ಕನ್ನಡಪ್ರಭ ವಾರ್ತೆ ಮಾಲೂರುಪುರಸಭಾ ವ್ಯಾಪ್ತಿಯ ನಾಗರಿಕರ ಬಹುದಿನಗಳ ಬೇಡಿಕೆಯಾದ ಅನಧಿಕೃತ ಬಡಾವಣೆಗಳ ನಿವೇಶನಗಳ ಖಾತೆ ಸಮಸ್ಯೆ ಪರಿಹರಿಸಲು ಸರ್ಕಾರ ಒಂದೇ ಬಾರಿ ಮೇ ೧೦ ರವರೆಗೆ ಅಧಿಕೃತ ಬಡಾವಣೆಗಳ ಇ-ಖಾತೆ ಅನಧಿಕೃತ ಬಡಾವಣೆಗಳ ಬಿ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ನಾಗರಿಕರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದಲ್ಲಿ ಪಟ್ಟಣದ ಪುರಸಭೆಯಲ್ಲಿ ಇ-ಖಾತಾ ಹಾಗೂ ಬಿ ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 7 ದಿನಗಳಲ್ಲಿ ಆದೇಶ ಪ್ರತಿ
ಇಲ್ಲಿನ ಪುರಸಭೆಯು ಇ-ಖಾತೆ ಹಾಗೂ ಬಿ ಖಾತೆ ಅಭಿಯಾನ ಹಮ್ಮಿಕೊಂಡಿದ್ದು, ನಿವೇಶನ ಹೊಂದಿರುವ ಫಲಾನುಭವಿಗಳು ಈ ಖಾತೆ ಅಥವಾ ಬಿ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದ ೭ ದಿನಗಳಲ್ಲಿ ಪುರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಆದೇಶದ ಪ್ರತಿ ನೀಡಲಿದೆ. ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೬,೩೩೯ ಖಾತೆಗಳಿವೆ ಎಂದರು.ಕಸ ವಿಲೇವಾರಿ ಘಟಕ
ಪಟ್ಟಣದ ಸ್ವಚ್ಛತೆಗಾಗಿ ಈಗಾಗಲೇ ಕಸ ವಿಲೇವಾರಿ ಘಟಕ ಪ್ರಾರಂಭಿಸಿದ್ದು, ಮಾರಿಕಾಂಬ ಟ್ರಸ್ಟಿ ಆಟೋ ಟಿಪ್ಪರ್‌ಗಳನ್ನು ಪುರಸಭೆಗೆ ಕೊಡುಗೆಯಾಗಿ ನೀಡುತ್ತಿದ್ದಾರೆ, ಆಟೋ ಟಿಪ್ಪರ್‌ಗಳು ಬಂದ ನಂತರ ಪಟ್ಟಣದಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಘಟಕಕ್ಕೆ ರವಾನಿಸುವ ಮೂಲಕ ಪಟ್ಟಣದ ಸ್ವಚ್ಛತೆ ಕಾಪಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ್, ತಹಸೀಲ್ದಾರ್ ಎಂ.ವಿ.ರೂಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ನಹಿಮ್ ಉಲ್ಲಾ, ಪುರಸಭಾ ಸದಸ್ಯ ಇಮ್ತಿಯಾಜ್ ಖಾನ್, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್, ಕಂದಾಯ ಅಧಿಕಾರಿ ರೇಣುಕಾ, ಕಂದಾಯ ನಿರೀಕ್ಷಕ ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಇದ್ದರು.