ಮಂಜುನಾಥ್ ಟಿ ಎನ್.
ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದ ಲಾವಣ್ಯ ಬೋರ್ಕರ್ ಭರತನಾಟ್ಯದಲ್ಲಿ ಅಪ್ರತಿಮ ಸಾಧಕಿಯಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ.
ಈ ಗ್ರಾಮೀಣ ಸಾಧಕಿ ಕೇವಲ ಭರತನಾಟ್ಯ ಮಾತ್ರವಲ್ಲದೆ ಸೆಮಿ ಕ್ಲಾಸಿಕಲ್, ಫೋಕ್, ಜನಪದ ನೃತ್ಯಗಳಲ್ಲಿಯೂ ಮುಂದಿದ್ದು ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ.ಸಣ್ಣ ವಯಸ್ಸಿನಿಂದಲೂ ಭರತನಾಟ್ಯವನ್ನು ಕರಗತವನ್ನಾಗಿಸಿದ ಲಾವಣ್ಯ ಇಂದು ವಿರಾಜಪೇಟೆಯ ಭಾಗದಲ್ಲಿ ಸಾಧಕಿಯಾಗಿ ಜನಮನ್ನಣೆಯನ್ನು ಪಡೆದಿರುತ್ತಾಳೆ. ಲಾವಣ್ಯ ಬೋರ್ಕರ್ ಪ್ರಮುಖವಾಗಿ 2021 ರಲ್ಲಿ ಮಂಗಳೂರಿನಲ್ಲಿ ನಡೆದ 26ನೇ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾಳೆ. ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾಳೆ. ಗೋಣಿಕೊಪ್ಪಲು ಮತ್ತು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ದಸರಾ ಪ್ರಯುಕ್ತ ಅರಕಲಗೂಡು ವಿನಲ್ಲಿ ನಡೆದ ನೃತ್ಯ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡು ಪುರಸ್ಕಾರವನ್ನು ಪಡೆದಿರುತ್ತಾಳೆ. ಕಳೆದ ವರ್ಷ ಹಾವೇರಿಯಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೊಡಗಿನಿಂದ ನೃತ್ಯ ಪ್ರದರ್ಶನ ನೀಡಿದ ಕೀರ್ತಿ ಲಾವಣ್ಯಳದ್ದು.
ಹಲವಾರು ಪ್ರಶಸ್ತಿ ಪುರಸ್ಕಾರಗಳು: ಗ್ರಾಮೀಣ ಸಾಧಕಿ ಲಾವಣ್ಯ ಬೋರ್ಕರ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅದರಲ್ಲಿ ಪ್ರಮುಖವಾಗಿ ನೆಹರು ಯುವಕೇಂದ್ರ ಬೆಂಗಳೂರು ಇವರು ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು 2022ರಲ್ಲಿ ಲಾವಣ್ಯಳಿಗೆ ಲಭಿಸಿರುತ್ತದೆ. ಕರ್ನಾಟಕ ನಾಟ್ಯ ರತ್ನ ಪ್ರಶಸ್ತಿ, ಬೆಂಗಳೂರಿನ ಚಿಗುರು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡುವ ಕಲಾ ಮಾಣಿಕ್ಯ ಪ್ರಶಸ್ತಿ, 2023 ರಲ್ಲಿ ತಮಿಳುನಾಡಿನ ತಿರುಚಿಯಲ್ಲಿ ವೃಕ್ಷ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ರಾಜ್ಯ ಮಟ್ಟದ ಸುವರ್ಣ ಶ್ರೀ ಪ್ರಶಸ್ತಿ, ಮಿನುಗುತಾರೆ ರಾಷ್ಟ್ರ ಮಟ್ಟದ ಪ್ರಶಸ್ತಿ, ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಹೈ ರೇಂಜ್ ಬುಕ್ ಓಫ್ ವರ್ಲ್ಡ್ ರೆಕಾರ್ಡ್ 2024 ರಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ 108 ನೃತ್ಯ ಕಲಾವಿದರಲ್ಲಿ ಲಾವಣ್ಯ ಕೂಡ ಒಬ್ಬಳಾಗಿ ಪುರಸ್ಕಾರವನ್ನು ಪಡೆದಿರುತ್ತಾಳೆ. ಇತ್ತೀಚಿಗೆ ಕರುನಾಡ ಭೂಷಣ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾಳೆ. ಮಾತ್ರವಲ್ಲದೆ ಸ್ಥಳೀಯವಾಗಿಯೂ ಹಲವಾರು ಸಂಘ ಸಂಸ್ಥೆಗಳು ಈಕೆಯ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಇದೇ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಎನ್. ಎಸ್. ಎಸ್. ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡು ಕೊಡಗು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾಳೆ.
। ಲಾವಣ್ಯ ಬೋರ್ಕರ್, ಭರತನಾಟ್ಯ ಕಲಾವಿದೆ
-ತೃಪ್ತಿ ಬೋಪಣ್ಣ, ಪ್ರಾಂಶುಪಾಲೆ. ಸೆಂಟ್ ಆನ್ಸ್ ಪದವಿ ಕಾಲೇಜು ವಿರಾಜಪೇಟೆ.
-ಪ್ರೇಮಾಂಜಲಿ ಆಚಾರ್ಯ, ಮುಖ್ಯಸ್ಥರು ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ.