ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಬಿಡಲ್ಲ: ಮಾಳಮ್ಮ

KannadaprabhaNewsNetwork |  
Published : May 30, 2026, 02:15 AM IST
ಕುರುಗೋಡು 02 ಸಮೀಪದ ಕುಡತಿನಲ್ಲಿ ನಡೆದ ಭೂ ಸಂತ್ರಸ್ತರ ಹೋರಾಟಕ್ಕೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಶುಕ್ರವಾರ ಬೆಂಬಲ ನೀಡಿದ ದೇವದಾಸಿ ಮಹಿಳೆಯರು. | Kannada Prabha

ಸಾರಾಂಶ

ಕುಡತಿನಿ ಭೂ ಸಂತ್ರಸ್ತ ರೈತರಿಗೆ ಕೆಐಎಡಿಬಿ ಸರ್ಕಾರದೊಂದಿಗೆ ಶಾಮೀಲಾಗಿ ಜಿಂದಾಲ್ ಕಾರ್ಖಾನೆಗೆ ಭೂ ಪರಭಾರೆ ಮಾಡಿರುವುದು ದುರ್ದೈವವಾಗಿದೆ.

ಕುರುಗೋಡು: ಕುಡತಿನಿ ಭೂ ಸಂತ್ರಸ್ತ ರೈತರಿಗೆ ಕೆಐಎಡಿಬಿ ಸರ್ಕಾರದೊಂದಿಗೆ ಶಾಮೀಲಾಗಿ ಜಿಂದಾಲ್ ಕಾರ್ಖಾನೆಗೆ ಭೂ ಪರಭಾರೆ ಮಾಡಿರುವುದು ದುರ್ದೈವವಾಗಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಭೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ದೇವದಾಸಿ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ ಹೇಳಿದರು.ಸಮೀಪದ ಕುಡತಿನಿ ಪಟ್ಟಣದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಬಲಿಸಿದ ಸಂಘಟನೆಗಳಾದ ರೈತ ಸಂಘ, ಕೆಪಿಆರ್ಎಸ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಸಿಐಟಿಯು, ಕನ್ನಡಪರ, ದಲಿತ, ಪ್ರಗತಿಪರ ಸಂಘಟನೆಗಳ ಮೂಲಕ ಹಮ್ಮಿಕೊಂಡಿದ್ದ ಶುಕ್ರವಾರ ಅನಿರ್ದಿಷ್ಟಾವಧಿ ಸತ್ಯಾಧರಣಿಯು ಇಂದಿಗೆ 1259 ದಿನಕ್ಕೆ ಹಾಗೂ 17 ದಿನ ಉಪವಾಸ ಸತ್ಯಾಗ್ರಹಕ್ಕೆ ಕಾಲಿಟ್ಟಿದ್ದು, ಈ ಹೋರಾಟದಲ್ಲಿ ಭಾಗವಹಿಸಿ, ಬೆಂಬಲ ನೀಡಿದ ನಂತರ ಮಾತನಾಡಿದರು.

ನ್ಯಾಯಕ್ಕಾಗಿ ನಿರಂತರ ಹೋರಾಟಕ್ಕೆ ನಿಂತ ರೈತರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ನ್ಯಾಯ ಸಿಗದ ರೀತಿಯಲ್ಲಿ ಪಿತೂರಿ ನಡೆಸಲಾಗುತ್ತಿದೆ. ಎಷ್ಟೇ ಪಿತೂರಿ ನಡೆಸಿದರೂ ರೈತರ ಹೋರಾಟ ಮುಂದುವರೆಯಲಿದೆ. ಸದಾ ಬೆಂಬಲ ನೀಡಲಾಗುವುದು ಎಂದರು.

ಸಿಪಿಐಎಂ ಮುಖಂಡ ತಿಪ್ಪೇಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ದೇವದಾಸಿ ವಿಮೋಚನಾ ಸಂಘದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಸ್ವಾಮಿ, ಮಹಿಳಾ ಮುಖಂಡರಾದ ಕೊಂಡಾಪುರ ದುರ್ಗಮ್ಮ, ಕುಡತಿನಿ ಗ್ರಾಮದ ದೇವಮ್ಮ, ಹನುಮಕ್ಕ, ಗಂಗಮ್ಮ, ಹುಲಿಗೆಮ್ಮ, ರುದ್ರಮ್ಮ, ಲಿಂಗಮ್ಮ, ಗೌರಮ್ಮ, ಸುಶೀಲಮ್ಮ, ಹುಲಿಗೆಮ್ಮ, ರತ್ನಮ್ಮ, ಗಾದಿಲಿಂಗಮ್ಮ, ಲಕ್ಷ್ಮಮ್ಮ, ರುದ್ರಮ್ಮ, ಗೌರಮ್ಮ, ಹಂಪಮ್ಮ, ಹುಲಿಗೆಮ್ಮ, ತುಳಸಮ್ಮ ಸೇರಿದಂತೆ ಹೋರಾಟಗಾರರು, ರೈತರು ಇದ್ದರು.

ಕುರುಗೋಡು ಸಮೀಪದ ಕುಡತಿನಲ್ಲಿ ನಡೆದ ಭೂ ಸಂತ್ರಸ್ತರ ಹೋರಾಟಕ್ಕೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಶುಕ್ರವಾರ ಬೆಂಬಲ ನೀಡಿದ ದೇವದಾಸಿ ಮಹಿಳೆಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೆ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರ್ಪಡೆ ಬೇಡ
ಅವಧಿ ಪೂರ್ವದಲ್ಲೆ ಅತಿಥಿ ಉಪನ್ಯಾಸಕರ ಬಿಡುಗಡೆ