ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಸಮಿತಿ ಈ ಹಿಂದೆ ನಡೆಸಿದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ದೈವಜ್ಞರು ಉಲ್ಲೇಖಿಸಿರುವಂತೆ ಶಿವ ದೇವರಿಗೆ ಶುದ್ಧ ಎಳ್ಳೆಣ್ಣೆ ಸಮರ್ಪಣೆಯನ್ನು ಇದೀಗ ಆಡಳಿತ ಸಮಿತಿ ಕಾರ್ಯರೂಪಕ್ಕೆ ತಂದಿದೆ. ಸೋಮವಾರ ಬೆಳಗ್ಗೆ ದೇವರ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡಿ ತುಪ್ಪದ ದೀಪ ಬೆಳಗಿಸಿ ಶುದ್ಧ ಎಳ್ಳೆಣ್ಣೆ ಸಮರ್ಪಣೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಚಾಲನೆ ನೀಡಿದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಈ ಹಿಂದೆ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೈವಜ್ಞರು ಉಲ್ಲೇಘಿಸಿದ ರೀತಿಯಲ್ಲೇ ದೀಪಾವಳಿಯ ಅ.೧೮ರಂದು ಶಿವಲಿಂಗಕ್ಕೆ ಶುದ್ಧ ಎಳ್ಳೆಣ್ಣೆ ಸಮರ್ಪಣೆ ಮಾಡಲಿದ್ದಾರೆ. ಭಕ್ತರಿಗೆ ಎಳ್ಳೆಣ್ಣೆ ಸಮರ್ಪಣೆ ಅವಕಾಶಕ್ಕಾಗಿ ಸೋಮವಾರ ಚಾಲನೆ ನೀಡಲಾಗಿದೆ.ದೇವಳದ ಹಿಂದಿನ ಆಡಳಿತ ಸಮಿತಿ ನಡೆಸಿದ ಅಷ್ಟಮಂಗಲ ಪ್ರಶ್ನಾಚಿಂತನೆಯ ವಿಚಾರಗಳನ್ನು ಪುಸ್ತಕರೂಪಕ್ಕೆ ತಂದಿದ್ದರು. ಅದರಲ್ಲಿ ದೈವಜ್ಞರು ಉಲ್ಲೇಖಿಸಿರುವಂತೆ ಶಿವ ದೇವರಿಗೆ ಎಳ್ಳೆಣ್ಣೆ ಸಮರ್ಪಣೆಯನ್ನು ಇದೀಗ ಈಗಿನ ಆಡಳಿತ ಸಮಿತಿ ಕಾರ್ಯರೂಪಕ್ಕೆ ತಂದಿದ್ದಾರೆ. ಪಂಜಿಗುಡ್ಡೆ ಈಶ್ವರ ಭಟ್ ಪ್ರಥಮವಾಗಿ ಎಳ್ಳೆಣ್ಣೆ ಖರೀದಿಸಿದರು. ಇವರ ಜೊತೆ ಸಮಿತಿ ಸದಸ್ಯರು, ಭಕ್ತರು ಜೊತೆಯಲ್ಲಿ ಎಳ್ಳೆಣ್ಣೆ ಖರೀದಿಸಿ ಎಳ್ಳೆಣ್ಣೆ ಶೇಖರಣಾ ಡಬ್ಬಿಗೆ ಎರೆಯಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಹಿರಿಯರಾದ ಕಿಟ್ಟಣ್ಣ ಗೌಡ, ಶಿವರಾಮ ಆಳ್ವ, ಭಾಸ್ಕರ್ ಬಾರ್ಯ, ಗೋವರ್ಧನ್ ಕಾವೇರಿಕಟ್ಟೆ, ಗೋವಿಂದ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಅವರು ವಿಶೇಷ ಪ್ರಾರ್ಥನೆ ಮಾಡಿದರು.