ಮಕ್ಕಳ ಕಲಿಕೆ ವಿಕಾಸಕ್ಕಾಗಿ ಕಲಿಕಾ ಹಬ್ಬ: ರಾಜೀವ್

KannadaprabhaNewsNetwork |  
Published : Feb 04, 2026, 02:45 AM IST
ಪೋಟೋಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕ ನಕಾಶೆ ಮಕ್ಕಳನ್ನು ಆಕರ್ಷಿಸಿತು.    | Kannada Prabha

ಸಾರಾಂಶ

2020ರ ಎನ್‌ಇಪಿಯಡಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಎಂಬ ಪರಿಕಲ್ಪನೆಯನ್ನು ತಂದು ಮಕ್ಕಳಿಗೆ ಎರಡು ವರ್ಷದಿಂದ ಅದರಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ

ಕನಕಗಿರಿ: ಮಕ್ಕಳಲ್ಲಿನ ಕಲಿಕೆ ವಿಕಾಸಗೊಳಿಸುವುದಕ್ಕಾಗಿ ಕಲಿಕಾ ಹಬ್ಬ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಸಿಆರ್ ಪಿ ರಾಜೀವ್ ಹೇಳಿದರು.

ಅವರು ಇಲ್ಲಿನ ಶಾಸಕರ ಮಾಹಿಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನಕಗಿರಿ ಉತ್ತರ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ (ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

2020ರ ಎನ್‌ಇಪಿಯಡಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಎಂಬ ಪರಿಕಲ್ಪನೆಯನ್ನು ತಂದು ಮಕ್ಕಳಿಗೆ ಎರಡು ವರ್ಷದಿಂದ ಅದರಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 7 ಕೋಣೆಗಳಲ್ಲಿ 7 ವಲಯವಾರು ಚಟುವಟಿಕೆಗಳಲ್ಲಿ ಪ್ರತಿ ಶಾಲೆಯಿಂದ ಓರ್ವ ವಿದ್ಯಾರ್ಥಿಯು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಗಿದೆ ಎಂದರು.

ಬಹುಮಾನ ವಿತರಣೆ:

ಕಥೆ ಹೇಳುವ ಸ್ಪರ್ಧೆಯಲ್ಲಿ ಪವಿತ್ರ (ಪ್ರಥಮ), ವಂದನಾ (ದ್ವಿತೀಯ), ಶ್ರೀ ಲಕ್ಷ್ಮೀ (ತೃತೀಯ), ಸಂತೋಷದಾಯಕ ಗಣಿತದಲ್ಲಿ ರುದ್ರಮ್ಮ (ಪ್ರಥಮ), ಗವಿಸಿದ್ದ (ದ್ವಿತೀಯ), ಜಸ್ವಂತ (ತೃತೀಯ), ಪೋಷಕರ ಮಕ್ಕಳ ಸಹ ಸಂಬಂಧ ಚಟುವಟಿಕೆಯಲ್ಲಿ ಉಮೇಶ (ಪ್ರಥಮ), ಜಯಶ್ರೀ (ದ್ವಿತೀಯ), ಗಿರೀಶ (ತೃತೀಯ), ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಪರ್ಧೆಯಲ್ಲಿ ಶೈನಾಜ್ (ಪ್ರಥಮ), ಭವಾನಿ (ದ್ವಿತೀಯ), ಅಫ್ರಾಜ್ (ತೃತೀಯ), ರಸಪ್ರಶ್ನೆಯಲ್ಲಿ ವಿಶ್ವನಾಥ ತಂಡ (ಪ್ರಥಮ), ಕೊಟ್ರೇಶ ತಂಡ (ದ್ವಿತೀಯ), ಭವಾನಿ ತಂಡ (ತೃತೀಯ), ಛದ್ಮವೇಷ ಚೈತ್ರಾ (ಪ್ರಥಮ), ಭೂಮಿಕಾ (ದ್ವಿತೀಯ), ಕೃತಿಕಾ (ತೃತೀಯ), ಸ್ಮರಣ ಪರೀಕ್ಷೆ ದೀಪಾ (ಪ್ರಥಮ), ಅಶ್ವಿನಿ (ದ್ವಿತೀಯ), ಚೈತನ್ಯ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ಈ ವೇಳೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥಸ್ವಾಮಿ ಚೂಡಾಮಣಿ, ಸದಸ್ಯರಾದ ಹನುಮಂತರೆಡ್ಡಿ ಮಹಲಿನಮನಿ, ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ, ಸನೌಸಂ ತಾಲೂಕು ಅಧ್ಯಕ್ಷೆ ಶಂಶಾದ್ ಬೇಗಂ, ಕಾರ್ಯದರ್ಶಿ ಉಮೇಶ ಕೆ, ಶಿಕ್ಷಕರಾದ ಮಲ್ಲಿಕಾರ್ಜುನ ಕುಷ್ಠಗಿ, ಸುನೀತಾ ಪತ್ತಾರ, ಹುಲಿಗೆಮ್ಮ ದಂಡಿನ್, ಧನಂಜಯ, ಗೀತಾ ಅಂಬೋರೆ, ರಜಿಯಾಬೇಗಂ, ಗೀತಾ ಭುಸನೂರುಮಠ, ನರಸಮ್ಮ ಓಣಿಮನಿ, ಬಸವರಾಜ ಕೊರೆಡ್ಡಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ