ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಯ ನಕಲುಗಳ ವಿತರಣೆ ಶುಲ್ಕಗಳನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಯ ನಕಲುಗಳ ವಿತರಣೆ ಶುಲ್ಕಗಳನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ.
ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತರಿಂದ ಸೂತ್ತೋಲೆ ಹೊರಡಿಸಲಾಗಿದ್ದು, ಇಲಾಖೆಯಲ್ಲಿ ವಿತರಿಸಲಾಗುತ್ತಿರುವ ವಿವಿಧ ನಮೂನೆಯ ನಕಲುಗಳನ್ನು ಪರಿಷ್ಕೃತ ದರಗಳಂತೆ ಯಾವ ನಮೂನೆಗೆ ಎಷ್ಟು ದರ ವಸೂಲು ಮಾಡಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
ಪರಿಷ್ಕೃತ ದರಗಳ ವಿವರ:
ಪ್ರತಿ ಸರ್ವೆ/ಹಿಸ್ಸಾ ನಂಬರಿನ ಟಿಪ್ಪಣಿ ಅಥವಾ ಅಟ್ಲಾಸ್ ನಕಲು ಪ್ರತಿಗೆ ₹35, ಪ್ರತಿ ಸರ್ವೆ/ಹಿಸ್ಸಾ ನಂಬರಿನ, ಕರ್ದಾ ಉತಾರ ಅಥವಾ ಖರಾಬು ಉತಾರ ಅಥವಾ ನೀರಿನ ಆಶ್ರಯದ ವಿವರದ ನಕಲಿಗೆ ₹35, ನಕಾಶೆಯಲ್ಲಿ ಹೊರಡಿಸಲಾದ ಪ್ರತಿ ಸರ್ವೆ ನಂಬರಿನ ನಕಲಿಗೆ ₹10, ಪ್ರತಿ ಸರ್ವೆ/ಹಿಸ್ಸಾ ನಂಬರಿನ ಕೆರೆ ಮಜಕೂರು ಪ್ರತಿಗೆ ₹35 ನಿಗದಿ ಮಾಡಲಾಗಿದೆ.
ಉಳಿದಂತೆ ನೋಟಿಸು ಕಾಪಿ, ಅರ್ಜಿಯ ನಕಲು, ಹೇಳಿಕೆ, ಮಹಜರು ಕಾಪಿ ಪ್ರತಿ ಒಂದು ಪುಟಕ್ಕೆ ₹10, ಪ್ರತಿ ಸರ್ವೆ ನಂಬರ್, ಹಿಸ್ಸಾ ನಂಬರಿನ ಆಕಾರ ಬಂದು ನಕಲಿಗೆ ₹20, ಪ್ರತಿ ಒಂದು ಸರ್ವೆ ನಂಬರ್, ಹಿಸ್ಸಾ, ನಗರ ಸರ್ವೆ ನಂಬರಿನ ಹದ್ದುಬಸ್ತು ಸ್ಕೆಚ್ ಅಥವಾ ಪಿ.ಟಿ. ಶೀಟ್ ನಕಲಿಗೆ ₹35, ಆದೇಶ ನಕಲು ಪ್ರತಿಗೆ ಪ್ರತಿ 100 ಪದಗಳಿಗೆ ₹10, 100 ಪದಗಳ ನಂತರದ ₹10, ಆದೇಶಕ್ಕೆ ಅನ್ವಯಿಸುವ ನಕ್ಷೆ ಇದ್ದರೆ ಪ್ರತಿ ಸರ್ವೆ ನಂಬರ್, ಹಿಸ್ಸಾ ನಂಬರಿಗೆ ಹೆಚ್ಚುವರಿ ಶುಲ್ಕ ₹35 ಹಾಗೂ ಪ್ರತಿ ಒಂದು ಹಿಸ್ಸಾ ನಂಬರಿನ ಬಾಬ್ತು ತಯಾರಿಸಿದ ಆರ್‌ಆರ್ ಪಕ್ಕಾ ಬುಕ್ಕಿನ ನಕಲಿಗೆ ₹35 ಸೇರಿ ವಿವಿಧ ನಕಲು ಪ್ರತಿಗಳ ಪರಿಷ್ಕೃತ ದರಗಳ ವಿವರ ತಿಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.