ರಾಮನಗರ: ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದು ಒಂದೂವರೆ ದಶಕದಿಂದ ಅತಂತ್ರರಾಗಿದ್ದ ನಿವೇಶನದಾರರನ್ನು ಕಾನೂನು ತೊಡಕುಗಳಿಂದ ಹೊರತಲು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಪ್ರತಿ ಚದುರ ಅಡಿಗೆ 200 ರುಪಾಯಿನಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಬಡಾವಣೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹಾಗೂ ಮಾಲೀಕರಿಗೆ ಶುದ್ಧಕ್ರಯ ಪತ್ರ ಹಾಗೂ ಇ-ಖಾತೆಗಳನ್ನು ವಿತರಿಸಲು ಸರ್ಕಾರ ಸೂಚಿಸಿದೆ. ಇದಕ್ಕೆ 1800ಕ್ಕೂ ಅಧಿಕ ನಿವೇಶನ ಮಾಲೀಕರ ಪೈಕಿ ಬಹುತೇಕ ಮಂದಿ ಶಾಸಕ ಇಕ್ಬಾಲ್ ಹುಸೇನ್ ಅವರು ಕರೆದಿದ್ದ ಸಭೆಯಲ್ಲಿ ಸಮ್ಮತಿ ಸೂಚಿಸಿದ್ದರು.
ಅದರಂತೆ ಪ್ರಾಧಿಕಾರದ ನಿವೇಶನ ಮಾಲೀಕರು ಅಭಿವೃದ್ಧಿ ಶುಲ್ಕ ಪಾವತಿಸಲು ಮುಂದಾಗಿದ್ದಾರೆ. ಈವರೆಗೆ 25ಕ್ಕೂ ಅಧಿಕ ಮಂದಿ ಡಿಡಿ ಮೂಲಕ ಅಭಿವೃದ್ಧಿ ಶುಲ್ಕ ಪಾವತಿಸಿದ್ದಾರೆ. ಇವರಿಗೆ 10 ದಿನದೊಳಗೆ ಖಾತೆಗಳನ್ನು ನೀಡಲು ಅಗತ್ಯ ಪ್ರಕ್ರಿಯೆಗಳನ್ನು ಪ್ರಾಧಿಕಾರ ಕೈಗೊಂಡಿದೆ.ಪ್ರತಿನಿತ್ಯ ನಿವೇಶನ ಮಾಲೀಕರು ಪ್ರಾಧಿಕಾರದ ಕಚೇರಿಗೆ ಬಂದು ಪಾವತಿ ಮೊತ್ತ, ಪಾವತಿ ವಿಧಾನ ಹಾಗೂ ಒದಗಿಸಬೇಕಾದ ದಾಖಲೆಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಹತ್ತಾರು ನಿವೇಶನ ಮಾಲೀಕರು ಪ್ರಾಧಿಕಾರದ ಕಚೇರಿಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿವೃದ್ಧಿ ಶುಲ್ಕ ಪಾವತಿಸಿದವರಿಗೆ ಮುಂದಿನ ವಾರ ಖಾತೆಗಳನ್ನು ವಿತರಿಸಲಾಗುತ್ತಿದ್ದು, ಬಡಾವಣೆಗಳ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.
ಕೋಟ್ .................
- ಚಂದ್ರು, ಪ್ರಾಧಿಕಾರ ಬಡಾವಣೆ ನಿವೇಶನದಾರರು
ಅತಂತ್ರ ಸ್ಥಿತಿಯಲ್ಲಿದ್ದ ಪ್ರಾಧಿಕಾರದ ನಿವೇಶನಗಳ ಕಾನೂನು ತೊಡಕುಗಳನ್ನು ಸಚಿವ ಸಂಪುಟದ ನಿರ್ಣಯದ ಮೂಲಕ ನಮ್ಮ ಸರಕಾರ ಬಗೆಹರಿಸಿದೆ. ಮಾಜಿ ಸಂಸದರಾದ ಡಿ.ಕೆ.ಸುರೇಶ್, ಶಾಸಕರಾದ ಇಕ್ಬಾಲ್ ಹುಸೇನ್, ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಶೀಘ್ರದಲ್ಲೆ ಅಭಿವೃದ್ಧಿ ಶುಲ್ಕ ಪಾವತಿಸಿದ ನಿವೇಶನ ಮಾಲೀಕರಿಗೆ ಖಾತೆ ಹಸ್ತಾಂತರಿಸಲಾಗುವುದು.
ಕೋಟ್..........
-ಶಿವನಂಕರೀ ಗೌಡ, ಆಯುಕ್ತರು,
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಚೇತನ್ ಕುಮಾರ್ ರವರು ನಿವೇಶನದಾರರಿಂದ ಅಭಿವೃದ್ಧಿ ಶುಲ್ಕದ ಡಿಡಿ ಸ್ವೀಕರಿಸುತ್ತಿರುವುದು.