ಹೊಸತನ, ಸೃಜನಶೀಲತೆಗೆ ಕಲಿಕಾ ಹಬ್ಬ ಸಹಕಾರಿ

KannadaprabhaNewsNetwork |  
Published : Feb 07, 2026, 03:30 AM IST
ಪೋಟೋಕನಕಗಿರಿ ತಾಲೂಕಿನ ಹುಲಸನಹಟ್ಟಿ ಸರ್ಕಾರಿ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ಸೆಲ್ಪಿ ಸ್ಟಿಕ್ ಮಕ್ಕಳ ಹಾಗೂ ಪಾಲಕರನ್ನು ಆಕರ್ಷಿಸಿತು.    | Kannada Prabha

ಸಾರಾಂಶ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವಿಕೆ,ಯಾವುದೇ ಒತ್ತಡವಿಲ್ಲದೆ ಆಟದ ಜತೆಗೆ ಕಲಿಕೆ ವಿಕಾಸಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ

ಕನಕಗಿರಿ: ಮಕ್ಕಳಲ್ಲಿನ ಹೊಸತನ ಮತ್ತು ಸೃಜನಶೀಲತೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಸಿಆರ್ ಪಿ ಶಿವಪ್ಪ ಹೆಳವರ ಹೇಳಿದರು.

ತಾಲೂಕಿನ ಬಸರಿಹಾಳ ಗ್ರಾಪಂ ವ್ಯಾಪ್ತಿಯ ಹುಲಸನಹಟ್ಟಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹುಲಿಹೈದರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಈಚೆಗೆ ಮಾತನಾಡಿದರು.

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವಿಕೆ,ಯಾವುದೇ ಒತ್ತಡವಿಲ್ಲದೆ ಆಟದ ಜತೆಗೆ ಕಲಿಕೆ ವಿಕಾಸಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ.ಈ ಕಾರ್ಯಕ್ರಮದಲ್ಲಿ ಓದುವಿಕೆ, ಕಥೆ ಹೇಳುವುದು, ಗಣಿತದ ಆಟಗಳು, ರಸಪ್ರಶ್ನೆ ಮತ್ತು ವೈಜ್ಞಾನಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಕೆಯ ಹೆಚ್ಚಿಸುವುದು ಕಲಿಕಾ ಹಬ್ಬ ಮುಖ್ಯ ಉದ್ದೇಶವಾಗಿದೆ ಎಂದರು.

ನಂತರ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ್ ಮಾತನಾಡಿ, 1 ರಿಂದ 5ನೇ ತರಗತಿಯ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಬಲಪಡಿಸುವುದಕ್ಕಾಗಿ ಇಲಾಖೆ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದರು.

ಪೋಷಕ ಮತ್ತು ಮಕ್ಕಳ ಸಂಬಂಧ ವಲಯ, ಕಥೆ ಹೇಳುವುದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕೈ ಮತ್ತು ಶುದ್ಧಬರಹ, ಚಿತ್ರನೋಡಿ ವಿವರಿಸುವುದು ಹಾಗೂ ಮೆಮೋರಿ ಪರೀಕ್ಷೆ ವಿಷಯದ ಕುರಿತಾಗಿ ಕಾಯಕ್ರಮದಲ್ಲಿ ಮಕ್ಕಳಿಗೆ ಸವಿಸ್ತಾರ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ ಬೇವೂರು, ಉಪಾಧ್ಯಕ್ಷ ನಾಗನಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಚನ್ನದಾಸರ, ಉಪಾಧ್ಯಕ್ಷ ಹನುಮಂತಪ್ಪ ಕುರುಬರ, ಕರಾನೌಸಂಘದ ತಾಲೂಕಾಧ್ಯಕ್ಷೆ ಶಂಶಾದಬೇಗಂ, ಶರಣೇಗೌಡ, ಫಾಲಾಕ್ಷಿ ನಾರಾಯಣ, ನಾಗರಾಜ ಬೇವೂರು, ಶಿಕ್ಷಕರಾದ ವೆಂಕೋಬ ಪೂಜಾರ, ಬಸವರಾಜ ಐಲಿ, ರಾಜಲಕ್ಷ್ಮೀ ಪಾಟೀಲ್, ಅರುಣಾ, ಪೂಜಾ, ವಿದ್ಯಾಶ್ರೀ, ಮರಿಯಪ್ಪ, ಮುಖೇಶ ಸೇರಿದಂತೆ ಹಳೇ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಕಾರ್ಯ ಜನಮೆಚ್ಚುಗೆ