ಲೀಗ್ ಕಮ್ ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ: ಶ್ರೀರಂಗ ಕಪ್ ನಂಜನಗೂಡು ತಂಡಕ್ಕೆ

KannadaprabhaNewsNetwork |  
Published : Mar 19, 2024, 12:49 AM IST
12ಕೆಎಂಎನ್ ಡಿ18 | Kannada Prabha

ಸಾರಾಂಶ

ಶ್ರೀರಂಗ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟೂರ್ನಿಯಲ್ಲಿ ನಂಜನಗೂಡು ತಂಡ ಪ್ರಥಮ, ಕಾಲ ಭೈರವೇಶ್ವರ ಮಂಡ್ಯ ತಂಡ ದ್ವಿತೀಯ, ಸ್ಟಾರ್ ಮದ್ದೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು. ನಂಜನಗೂಡು ತಂಡದ ನವೀನ್ ಅಲಿಯಾಸ್ ನಾಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಶ್ರೀರಂಗನಾಥ ಕ್ರೀಡಾಂಗಣದಲ್ಲಿ ನಡೆದ ಲೀಗ್ ಕಮ್ ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಡ್ಯ ಹಾಗೂ ಮೈಸೂರು ವಿಭಾಗ ಮಟ್ಟದ ಶ್ರೀರಂಗ ಕಪ್ ನಂಜನಗೂಡು (ಎನ್.ಎಫ್.ಸಿ.ಸಿ) ತಂಡದ ಮಡಿಲಿಗೆ ಸೇರಿತು.

ಶ್ರೀರಂಗ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟೂರ್ನಿಯಲ್ಲಿ ನಂಜನಗೂಡು ತಂಡ ಪ್ರಥಮ, ಕಾಲ ಭೈರವೇಶ್ವರ ಮಂಡ್ಯ ತಂಡ ದ್ವಿತೀಯ, ಸ್ಟಾರ್ ಮದ್ದೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು. ನಂಜನಗೂಡು ತಂಡದ ನವೀನ್ ಅಲಿಯಾಸ್ ನಾಗ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ವಿಜೇತ ತಂಡಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಒಂದು ಲಕ್ಷ ರು ನಗದು ಅತ್ಯಾಕರ್ಷಕ ಟ್ರೋಫಿ, 50 ಸಾವಿರ ನಗದು ಆಕರ್ಷಕ ಟ್ರೋಫಿ, 25 ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.

ಟೂರ್ನಿಯಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಹುಣಸೂರು, ಮೈಸೂರು ಗ್ರಾಮಾಂತರ, ಗುಂಡ್ಲುಪೇಟೆ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿ ಗಮನ ಸೆಳೆದವು.

ತೀರ್ವ ಕುತೂಹಲದಿಂದ ಕೂಡಿದ್ದ ಪೈನಲ್ ಪಂದ್ಯದಲ್ಲಿ ನಂಜನಗೂಡು ತಂಡ ನಿಗದಿತ 5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಕಲೆಹಾಕಿತು. 48 ರನ್‌ಗಳ ಗುರಿ ಬೆನ್ನತ್ತಿದ ಮಂಡ್ಯ ತಂಡ 7 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ 12 ರನ್‌ಗಳಿಂದ ಸೋಲಪ್ಪಿಕೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ನಂತರ ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿ ಕ್ರೀಡೆಯನ್ನು ಕ್ರೀಡಾ ಸ್ಪೂರ್ತಿಯೊಂದಿಗೆ ಸ್ವೀಕರಿಸಿ ಸೋಲು- ಗೆಲುವುಗಳನ್ನು ಸಮಾನವಾಗಿ ಕಾಣುವಂತೆ ಆಟಗಾರರಿಗೆ ಕಿವಿಮಾತು ಹೇಳಿದರು.

ಆಯೋಜಕರುಗಳಾದ ಕ್ಯಾಂಟೀನ್ ಮಹದೇವು, ಸುಬ್ರಹ್ಮಣ್ಯ, ಬಾಲಣ್ಣ ಸೇರಿದಂತೆ ಇತರ ಆಟಗಾರರು ಉಪಸ್ಥಿತರಿದ್ದು, ಟೂರ್ನಿಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ