ಕನ್ನಡದ ಜೊತೆಗೆ ಇಂಗ್ಲಿಷ್‌ ಕಲಿತರೆ ಬುದ್ಧಿವಂತಿಕೆ ಹೆಚ್ಚಳ: ಶಾಸಕ ಅಶೋಕ್ ರೈ

KannadaprabhaNewsNetwork |  
Published : Jun 09, 2024, 01:34 AM IST
ಫೋಟೋ: ೮ಪಿಟಿಆರ್-ಕೆದಿಲನೂತನ ಶಾಲಾ ಕಟ್ಟಡವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಕಾಡೆಮಿ ಆಫ್ ರೂರಲ್ ಎಜುಕೇಶನ್ ಕೆದಿಲ ಇದರ ವತಿಯಿಂದ ನಿರ್ಮಾಣವಾದ ನೂತನ ಶಾಲಾ ಕಟ್ಟಡ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ. ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಅನುದಾನವನ್ನು ಕಾಯದೆ ಊರವರ ಸಹಕಾರದಿಂದ ಉತ್ತಮ ಶಾಲೆಗಳನ್ನು ನಿರ್ಮಿಸಬಹುದು. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸುವುದರಿಂದ ಮಕ್ಕಳಲ್ಲಿ ಬುದ್ಧಿವಂತಿಕೆ ಹೆಚ್ಚಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಕಾಡೆಮಿ ಆಫ್ ರೂರಲ್ ಎಜುಕೇಶನ್ ಕೆದಿಲ ಇದರ ವತಿಯಿಂದ ನಿರ್ಮಾಣವಾದ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಶಾಸಕ, ಶಾಲೆಯ ಕಟ್ಟಡ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಊರವರ ಸಹಕಾರ ಅಗತ್ಯ ಎಂದು ಹೇಳಿದರು.

ಬಂಟ್ವಾಳ ಕ್ಷೇತ್ರ ಕ್ರೀಡಾ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಕೆದಿಲ ಗ್ರಾ.ಪಂ ಅಧ್ಯಕ್ಷ ಹರೀಶ ವಾಲ್ತಾಜೆ, ಕರ್ನಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್ ಮುಖ್ಯ ನಿರ್ವಾಹಕ ಶ್ರೀಹರಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಮೇಶ್, ಕೆದಿಲ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಪೆರ್ನಾಜೆ, ವಿಶ್ರಾಂತ ಅಧ್ಯಾಪಕ, ದಾನಿ, ಕೆ.ಸುಬ್ರಾಯ ಭಟ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಗೆ ನೀರಿನ ಸೌಕರ್ಯ ಒದಗಿಸಿದ ಕೇಶವ ಪ್ರಸಾದ್ ಕೆದಿಲ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ನೂತನ ಕಟ್ಟಡಕ್ಕೆ ಕೆದಿಲ ಶಾಲೆಯ ಕಟ್ಟಡ ಸಮಿತಿಯ ಅಧ್ಯಕ್ಷ ಕೆ. ಸುಬ್ರಾಯ ಭಟ್ ಅಂಡಿಪುಣಿ 15 ಲಕ್ಷ ರು. ಸಹಾಯಧನ ನೀಡಿದರು. ಪುಂಜತ್ತೋಡಿ ಭೀಮ ಭಟ್ಟರ ಹೆಸರಿನಲ್ಲಿ ಕೊಠಡಿ ನಿರ್ಮಾಣ ಮಾಡಿ ಕೊಡಲಾಗುವುದಾಗಿ ಕೃಷ್ಣ ಮೂರ್ತಿ ಕೆದಿಲ ಘೋಷಿಸಿದರು.

ಶಾಸಕರ ಅನುದಾನದಿಂದ ಶೌಚಾಲಯ ನಿರ್ಮಾಣಕ್ಕೆ 5 ಲಕ್ಷ ರು. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ದೀಪದಿಂದ ಓರ್ವ ಶಿಕ್ಷಕರ ನೇಮಕ ಮಾಡುವುದಾಗಿ ಘೋಷಿಸಿಸಲಾಯಿತು. ಕಟ್ಟಡ ಸಮಿತಿಯ ಉಪಾಧ್ಯಕ್ಷ ಮುರಳೀಧರ ಶೆಟ್ಟಿ, ಸುಬ್ಬಣ್ಣ ಭಟ್ ಬೀಡಿಗೆ ಉಪಸ್ಥಿತರಿದ್ದರು.

ಅಕಾಡೆಮಿ ಆಫ್ ರೂರಲ್ ಎಜುಕೇಶನ್ ಟ್ರಸ್ಟ್ ಸಂಚಾಲಕ ಚಂದ್ರಶೇಖರ ಭಟ್ ಕುಕ್ಕಜೆ ಸ್ವಾಗತಿಸಿದರು. ಟ್ರಸ್ಟ್ ಕೋಶಾಧಿಕಾರಿ ಕೃಷ್ಣಮೂರ್ತಿ ವಂದಿಸಿದರು. ಕೇಶವ ಕೆದಿಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ