ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಭೂಕುಸಿತ ಸಂಭವಿಸಿರುವ ಕೊಲ್ಲಹಳ್ಳಿಗೆ ಸಚಿವರು ಭೇಟಿ ನೀಡಿದ ನಂತರ ಡೊಡ್ಡತಪ್ಲೆ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗೂ ಹೆಚ್ವಿನ ಕಾಲ ಪರಿಶೀಲನೆ ನಡೆಸಿದ ಸಚಿವರು ಸಂಜೆ ನಾಲ್ಕು ಗಂಟೆಗೆ ಸ್ಥಳದಿಂದ ತೆರಳಿದ್ದರು. ಅದರೆ ಸಂಜೆ 6.30ಕ್ಕೆ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿದಿದ್ದು, ಭೂ ಕುಸಿತದ ಸಮಯದಲ್ಲಿ ಅದೇ ದಾರಿನಲ್ಲಿ ತೆರಳುತ್ತಿದ್ದ ನಾಲ್ಕು ಕಂಟೇನರ್ ಲಾರಿಗಳು ಮಣ್ಣಿನಲ್ಲಿ ಸಿಲುಕಿದ್ದು ಒಂದು ಕಂಟೇನರ್ ಲಾರಿ ಪ್ರಪಾತಕ್ಕೆ ಜಾರುವ ಹಂತದಲ್ಲಿದೆ. ಲಾರಿ ಚಾಲಕರು ಹಾಗೂ ನಿರ್ವಾಹಕರನ್ನು ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಬಂದ್ ಆಗಿದೆ. ಹೆದ್ದಾರಿ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.