ಹೋರಾಟದ ಮನೋಭಾವ ಬೆಳೆಸಿಕೊಳ್ಳಿ

KannadaprabhaNewsNetwork |  
Published : Oct 07, 2024, 01:32 AM IST
ನಾಡು-ನುಡಿ ನೆಲ ಜಲಕ್ಕಾಗಿ ಜಯ ಕರ್ನಾಟಕ ಸಂಘಟನೆ ಸದಾ ಸಿದ್ಧ: ದಾಶ್ಯಾಳ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನೆಲ,ಜಲ, ಭಾಷೆಗೆ ಧಕ್ಕೆ ಬಂದಾಗ ಹೋರಾಟ ಮಾಡುವ ಮನೋಭಾವವನ್ನು ಪ್ರತಿಯೊಬ್ಬ ಕನ್ನಡಿಗರು ಬೆಳೆಸಿಕೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನೆಲ,ಜಲ, ಭಾಷೆಗೆ ಧಕ್ಕೆ ಬಂದಾಗ ಹೋರಾಟ ಮಾಡುವ ಮನೋಭಾವವನ್ನು ಪ್ರತಿಯೊಬ್ಬ ಕನ್ನಡಿಗರು ಬೆಳೆಸಿಕೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಹೇಳಿದರು.ತಾಲೂಕಿನ ಕಡ್ಲೇವಾಡ(ಪಿಸಿಎಚ್) ಗ್ರಾಮದಲ್ಲಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕ ಉದ್ಘಾಟನೆ ವೇಳೆ ಮಾತನಾಡಿ, ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಾನಿಧ್ಯವನ್ನು ಇಟ್ಟಗಿ-ಸಾತಿಹಾಳ ಹಿರೇಮಠ ಶಾಖೆಯ ಭೂ ಕೈಲಾಸ ಮೇಲುಗದ್ದೆಗೆಯ 1008 ಶ್ರೀ ಷ.ಬ್ರ.ಡಾ. ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕನ್ನಡಪರ ಸಂಘಟನೆಗಳು ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಂಘಟನೆಯ ತಾಲೂಕು ಅಧ್ಯಕ್ಷ ಸಿದ್ರಾಮಪ್ಪ ಅವಟಿ ವಹಿಸಿದ್ದರು. ಧ್ವಜಾರೋಹಣವನ್ನು ವಿಜಯಪುರದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಶರಣಗೌಡ ಬಿರಾದಾರ ನೆರವೇರಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರ ನಾನಾಗೌಡ ಬಿರಾದಾರ ಪ್ರಸಾದ ಸೇವೆ ಸಲ್ಲಿಸಿದರು. ಈ ವೇಳೆ ಅಣ್ಣರಾಯ ಹಳ್ಳಿ, ನಾಗರಾಜ ಕಬಾಡಗಿ, ಅಶೋಕ ಪಟ್ಟಣ, ಸಿದ್ದರಾಜ ಹೋಳಿ, ಪಿಂಟು ಗೊಬ್ಬರ, ಮುಕ್ಕಾದಾಸ ಇನಾಮದ್ದಾರ, ಚನ್ನಪ್ಪಗೌಡ ಬಿರಾದಾರ, ರಿಯಾಜ್‌ ಪಾಂಡು, ಶಿವರಾಜಗೌಡ ಪಾಟೀಲ, ಆನಂದ ಹೊನ್ನೂರ, ವಿರೇಶ ಪಾಟೀಲ, ಶರಣು ಹೂಗಾರ, ಸಂತೋಷ ಮನಗೂಳಿ, ಬಸವರಾಜ ಶಿಂಗನಳ್ಳಿ, ಸೋಮಲಿಂಗ ನಾಯ್ಕೋಡಿ, ನಿಂಗರಾಜ ಗೊರಗುಂಡಗಿ, ಮಾಂತೇಶ ಇಂಗಳೇಶ್ವರ, ರಮೇಶ ರಾಠೋಡ, ನಾಗಣ್ಣ ಪಡೇಕನೂರ ಸೇರಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!