ದೊಡ್ಡ ಗೋಷ್ಠಿಗಳು, ಭಾಷಣ ಮಾತ್ರ ಭಾಷೆ ಬೆಳೆಸುವುದಿಲ್ಲ: ಪತ್ರಕರ್ತ ಜಿ.ಯು. ಭಟ್‌

KannadaprabhaNewsNetwork |  
Published : Oct 24, 2026, 02:45 AM IST
‘ನಮ್ಮೊಳಗಿನ ನಕ್ಷತ್ರಗಳು’ ಸಾಹಿತಿ-ಮಾಹಿತಿ ಕಾರ್ಯಕ್ರಮವನ್ನು ಪತ್ರಕರ್ತ ಜಿ.ಯು. ಭಟ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಹಿತ್ಯದ ಮೇಲಿನ ಅವರ ಅಭಿಮಾನಕ್ಕೆ ನಾವೆಲ್ಲರೂ ಕೈಜೋಡಿಸಿ, ಸ್ಥಳೀಯ ಸಾಹಿತಿಗಳ ಸಾಧನೆಗಳನ್ನು ಗುರುತಿಸುವ ಈ ಪ್ರಯತ್ನವನ್ನು ಬೆಂಬಲಿಸಬೇಕು.

ಹೊನ್ನಾವರ: ದೊಡ್ಡ ಗೋಷ್ಠಿಗಳು, ಭಾಷಣಗಳು ಮಾತ್ರ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಾಕಾಗುವುದಿಲ್ಲ. ಸಣ್ಣ, ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕವೂ ಸಾಹಿತ್ಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಕೆಲಸ ಮಾಡಲು ಸಾಧ್ಯವಿದೆ. ಸ್ಥಳೀಯ ಸಾಹಿತಿಗಳನ್ನು ಗುರುತಿಸಿ, ಅವರ ಸಾಹಿತ್ಯದ ಕೊಡುಗೆಯನ್ನು ಜನರಿಗೆ ಪರಿಚಯಿಸುವ ಇಂತಹ ಪ್ರಯತ್ನಗಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಲಿವೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಹೇಳಿದರು.

ಪಟ್ಟಣದ ನಮ್ಮನೆ ಭಟ್ಟರ ಹೋಟೆಲ್‌ನಲ್ಲಿ ಸತ್ವಾಧಾರ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ನಮ್ಮೊಳಗಿನ ನಕ್ಷತ್ರಗಳು’ ಸಾಹಿತಿ- ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮ ಸಂಘಟಕ ತಿಗಣೇಶ ಮಾಗೋಡು ಅವರ ಸಾಹಿತ್ಯ ಪ್ರೀತಿಯನ್ನು ಶ್ಲಾಘಿಸಿದ ಅವರು, ಇಂತಹ ಸಾಹಿತ್ಯಿಕ ಚಟುವಟಿಕೆಗಳಿಗೆ ಅವರ ಪತ್ನಿ ಹಾಗೂ ಪುತ್ರರೂ ಸಹಕಾರ ನೀಡುತ್ತಿರುವುದು ಸಂತಸದ ಸಂಗತಿ. ಸಾಹಿತ್ಯದ ಮೇಲಿನ ಅವರ ಅಭಿಮಾನಕ್ಕೆ ನಾವೆಲ್ಲರೂ ಕೈಜೋಡಿಸಿ, ಸ್ಥಳೀಯ ಸಾಹಿತಿಗಳ ಸಾಧನೆಗಳನ್ನು ಗುರುತಿಸುವ ಈ ಪ್ರಯತ್ನವನ್ನು ಬೆಂಬಲಿಸಬೇಕು. ದೊಡ್ಡ ವೇದಿಕೆಗಳಿಗಿಂತಲೂ ಜನರ ನಡುವೆ ನೇರವಾಗಿ ನಡೆಯುವ ಇಂತಹ ಸಣ್ಣ ಕಾರ್ಯಕ್ರಮಗಳು ಸಾಹಿತ್ಯಾಸಕ್ತರಲ್ಲಿ ಹೆಚ್ಚಿನ ಪರಿಣಾಮ ಮೂಡಿಸಬಲ್ಲವು ಎಂದರು.ಇದೇ ಸಂದರ್ಭದಲ್ಲಿ ಡಾ. ಜಿ.ಎಲ್. ಹೆಗಡೆ ಅವರ ಸಾಹಿತ್ಯಿಕ ಸಾಧನೆಗಳು ಹಾಗೂ ಕೊಡುಗೆಗಳನ್ನು ಪರಿಚಯಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಜಿ.ಎಲ್. ಹೆಗಡೆ, ಜನರಲ್ಲಿ ಓದುವ ಆಸಕ್ತಿಯನ್ನು ಮೂಡಿಸುವ ಕೆಲಸ ಇಂದು ಅಗತ್ಯವಾಗಿದೆ. ಸಾಹಿತ್ಯದ ಬೆಳವಣಿಗೆಗೆ ಸಾಹಿತಿ- ಮಾಹಿತಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ರೋಹಿದಾಸ ನಾಯ್ಕ ಮಾತನಾಡಿ, ಪುಸ್ತಕ ಓದುವ ಹವ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಓದು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜತೆಗೆ ಚಿಂತನಾ ಶಕ್ತಿಯನ್ನು ಬೆಳೆಸುತ್ತದೆ ಎಂದರು.ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಸಾಹಿತಿಗಳು ಕೇವಲ ಮಾತುಗಳಿಗೆ ಸೀಮಿತರಾಗದೆ, ತಮ್ಮ ನುಡಿಗೆ ತಕ್ಕಂತೆ ನಡೆದುಕೊಳ್ಳುವ ಅರಿವು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಸಂಘಟಕ ತಿಗಣೇಶ ಮಾಗೋಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸತ್ವಾಧಾರ ಫೌಂಡೇಶನ್‌ನ ಗಣೇಶ ಜೋಶಿ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್. ಗೌಡ ವಂದಿಸಿದರು. ರವೀಂದ್ರ ಭಟ್ಟ ಸೂರಿ ಸಹಕರಿಸಿದರು. ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ ಸೇರಿದಂತೆ ವಿವಿಧ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು