ಸರ್ವಾಂಗೀಣ ಅಭಿವೃದ್ಧಿಗೆ ಕಲಿಕಾ ಸಾಮಗ್ರಿ, ಸೌಲಭ್ಯ ಮುಖ್ಯ: ರಾಹುಲ್‌ ಜಾರಕಿಹೊಳಿ

KannadaprabhaNewsNetwork |  
Published : Dec 30, 2023, 01:30 AM IST
29 ವಾಯ್ ಎಮ್ ಕೆ 01 | Kannada Prabha

ಸಾರಾಂಶ

ಶಾಲಾ ಕೊಠಡಿಗಳ ಉದ್ಘಾಟನೆಯಲ್ಲಿ ಯುವ ನಾಯಕ ರಾಹುಲ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೇ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ಇನ್ನೀತರ ಸೌಲಭ್ಯಗಳು ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೇ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ಇನ್ನೀತರ ಸೌಲಭ್ಯಗಳು ಸಿಗಬೇಕು. ಇದಕ್ಕೆ ಪೂರಕವಾಗಿ ಉತ್ತಮ ದರ್ಜೆಯ ಶಾಲಾ ಕಟ್ಟಡಗಳು ಬೇಕು. ಇದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗುವುದು ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಹೇಳಿದರು.

ಚಿಲಭಾಂವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿಯಲ್ಲಿ ನಿರ್ಮಿಸಲಾದ 2 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೇ ಶಿಕ್ಷಕರದಷ್ಟೇ ಜವಾಬ್ದಾರಿಯು ಪಾಲಕರದು ಕೂಡಾ ಆಗಿದೆ ಎಂದರು.

ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿ, ಸತೀಶ ಪ್ರತಿಭಾ ಪುರಸ್ಕಾರ ಆಯೋಜಿಸುವ ಮೂಲಕ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೆರೆಯಲು ಭವ್ಯವಾದ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಹೊಸಮನಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಮಕ್ಕಳ ಸಮ್ಮೇಳನ ಮಾಡುವ ವಿಚಾರವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಕಾನಿ ಅಭಿಯಂತ ಎಂ.ಎಸ್.ಹೊಸಮನಿ, ಎ.ಎಂ.ಇನಾಮದಾರ, ಪಾಶ್ಚಾಪೂರ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ಮಲ್ಲಪ್ಪ ನಾಯಿಕ, ಸಚಿವ ಸತೀಶ ಜಾರಕಿಹೊಳಿಯವರು ಶೈಕ್ಷಣಿಕ ಆಪ್ತ ಸಹಾಯಕ ಜಂಗ್ಲಿಸಾಹೇಬ್‌ ನಾಯಿಕ, ಲಗಮಣ್ಣ ಪಣಗುದ್ದಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮನಿ, ಉಪಾದ್ಯಕ್ಷೆ ಉಮಾದೇವಿ ಪಡೆಪ್ಪನವರ, ಸಿಆರ್‌ಪಿ ರಾಜಗೋಪಾಲ ಮಿತ್ರನ್ನವರ, ಎಸ್.ಬಿ.ಸಿಂಗೆ, ರುಸ್ತುಂಪೂರ ಗ್ರಾಪಂ ಉಪಾಧ್ಯಕ್ಷ ಸುರೇಶ ಪೂಜೇರಿ, ಮಹ್ಮದರಫೀಕ್‌ ಮೋಮಿನ, ರಫೀಕ್‌ ನಧಾಪ ಗ್ರಾಮದ ನಾಗರಿಕರಾದ ನಿಂಗಪ್ಪ ಬಾಳಪ್ಪ ಸನದಿ, ಶ್ರೀಕಾಂತ ಕಾಟಾಬಳ್ಳಿ, ರಾಮಪ್ಪ ಸು ಮಗದುಮ್ಮ, ಬಸಪ್ಪ ಬಾ ಕಲ್ಲಟ್ಟಿ, ಕೆಂಪವ್ವ ಸಾ.ಪೂಜೇರಿ, ಚೆನ್ನಮ್ಮಾ ಮಾ.ಬಡಗುರವ, ವೇಂಕಟೇಶ ಬ ಪಾಟೀಲ, ಮುಖ್ಯ ಶಿಕ್ಷಕ ಎಂ.ಎನ್.ಮಗದುಮ್ಮ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಲ್.ಯಡ್ರಾವಿ ಸ್ವಾಗಮಿಸಿದರು. ಎಫ್.ವಿ.ನೀರಲಗಿ ನಿರೂಪಿಸಿದರು. ಮಂಜುಳಾ ಆರ್. ಮಮದಾಪುರೆ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ