ಅಂಕೋಲಾದಲ್ಲಿ ಗಣರಾಜ್ಯೋತ್ಸವ ಕಪ್ ಪಂದ್ಯಾವಳಿಗೆ ಚಾಲನೆ

KannadaprabhaNewsNetwork |  
Published : Jan 26, 2025, 01:33 AM IST
ಗಣರಾಜ್ಯೋತ್ಸವ ಕಪ್ ಕ್ರೀಡಾಂಗಣವನ್ನು ಸಿಪಿಐ ಚಂದ್ರಶೇಖರ ಮಠಪತಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಅನೇಕ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಅಂಕೋಲಾದ ಪತ್ರಕರ್ತರ ಸಂಘ ಅನೇಕ ಸವಾಲುಗಳ ನಡುವೆ ಪಂದ್ಯಾವಳಿ ಆಯೋಜಿಸುತ್ತ ಬಂದಿದೆ.

ಅಂಕೋಲಾ: ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆಯ ಸಿಬ್ಬಂದಿ ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡ ಸಂಘ- ಸಂಸ್ಥೆಗಳಲ್ಲಿ ಹೊಸ ಚೈತನ್ಯ ಮತ್ತು ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ಅಂಕೋಲಾದ ಪತ್ರಕರ್ತರ ಸಂಘ ಕಳೆದ 14 ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ತಹಸೀಲ್ದಾರ್‌ ಅನಂತ ಶಂಕರ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಶುಕ್ರವಾರ ಇಲ್ಲಿಯ ಜೈಹಿಂದ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಗಣರಾಜ್ಯೋತ್ಸವ ಕಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಸಿಪಿಐ ಚಂದ್ರಶೇಖರ ಮಾತನಾಡಿ, ಬಹುಶಃ ಜಿಲ್ಲೆಯಲ್ಲಿಯೆ ವಿನೂತನ ಕಲ್ಪನೆಯೊಂದಿಗೆ ಡಾ. ಉದಯಕುಮಾರ ಶೆಟ್ಟಿ ಹಾಗೂ ಸಿಪಿಐ ಜಯರಾಜ್ ಅವರು ಈ ಪಂದ್ಯಾವಳಿ ಹುಟ್ಟು ಹಾಕಿ ಹೊಸದೊಂದು ಅಧ್ಯಾಯ ಬರೆದಿದ್ದಾರೆ. ಅದನ್ನು ಪತ್ರಕರ್ತರ ಸಂಘ ವ್ಯವಸ್ಥಿತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಮಾತನಾಡಿ, ಅನೇಕ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಅಂಕೋಲಾದ ಪತ್ರಕರ್ತರ ಸಂಘ ಅನೇಕ ಸವಾಲುಗಳ ನಡುವೆ ಪಂದ್ಯಾವಳಿ ಆಯೋಜಿಸುತ್ತ ಬಂದಿದೆ. ಇದಕ್ಕೆ ಅಂಕೋಲಾ ಪತ್ರಕರ್ತರ ಕ್ರಿಯಾಶೀಲತೆಯೆ ಸಾಕ್ಷಿಯಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ, ನ್ಯಾಯವಾದಿ ಉಮೇಶ ನಾಯ್ಕ, ಗೃಹರಕ್ಷಕ ದಳದ ಘಟಕಾಧಿಕಾರಿ ವಿನೋದ ಶಾನಭಾಗ, ಕರ್ನಾಟಕ ಸಂಘದ ಅಧ್ಯಕ್ಷ ಮಹಾಂತೇಶ ರೇವಡಿ ಮಾತನಾಡಿದರು. ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಸ್ವಾಗತಿಸಿದರು. ಪತ್ರಕರ್ತರಾದ ನಾಗರಾಜ ಜಾಂಬಳೇಕರ, ವಾಸುದೇವ ಗುನಗಾ, ದಿನಕರ ನಾಯ್ಕ, ಅನುಪ ಗುನಗಾ ಉಪಸ್ಥಿತರಿದ್ದರು. ಮೋಹನ ದುರ್ಗೇಕರ ವಂದಿಸಿದರು.ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ ಇಂದು

ಶಿರಸಿ: ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನವನ್ನು ಜೀವನ್ಮುಖಿ ಹಾಗೂ ನಾವು ನೀವು ಬಳಗದ ಆಶ್ರಯದಲ್ಲಿ ಜ. ೨೬ರಂದು ಸಂಜೆ ೬ ಗಂಟೆಗೆ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಆಯೋಜಿಸಲಾಗಿದೆ ಎಂದು ರಂಗ ನಿರ್ದೇಶಕ ರಮಾನಂದ ಐನಕೈ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಡ್ಡಂಡ ಕಾರ್ಯಪ್ಪನವರ ಸತ್ಯವನ್ನೇ ಹೇಳುತ್ತೇನೆ ನಾಟಕ ಅದ್ಭುತವಾಗಿದ್ದು, ಯಾವ ಸಿನಿಮಾಗೂ ಕಡಿಮೆಯಿಲ್ಲದಂತೆ ನಾಟಕವನ್ನು ರೂಪಿಸಿದ್ದಾರೆ. ರಂಗಭೂಮಿಯನ್ನು ರಾಷ್ಟ್ರೀಯವಾದ ಮತ್ತು ಹಿಂದುತ್ವಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಈ ಥರ ಯೋಚಿಸಿದವರು, ಅನುಷ್ಠಾನ ಮಾಡಿದವರು ಬಲಪಂಥಿಯ ವಲಯದಲ್ಲಿ ಬಹಳ ಕಡಿಮೆ ಎಂದರು.

ಹೆಚ್ಚಿನ ವಿವರಗಳಿಗೆ ರಮಾನಂದ ಐನಕೈ(ಮೊ. ೯೪೪೯೯೧೨೨೭೦), ವಿ.ಪಿ. ಹೆಗಡೆ ವೈಶಾಲಿ(ಮೊ. ೯೮೪೫೩೫೪೦೯೫) ಹಾಗೂ ಸತೀಶ ಹೆಗಡೆ ಸಾಮ್ರಾಟ್(ಮೊ. ೯೯೦೨೭೧೦೮೫೪) ಸಂಪರ್ಕಿಸಬಹುದು. ಸುಭಾಶ್ಚಂದ್ರ ಬೋಸ್ ಕಾರ್ಯಪಡೆಯು ಸಹಕಾರ ನೀಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿ.ಪಿ. ಹೆಗಡೆ ವೈಶಾಲಿ, ಉಷಾ ಐನಕೈ, ಸತೀಶ ಹೆಗಡೆ ಸಾಮ್ರಾಟ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''