ಮಕ್ಕಳ ಪ್ರತಿಭೆ ಹೊರಹೊಮ್ಮಲು ಕಲಿಕಾ ಹಬ್ಬ ಸಹಕಾರಿ

KannadaprabhaNewsNetwork |  
Published : Mar 15, 2025, 01:04 AM IST
೧೪ವೈಎಲ್‌ಬಿ೨:ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸ.ಮಾ.ಹಿ.ಪಾ. ಶಾಲೆಯಲ್ಲಿ ಶುಕ್ರವಾರ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯಿಂದ ಚಿಕ್ಕಮ್ಯಾಗೇರಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಬುನಾದಿ ಸಾಮರ್ಥ್ಯ ಹಾಗೂ ಸಂಖ್ಯಾ ಜ್ಞಾನ ಗಳಿಸುವಲ್ಲಿ ಹಿಂದುಳಿದ ಮಕ್ಕಳನ್ನು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶವೇ ಕಲಿಕಾ ಹಬ್ಬದ್ದಾಗಿದೆ.

ಯಲಬುರ್ಗಾ:

ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆ ಹೊರಗೆಳೆಯಲು ಪೂರ್ವ ತಯಾರಿ ನಡೆಸುವ ಹಬ್ಬವೇ ಕಲಿಕಾ ಹಬ್ಬವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯಿಂದ ಚಿಕ್ಕಮ್ಯಾಗೇರಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಬುನಾದಿ ಸಾಮರ್ಥ್ಯ ಹಾಗೂ ಸಂಖ್ಯಾ ಜ್ಞಾನ ಗಳಿಸುವಲ್ಲಿ ಹಿಂದುಳಿದ ಮಕ್ಕಳನ್ನು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶವೇ ಕಲಿಕಾ ಹಬ್ಬದ್ದಾಗಿದೆ ಎಂದರು.

ಕಲಿಕಾ ಹಬ್ಬ ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆ, ಸಾಮರ್ಥ್ಯ ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುವ ಜತೆಗೆ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು, ಇದರಿಂದ ಹೊಸ ಹೊಸ ಬಗೆಯ ಪಠ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ. ಮಗುವಿನಲ್ಲಿ ಗುಪ್ತವಾಗಿರುವ ಜ್ಞಾನವನ್ನು ಚಟುವಟಿಕೆ ತೆರೆದಿಡಬಹುದು. ಶಿಕ್ಷಕರು ವರ್ಷವಿಡಿ ಮಕ್ಕಳಿಗೆ ತರಗತಿಯಲ್ಲಿ ಪಾಠ ಬೋಧನೆ ಮಾಡುವುದರಿಂದ ಪುಸ್ತಕದ ಹುಳಗಳನ್ನಾಗಿ ಮಾಡಿದಂತಾಗುತ್ತದೆ. ಇನ್ನೂ ಚಟುವಟಿಕೆ ಆಧಾರಿತ ಕಲೆಯನ್ನು ಮಕ್ಕಳಲ್ಲಿ ತುಂಬಿದರೆ ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕಲಿಸಿಕೊಟ್ಟಾಂತಾಗುತ್ತದೆ ಎಂದು ಹೇಳಿದರು. ಎಸ್‌ಡಿಎಂಸಿ ಅಧ್ಯಕ್ಷ ಶಾಂತಪ್ಪ ಚಂಡೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ವಿನೂತನ ಕಾರ್ಯಕ್ರಮದಿಂದ ಶೈಕ್ಷಣಿಕವಾಗಿ ಬಲಗೊಳ್ಳುವಂತೆ ಕಲಿಕಾ ಹಬ್ಬ ಮಾಡುತ್ತದೆ ಎಂದರು.

ಸಿಆರ್‌ಪಿ ಶರಣು ಕುರ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಆರ್‌ಪಿ ಮಕ್ಕಳ ಕಲಿಕಾ ಹಬ್ಬದ ತಾಲೂಕು ನೋಡೆಲ್ ಅಧಿಕಾರಿ ಶಿವಪ್ಪ ಉಪ್ಪಾರ, ನೌಕರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಸ್.ವಿ. ಧರಣಾ, ಶಿಕ್ಷಕರಾದ ಬಸವರಾಜ ಮುಳಗುಂದ, ಗ್ರಾಪಂ ಸದಸ್ಯ ಶರಣಪ್ಪ ಕರಡದ, ಎಸ್‌ಡಿಎಂಸಿ ಉಪಾಧ್ಯಕ್ಷ ಯಮನೂರಪ್ಪ ಕಡೇಮನಿ, ಸದಸ್ಯರಾದ ಈರಣ್ಣ ಬಿಸೆರೊಟ್ಟಿ, ಶರಣಪ್ಪ ತೋಟದ, ಸಿದ್ದಪ್ಪ ಅಂಗಡಿ, ಶಿವಪ್ಪ ಸೂಡಿ, ಶರಣಪ್ಪ ಚಲವಾದಿ, ಬಾಗೇಶ ಬಿಂದ್ಗಿ, ಶಾಲೆಯ ಮುಖ್ಯ ಶಿಕ್ಷಕ ಚಿನ್ನುಬಾಷಾ ಅತ್ತಾರ, ಶಿಕ್ಷಕರಾದ ಪರಶುರಾಮ ತಳವಾರ, ಮಹಾಂತೇಶ ಹಿರೇಮಠ, ಡಿ.ವೈ. ಮುಜೇವಾರ, ಸಿ. ಶಾಂತಾ ಹಾಗೂ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ