಕುಮಾರ್, ಬಿ ಸಿ ರಾಜು, ಮಂಜುನಾಥ, ಮಂಜಮ್ಮ ಸುನಿತ, ಮಣಿಕಂಠ, ಸಹಕಾರಿ ಸಂಘದ ಮೇಲ್ವಿಚಾರಕರಾದ ಅಭಿಲಾಶ್, ಮಧು ಉಪಸ್ಥಿತರಿದ್ದರು.