ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಎಲ್ಲರೊಂದಿಗೆ ಚರ್ಚೆ ಮಾಡಿ ತೆರವುಗೊಳಿಸಲಾದ ಜಾಗದಲ್ಲಿ ಬಡವರಿಗೆ ಅನುಕೂಲಕರ ಯಾವುದೇ ಒಂದು ಯೋಜನೆ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು. ಇನ್ನೂ ಗೌರನಹಳ್ಳಿಯಲ್ಲಿ 4.38 ಗುಂಟೆ ಜಾಗವನ್ನು ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಾಯನ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ಸಮಾಜಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಶೀಘ್ರದಲ್ಲಿ ಅಂಬೇಡ್ಕರ್ ಅಧ್ಯಾಯನ ಸಂಸ್ಥೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರೀತಿ, ಶಾಂತಿ, ದಯೆ ಮಾರ್ಗದಲ್ಲಿ ಸಮಾಜ ನಡೆಯಬೇಕೆಂಬ ಉದ್ದೇಶದಿಂದ ಭಗವಾನ್ ಬುದ್ಧ ಜಯಂತಿ ಆಚರಣೆ ಮಾಡಲಾಗುತ್ತಿದೆ. ಗೌತಮ ಬುದ್ಧ ಮಾನವನ ದಾಹವೇ ದುಃಖಕ್ಕೆ ಮೂಲ, ಆಸೆಯೇ ದುಃಖದ ಮೂಲ. ಒಳ್ಳೆಯ ವಿಚಾರ, ಗುರಿ, ನಡೆ-ನುಡಿ, ಧ್ಯಾನದಿಂದ ಶಾಂತಿ ಮಾರ್ಗ ಪಡೆಯಬಹುದು ಎಂದು ಸಮಾಜಕ್ಕೆ ಬೋಧಿಸಿದರು.ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ತಮ್ಮ ಇಡೀ ಬದುಕನ್ನು ವರ್ಣಾಶ್ರಮ ವ್ಯವಸ್ಥೆ ಮತ್ತು ಮೂಢನಂಬಿಕೆ ವಿರೋಧಿ ಹೋರಾಟಕ್ಕೆ ಮೀಸಲಿಟ್ಟರು. ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣ ಹೇಳಿದರೆ ಅಂಬೇಡ್ಕರ್ ಸಮ ಸಮಾಜದ ನಿರ್ಮಾಣಕ್ಕೆ ಶೋಷಿತರಿಗೆ ವಿದ್ಯಾಭ್ಯಾಸ ನೀಡಬೇಕು ಎಂದರೆ ಈ ಮಹಾನ್ ಪುರುಷರು ತಮ್ಮದೇ ಯಾದ ಸಂದೇಶಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.
ಬುದ್ಧನ ಕುರಿತು ಉಪನ್ಯಾಸ ಐಡಿಎಸ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಜೆ.ವಸಂತಕುಮಾರ್, ಯುದ್ಧ ಪೀಡಿತ ಇಂದಿನ ಪ್ರಪಂಚದಲ್ಲಿ ಭಗವಾನ್ ಬುದ್ಧನ ಅವರ ವಿಚಾರಧಾರೆಗಳೇ ಪರಿಹಾರ. ಡಾ.ಬಿಆರ್ ಅಂಬೇಡ್ಕರ್ ಕಣ್ಣಿನಲ್ಲಿ ಬುದ್ಧನ ವಿಚಾರಧಾರೆ ಕಾಣಬಹುದು. ಅಂಬೇಡ್ಕರ್ ಕೇವಲ ರಾಜಕೀಯಕ್ಕೆ ಸಂವಿಧಾನ ನೀಡಿಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ಸಮಾರಂಭವನ್ನು ಕೇಂದ್ರ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್ ಉದ್ಘಾಟಿಸಿದರು. ಸಿಡಿಎ ಅಧ್ಯಕ್ಷ ಮಂಜೇಗೌಡ, ಭಾರತೀಯ ಬುದ್ಧ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಮೊದಲಾದವರಿದ್ದರು.
ಚೀನಾ ಸೇರಿದಂತೆ ವಿಶ್ವದ ಹಲವು ದೇಶದಲ್ಲಿ ದೊಡ್ಡ ದೊಡ್ಡ ಬುದ್ಧನ ವಿಗ್ರಹ ಸ್ಥಾಪಿಸಲಾಗಿದೆ. ವಿಗ್ರಹಕ್ಕೆ ಮಾತ್ರವಲ್ಲಿ ವಿಚಾರಧಾರೆಗಳಿಗೆ ಶಕ್ತಿ ಇದೆ. ಮುಂದಿನ ಪೀಳಿಗೆ ಅವರ ವಿಚಾರಧಾರೆ ತಿಳಿಸುವ ಮೂಲಕ ಉಳಿಸಿ ಬೆಳೆಸುವ ಕೆಲಸ ಮಾಡೋಣ.