ಜಗಳೂರು: ಶಾಸಕ ಬಿ.ದೇವೇಂದ್ರಪ್ಪ ಗುರುವಾರ ೨೦೨೬ನೇ ಹೊಸ ವರ್ಷದ ಹಿನ್ನೆಲೆ ವಾಲ್ಮೀಕಿ ಭವನದಲ್ಲಿ ''''ನೊಂದವರಿಗೆ ನೆರವು'''' ವಿನೂತನ ಕಾರ್ಯಕ್ಕೆ ತಮ್ಮ ವೇತನದಲ್ಲಿ ೧.೨೬ ಲಕ್ಷ ರು. ದೇಣಿಗೆ ನೀಡುವ ಮೂಲಕ ಚಾಲನೆ ನೀಡಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವಿನ ಹಸ್ತ ಚಾಚಿದರು.
ಈ ವೇಳೆ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನನಗೆ ಮತ್ತಿಬ್ಬರು ಮಹಾನ್ ವ್ಯಕ್ತಿಗಳಾದ ಕನಕ ದಾಸರು, ಪುರಂದರ ದಾಸರು ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದ ಅವರು, ಈ ವಿನೂತ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶ ಸಮಾಜದಲ್ಲಿ ಇರುವ ಬಡವರು, ನಿರ್ಗತಿಕರು, ಪೋಷಕರಿಲ್ಲದ ಮಕ್ಕಳು, ಅಂಗವಿಕಲರು, ಸರಕಾರಿ ಶಾಲೆಯಲ್ಲಿ ಓದುವ ಪ್ರತಿಭಾವಂತ ಮಕ್ಕಳನ್ನು ಮೇಲೆತ್ತಿ ಸತ್ಕಾರಿಸುವುದಕ್ಕೆ ಎಂದರು.
ನಾನೂ ದಾಸರಂತೆ ಭಿಕ್ಷಾಟನೆ ಮಾಡಿ ಉಳ್ಳವರ ಬಳಿ ಕೇಳುತ್ತೇನೆ. ಈ ಕಾರ್ಯಕ್ಕೆ ಮನಃಪೂರ್ವಕವಾಗಿ ಯಾರು ಬೇಕಾದರೂ ಸಹಾಯ ಮಾಡಬಹದು. ಇಂತಿಷ್ಟೇ ಕೊಡಿ ಎಂದು ಕೇಳಲ್ಲ. ಕೊಟ್ಟ ಹಣವನ್ನು ಪಾರದರ್ಶಕವಾಗಿ ಸಾಹಿತಿ ಎನ್.ಟಿ.ರ‍್ರಿಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ ಬ್ಯಾಂಕ್ ಅಕೌಂಟ್ ತೆರೆದು ಕಷ್ಟದಲ್ಲಿರುವ ನಾಗರಿಕರಿಗೆ ನೆರವಾಗುತ್ತೇವೆ ಎಂದರು.ಇಂದು ಒಂದೇ ದಿನ ೫.೭೦,೩೦೦ ರು. ಹಣ ದೇಣಿಗೆ ರೂಪದಲ್ಲಿ ಸಂಗ್ರವಾಗಿದೆ. ಈ ಹಣವನ್ನು ಅಂಗವಿಕಲರಿಗೆ, ರೋಗಕ್ಕೆ ಒಳಗಾದ ಎಲ್ಲ ಸಮುದಾಯದ ಜನರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಶೋಚನೀಯ ಬದುಕು ಸಾಗಿಸುತ್ತಿರುವವರಿಗೆ ಮೀಸಲಿಟ್ಟು ಏಳು ಜನರ ಸಮಿತಿಯಿಂದ ಪರಿಶೀಲಿಸಿ ಕೊಡುವಂತ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಬ್ರಾಹ್ಮಣ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಈ ವಿನೂತಿನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ಕೆ ನಾನೂ ೧ ಲಕ್ಷ ರು. ದೇಣಿಗೆ ನೀಡುತ್ತಿದ್ದೇನೆ ಎಂದರು.ಕಾರ್ಯಕ್ರಮದಲ್ಲಿ ನೇರ್ಲಗುಂಟೆ ತಿಪ್ಪೇಸ್ವಾಮಿ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಮಾಜಿ ಅಧ್ಯಕ್ಷ ಕೆ.ಪಿ.ಪಾಲಯ್ಯ, ಸಿ.ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಕೆ.ತಿಪ್ಪೇಸ್ವಾಮಿ, ಜಿ.ಎಸ್.ಸುಭಾಷ್ ಚಂದ್ರಬೋಸ್, ಎ.ಪಾಲಯ್ಯ, ಕಲ್ಲೇಶ್ ರಾಜ್‌ಪಟೇಲ್, ದೀಪಕ್ ಪಟೇಲ್, ಓಮಣ್ಣ, ತಿಪ್ಪೇಸ್ವಾಮಿಗೌಡ, ಶಿವನಗೌಡ್ರು, ಬಿ,ಮಹೇಶ್ವರಪ್ಪ, ಸರಕಾರಿ ನೌ ಸಂಘದ ಅಧ್ಯಕ್ಷ ಎ.ಎಲ್.ತಿಪ್ಪೇಸ್ವಾಮಿ, ವಕೀಲ ಸಂಘದ ಅಧ್ಯಕ್ಷ ಬಸವರಾಜ್, ಮಹೇಶ್ವರಪ್ಪ, ಶಕೀಲ್ ಅಹಮದ್, ಷಂಷೀರ್ ಅಹಮದ್, ಲೋಕೇಶ್ ಎಂ.ಐಹೊಳೆ ಮತ್ತಿತರರಿದ್ದರು.