ಜನರನ್ನು ಮೊದಲು ಮರ್ಯಾದೆಯಿಂದ ಮಾತನಾಡಿಸಲು ಕಲಿಯಿರಿ

KannadaprabhaNewsNetwork |  
Published : Aug 05, 2025, 11:45 PM IST
5ಎಚ್ಎಸ್ಎನ್12 : ಸಕಲೇಶಪುರ   ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಸಾರ್ವಜನಿಕರ ಅಹುವಾಲುಗಳನ್ನು ಆಲಿಸಿದರು. | Kannada Prabha

ಸಾರಾಂಶ

ಎಆರ್‌ಟಿಒ ಸಿಬ್ಬಂದಿ ಸಾರ್ವಜನಿಕರನ್ನು ಗೌರವದಿಂದ ಮಾತನಾಡಿಸಿದರೆ ಅರ್ಧ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕಚೇರಿಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ್ದರಿಂದ ಎ.ಆರ್‌.ಟಿ.ಒ ಕಚೇರಿಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ತಬ್ಬಿಬ್ಬಾದರೆ ಸಾರ್ವಜನಿಕ ವಲಯದಲ್ಲಿ ಸಂತೋಷ ಕಂಡುಬಂದಿತು. ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಅವಕಾಶ ನೀಡಿದ್ದರಿಂದ ಹಲವರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿದರೆ ಇನ್ನು ಹಲವರ ಸಮಸ್ಯೆಗಳು ಶೀಘ್ರದಲ್ಲಿಯೆ ಬಗೆಹರಿಯುವ ನಿರೀಕ್ಷೆಯಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎಆರ್‌ಟಿಒ ಸಿಬ್ಬಂದಿ ಸಾರ್ವಜನಿಕರನ್ನು ಗೌರವದಿಂದ ಮಾತನಾಡಿಸಿದರೆ ಅರ್ಧ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ್ದರಿಂದ ಎ.ಆರ್‌.ಟಿ.ಒ ಕಚೇರಿಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ತಬ್ಬಿಬ್ಬಾದರೆ ಸಾರ್ವಜನಿಕ ವಲಯದಲ್ಲಿ ಸಂತೋಷ ಕಂಡುಬಂದಿತು. ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರು ಅವಕಾಶ ನೀಡಿದ್ದರಿಂದ ಹಲವರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿದರೆ ಇನ್ನು ಹಲವರ ಸಮಸ್ಯೆಗಳು ಶೀಘ್ರದಲ್ಲಿಯೆ ಬಗೆಹರಿಯುವ ನಿರೀಕ್ಷೆಯಿದೆ.

ಬೇಲೂರು ಮೂಲದ ವ್ಯಕ್ತಿಯೋರ್ವರು ದಲ್ಲಾಳಿಯೋರ್ವರಿಗೆ ಕೆಲವು ತಿಂಗಳ ಹಿಂದೆಯೇ ವಾಹನವೊಂದರ ದಾಖಲಾತಿಯನ್ನು ನೀಡಿದ್ದು ಅವರು ಆ ದಾಖಲಾತಿಯನ್ನು ಎ.ಆರ್.ಟಿ.ಒ ಕಚೇರಿಗೆ ನೀಡಿದ್ದರು. ಆದರೆ ಎಆರ್‌ಟಿಒ ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗಿರುವುದರಿಂದ ಆ ವ್ಯಕ್ತಿ ಶಾಸಕರ ಮುಂದೆ ಕಣ್ಣೀರು ಹಾಕಿದರು. ಈ ಹಿನ್ನೆಲೆಯಲ್ಲಿ ಶಾಸಕರು ಇನ್ನೆರಡು ದಿನದೊಳಗೆ ಆತನಿಗೆ ದಾಖಲಾತಿ ಮಾಡಿಕೊಡಬೇಕೆಂದು ಆದೇಶಿಸಿದರು. ಇದರಿಂದ ಸಂತೋಷಗೊಂಡ ಆತ ಶಾಸಕರ ಕಾಲಿಗೆ ಬೀಳಲು ಮುಂದಾದ, ತಕ್ಷಣ ಶಾಸಕರು ಆತನನ್ನು ಸಮಾಧಾನಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಶಾಸಕರಿಗೆ ದೂರು ನೀಡಿ ಎ.ಆರ್.ಟಿ.ಒ ಕಚೇರಿಯಲ್ಲಿ ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಕೆಲಸವಾಗುತ್ತದೆ. ನೇರವಾಗಿ ಬಂದರೆ ಕಚೇರಿ ಸಿಬ್ಬಂದಿ ಸಾರ್ವಜನಿಕರನ್ನು ಅಗೌರವವಾಗಿ ಕಂಡು ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಹಲವು ಸಾರ್ವಜನಿಕರ ದೂರುಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು. ಎ.ಆರ್‌.ಟಿ.ಒ ಕಚೇರಿಯ ಸಿಬ್ಬಂದಿ ಜೊತೆ ಕೆಲಕಾಲ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಕಲೇಶಪುರ ಎ.ಆರ್‌.ಟಿ.ಒ ಕಚೇರಿಗೆ ದಿನನಿತ್ಯ ಮೂರು ತಾಲೂಕುಗಳಿಂದ ಸಾರ್ವಜನಿಕರು ಬರುತ್ತಾರೆ. ಆದರೆ ಹೀಗೆ ಬರುವ ಸಾರ್ವಜನಿಕರಿಗೆ ಎ.ಆರ್.ಟಿ.ಒ ಕಚೇರಿ ಸಿಬ್ಬಂದಿ ಕೆಲಸ ಮಾಡಿಕೊಡುವುದಿಲ್ಲ. ದಲ್ಲಾಳಿಗಳ ಮೂಲಕ ಬಂದರೆ ಕೆಲಸ ಮಾಡಿಕೊಡುತ್ತಾರೆ ಎಂಬ ಆರೋಪಗಳಿದೆ. ಈ ನಿಟ್ಟಿನಲ್ಲಿ ನಾನು ಕಚೇರಿಗೆ ಬಂದು ಪರಿಶೀಲನೆ ಮಾಡಿದ್ದೇನೆ. ಕಳೆದ ಕೆಲವಾರಗಳ ಹಿಂದೆ ಕಚೇರಿಯಲ್ಲಿ ದಲ್ಲಾಳಿಯೋರ್ವನ ಹುಟ್ಟುಹಬ್ಬ ಮಾಡಿದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ಅಮಾನತಾಗಿದ್ದು ಆದರೂ ಸಹ ಇಲ್ಲಿನ ಪರಿಸ್ಥಿತಿ ನೋಡಿದರೆ ಇಲ್ಲಿನ ಸಿಬ್ಬಂದಿ ಯಾವುದೇ ಪಾಠ ಕಲಿತಂತೆ ಕಾಣುವುದಿಲ್ಲ. ಕೂಡಲೆ ಇಲ್ಲಿನ ಸಿಬ್ಬಂದಿ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಸಾರ್ವಜನಿಕರಿಗೆ ಗೌರವ ನೀಡಲು ಮುಂದಾಗಬೇಕು. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿರುವುದನ್ನು ಮನಗಾಣಬೇಕು.ಸಕಲೇಶಪುರದ ಜನ ಅತ್ಯಂತ ಸೂಕ್ಷ್ಮ ಸ್ವಭಾವವುಳ್ಳವರು, ಜನರಿಗೆ ಅಗೌರವವಾದರೆ ಸಹಿಸುವುದಿಲ್ಲ. ಹೀಗಾಗಿ ಸಿಬ್ಬಂದಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಎ.ಆರ್‌ಟಿ.ಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿರುವುದು ನನಗೆ ತಿಳಿದಿದೆ, ಈ ಕುರಿತು ನಾನು ಸಾರಿಗೆ ಮಂತ್ರಿಗಳ ಬಳಿ ಈಗಾಗಲೆ ಮಾತನಾಡಿದ್ದೇನೆ. ಕೂಡಲೇ ಅಗತ್ಯವಿರುವ ಸಿಬ್ಬಂದಿಯ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇನೆ. ಎ.ಆರ್‌ಟಿಒ ಕಚೇರಿ ಸಿಬ್ಬಂದಿ ನೇರವಾಗಿ ಬಂದ ಸಾರ್ವಜನಿಕರ ಕೆಲಸಗಳನ್ನು ಯಾವುದೇ ತಾರತಮ್ಯ ಮಾಡದೆ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ನಾನು ಪದೇ ಪದೆ ಕಚೇರಿಗೆ ಭೇಟಿ ನೀಡುತ್ತೇನೆ. ಸಿಬ್ಬಂದಿ ಜನರ ಕೆಲಸಗಳನ್ನು ವಿಳಂಬ ಮಾಡದೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಎ.ಆರ್‌ಟಿಒ ಬ್ರೇಕ್ ಇನ್ಸ್‌ಪೆಕ್ಟರ್ ಆಲಿಯುದ್ದೀನ್, ಸಿಬ್ಬಂದಿಯಾದ ವೀಣಾ, ಅಶೋಕ, ಪರಮೇಶ್, ಗೌತಮ್, ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ