ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಉಮೇಶ

KannadaprabhaNewsNetwork |  
Published : Sep 15, 2024, 02:04 AM IST
ಗಜೇಂದ್ರಗಡ ಬಿಜೆಪಿ ಕಾರ್ಯಾಲಯದಲ್ಲಿ ಸದಸ್ಯತ್ವ ಅಭಿಯಾನ ನಿಮಿತ್ತ ಯುವ ಮೋರ್ಚಾದ ಪದಾಧಿಕಾರಿಗಳ ಸಭೆ ನಡೆಯಿತು. | Kannada Prabha

ಸಾರಾಂಶ

ಸರ್ಕಾರ ತಪ್ಪಿತ್ತಸ್ಥರ ಮೇಲೆ ಕ್ರಮಕ್ಕೆ ಮುಂದಾಗುವ ಬದಲು ರಕ್ಷಿಸಲು ಮುಂದಾದಂತೆ ಭಾಸವಾಗಲು ಕೆಲ ಸಚಿವರ ಹೇಳಿಕೆ ಕಾರಣ

ಗಜೇಂದ್ರಗಡ: ರಾಜ್ಯ ಕಾಂಗ್ರೆಸ್ ಸರ್ಕಾರವು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಶಕ್ತಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ವಿಫಲವಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾದ ರೋಣ ಮಂಡಲ ಅಧ್ಯಕ್ಷ ಉಮೇಶ ಚನ್ನುಪಾಟೀಲ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಯುವ ಮೋರ್ಚಾ ರೋಣ ಮಂಡಲದಿಂದ ಸದಸ್ಯತ್ವ ಅಭಿಯಾನದ ಅಂಗವಾಗಿ ನಡೆದ ಯುವ ಮೋರ್ಚಾದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಕೊಕ್ಕೆ ಹಾಕಿದ್ದು ಒಂದೆಡೆಯಾದರೆ, ಇತ್ತ ಹಣ ದುರ್ಬಳಿಕೆ ಹಿನ್ನೆಲೆ ಕೆಲ ಸಚಿವರು ಈಗಾಗಲೇ ರಾಜಿನಾಮೆ ನೀಡಿದ್ದಾರೆ,ಇನ್ನೂ ಕೆಲವರು ನೀಡುತ್ತಾರೆ. ವಾಲ್ಮೀಕಿ, ಮುಡಾ ಹಗರಣಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರವು ಹೆಣಗಾಡುತ್ತಿದೆ. ಅಲ್ಲದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ನೆಲಮಂಗಲದಲ್ಲಿ ನಡೆದ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರ ತಪ್ಪಿತ್ತಸ್ಥರ ಮೇಲೆ ಕ್ರಮಕ್ಕೆ ಮುಂದಾಗುವ ಬದಲು ರಕ್ಷಿಸಲು ಮುಂದಾದಂತೆ ಭಾಸವಾಗಲು ಕೆಲ ಸಚಿವರ ಹೇಳಿಕೆ ಕಾರಣವಾಗಿವೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಜನಪರ, ರೈತಪರ ಕಾರ್ಯಕ್ರಮಗಳಿಗಾಗಿ ಬಿಜೆಪಿ ಸರ್ಕಾರ ತರುವುದು ಅಗತ್ಯವಾಗಿದೆ ಎಂದರು.ದೇಶದಲ್ಲಿ ಆರಂಭವಾಗಿರುವ ಸದಸ್ಯತ್ವ ಅಭಿಯಾನದ ಭಾಗವಾಗಿ ಈಗಾಗಲೇ ೨ ಕೋಟಿ ಜನರು ಬಿಜೆಪಿ ಪಕ್ಷದ ಸದಸ್ಯತ್ವ ಹೊಂದಿದ್ದಾರೆ. ಹೀಗಾಗಿ ತಾಲೂಕಿನ ಯುವ ಮೋರ್ಚಾದ ಪ್ರತಿ ಪದಾಧಿಕಾರಿಗಳು ಕನಿಷ್ಠ ೨೫೦ ಸದಸ್ಯರನ್ನು ನೋಂದಾಯಿಸಬೇಕು. ಮುಂದಿನ ತಿಂಗಳು ಅಂತ್ಯದವರೆಗೆ ನಡೆಯುವ ಈ ಅಭಿಯಾನವು ದೇಶಕ್ಕೆ ಬಿಜೆಪಿ ಕೊಡುಗೆ ಹಾಗೂ ಪ್ರಧಾನಿ ಮೋದಿ ಆಡಳಿತ ಮತ್ತು ರೋಣ ಮತಕ್ಷೇತ್ರದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅಭಿವೃದ್ಧಿ ಕಾರ್ಯಕ್ರಮಗಳ ಜಾಗೃತಿ ಜತೆಗೆ ಪ್ರತಿ ಕಾಲೇಜುಗಳಿಗೆ ತೆರಳಿ ಸದಸ್ಯತ್ವ ಅಭಿಯಾನದ ಜಾಗೃತಿ ಮೂಡಿಸಲಾಗುವುದು ಎಂದರು.

ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಸೆ.೨ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ನಿಗದಿತ ಗುರಿ ತಲುಪಿ ಎಂದರು.

ರಾಂಪೂರ ಗ್ರಾಪಂ ಮಾಜಿ ಅಧ್ಯಕ್ಷ ಬಾಲಾಜಿರಾವ್ ಭೋಸ್ಲೆ, ಉಮೇಶ ಮಲ್ಲಾಪೂರ, ಚಂದ್ರು ಕುರಿ, ಸುರೇಶ ಚವ್ಹಾಣ, ಶಿವಕುಮಾರ ದಡ್ಡೂರ, ಸಂಗಮೇಶ ಸೊಬಗಿನ, ಕಿರಣ ಕಟ್ಟಿ, ವೀರೇಶ ಬಿಲ್ಡಂಡಗಿಮಠ ಸೇರಿ ಅನೇಕರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು