ತಂತ್ರಜ್ಞಾನ ಅರಿತು ಬೋಧನೆ ಮಾಡಿ: ಶಿವಶರಣ

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಬದುಕು-ಭವಿಷ್ಯ ರೂಪಿಸುವ ಹೊಣೆ ಬೋಧಕರ ಮೇಲಿದೆ.

ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಆಧಾರಿತ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರಕನ್ನಡಪ್ರಭ ವಾರ್ತೆ ಕೊಪ್ಪಳ

ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಬದುಕು-ಭವಿಷ್ಯ ರೂಪಿಸುವ ಹೊಣೆ ಬೋಧಕರ ಮೇಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ. ಗೊಳ್ಳೆ ಶಿವಶರಣ ಬಿ. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಾಧ್ವಾನಿ ಫೌಂಡೇಷನ್ ಸಹಭಾಗಿತ್ವದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ‌ನ ಪ್ಲೇಸ್‌ಮೆಂಟ್ ಸೆಲ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಎರಡು ದಿನಗಳ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಆಧಾರಿತ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಕಾಲೇಜುಗಳ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದು, ಬೋಧಕರೆಲ್ಲ ತಂತ್ರಜ್ಞಾನ ಅರಿಯಬೇಕಿದೆ. ಅದರಲ್ಲೂ ಯುವ ಬೋಧಕರು ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು. ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಕಡಿಮೆ ಇಲ್ಲದಂತೆ ಪರಿಣತಿ ಸಾಧಿಸಬೇಕಿದೆ ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ತಿಮ್ಮಾರಡ್ಡಿ ಮೇಟಿ ಮಾತನಾಡಿ, ಕೃತಕ ಬುದ್ಧಿಮತ್ತೆಯ. ಪರಿಕಲ್ಪನೆ, ಉಗಮ, ವಿಕಾಸ ಹಾಗೂ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಕಲಬುರಗಿ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಸಿಂಧೆ, ವಿಶೇಷ ಅಧಿಕಾರಿ ಡಾ. ಬಿ. ಸರೋಜಾ, ಡಾ. ಸೂರ್ಯಕಾಂತ ಉಮ್ಮಾಪುರೆ ಭಾಗವಹಿಸಿದ್ದರು. ವಾಧ್ವಾನಿ ಫೌಂಡೇಶನ್‌ನ ಮಾಸ್ಟರ್ ಟ್ರೇನರ್ ಸ್ವಾತಿ ಪುತ್ರನ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಸಂತೋಷಿಕುಮಾರಿ, ಶಿವಬಸಪ್ಪ ಮಸ್ಕಿ, ಗೋಣಿಬಸಪ್ಪ, ಮಹಮ್ಮದ್ ಶಫಿ, ಬಸವರಾಜ ಕರುಗಲ್, ಶಿವರಾಮ್, ಸ್ಥಾನಿಕರಣ ಕೋಶ ವಿಭಾಗ ಸಂಚಾಲಕ ಶಿವನಾಥ್, ಡಾ. ಸಿ.ಬಿ. ಚಿಲ್ಕರಾಗಿ, ತಳಬಾಳ ವಸತಿ ಪದವಿ ಕಾಲೇಜಿನ ಪ್ರಾಚಾರ್ಯ ಯಮನೂರಪ್ಪ, ಮಹಾಂತೇಶ ಮೈನಳ್ಳಿ, ರವಿಕಿರಣ್, ಅನುಷಾ, ಜಯಪ್ರಕಾಶ್ ಬಿರಾದಾರ್, ಸುರೇಶ, ಅಶೋಕ, ರಮೇಶ್, ಹಸನ್ ಇತರರು ಇದ್ದರು.

ಡಾ. ಭಾಗ್ಯಜ್ಯೋತಿ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಚೈತ್ರಾ ಹಾಗೂ ಅಕ್ಷತಾ ಪ್ರಾರ್ಥಿಸಿದರು. ಜ್ಞಾನೇಶ್ವರ ಪತ್ತಾರ ಸ್ವಾಗತಿಸಿ, ಡಾ. ಪ್ರಕಾಶ್ ಬಳ್ಳಾರಿ ವಂದಿಸಿದರು.

Share this article