ಕಲಿಕೆಗೆ ಶ್ರದ್ಧೆ, ನಿರ್ದಿಷ್ಟ ಗುರಿ ಇರಬೇಕು

KannadaprabhaNewsNetwork |  
Published : Jun 26, 2024, 12:38 AM IST
೨೫ಕೆಎಲ್‌ಆರ್-೧೨ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ೩.೫ ಕೋಟಿ ವೆಚ್ಚದ ನೋಟ್ ಪುಸ್ತಕ,ವಾಟರ್‌ಫಿಲ್ಟರ್,ಸ್ಮಾರ್ಟ್ ಕ್ಲಾಸ್ ಕೊಡುಗೆಯಾಗಿ ನೀಡುವ ಸಮಾರಂಭಕ್ಕೆ ಎಪ್ಸನ್ ಕಂಪನಿಯ ಅಧ್ಯಕ್ಷ ಸಾಂಭಮೂರ್ತಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಈ ವರ್ಷವೊಂದರಲ್ಲೇ ೩.೫ ಕೋಟಿ ರೂ ವೆಚ್ಚದ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಕಲಿಕೆಗೆ ಶ್ರದ್ಧೆ, ಛಲ, ನಿರ್ಧಿಷ್ಟ ಗುರಿಯಿದ್ದರೆ ಸಾಕು, ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವುದು ಮುಖ್ಯ, ಖುಷಿಯಿಂದ ಸಾಧನೆಯತ್ತ ಮುನ್ನುಗ್ಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಬಮೂರ್ತಿ ಕರೆ ನೀಡಿದರು.ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಪ್ಸನ್ ಕಂಪನಿ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಮತ್ತು ಶಿಕ್ಷಕ ಗೆಳೆಯರ ಬಳಗದಿಂದ ಎಪ್ಸನ್ ಕಂಪನಿಯಿಂದ ಕೋಲಾರ ಜಿಲ್ಲೆಯ ೪೨೪೮೦ ಸರ್ಕಾರಿ ಶಾಲಾ ಮಕ್ಕಳಿಗೆ ೩.೫ ಕೋಟಿ ಮೊತ್ತದ ೨.೩೫ ಲಕ್ಷ ನೋಟ್ ಪುಸ್ತಕ, ೧೨ಸಾವಿರ ಶಾಲಾ ಬ್ಯಾಗ್, ೭೭ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಫಿಲ್ಟರ್, ೫೦ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್‌ಗಳನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿದರು.ತಂದೆ-ತಾಯಿಯ ಆಸೆ ಈಡೇರಿಸಿ

ನಿಮ್ಮ ತಂದೆತಾಯಿಯ ಆಶಯ ನಿಜವಾಗಿಸಿ, ನಿಮ್ಮ ಕನಸಿಗೆ ನೋಟ್ ಪುಸ್ತಕ, ಬ್ಯಾಗ್ ನಮ್ಮ ಚಿಕ್ಕ ಕಾಣಿಕೆಯಷ್ಟೆ, ಸಮಾಜ, ದೇಶಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ನಿಮ್ಮ ಸಾಧನೆ ಮುಂದುವರೆಸಿ, ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ತಿಳಿಸಿದರು.ಶಾಲೆ ಬಲವರ್ಧನೆಗೆ ಸಹಕಾರಿ

ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಈ ವರ್ಷವೊಂದರಲ್ಲೇ ೩.೫ ಕೋಟಿ ರೂ ವೆಚ್ಚದ ನೆರವನ್ನು ಸರ್ಕಾರಿ ಶಾಲೆಗಳಿಗೆ ಎಪ್ಸನ್ ಕಂಪನಿ ಹರಿಸಿದೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮತ್ತು ಬಲವರ್ಧನೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿ, ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಒದಗಿಸಲು ಕೋರಿದರು.ಎಪ್ಸನ್ ಕಂಪನಿ ಅಧಿಕಾರಿ ನವೀನ್ ಶೆಟ್ಟಿ ಮಾತನಾಡಿ, ನಾವು ಪ್ರತಿವರ್ಷ ನಿಮ್ಮ ನೆರವಿಗೆ ಬರುತ್ತೇವೆ, ನೀವು ದೊಡ್ಡ ಕನಸು ಕಾಣಿ, ಆ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ,ಛಲದಿಂದ ಓದಿ ಎಂದುಕಿವಿಮಾತು ಹೇಳಿ, ನಾವು ನೀಡುತ್ತಿರುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಖಾಸಗಿ ಪೈಪೋಟಿಗೆ ಎದುರಾಗಿ ಸದೃಢಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿರುವ ಎಪ್ಸನ್ ಕಂಪನಿಯ ಸಹಕಾರವನ್ನು ಪ್ರಶಂಶಿಸಿದರು.ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಬಾಲಕಿಯರ ಪಿಯು ಕಾಲೇಜು ಉಪಪ್ರಾಂಶುಪಾಲೆ ಮಂಜುಳಾ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್‌ನ ಹರೀಶ್, ಅನಿಲ್ ಜೋಷಿ, ಎಪ್ಸನ್ ಕಂಪನಿಯ ಅಧಿಕಾರಿಗಳಾದ ವಿನಯ್‌ಕುಮಾರ್ ರೆಡ್ಡಿ, ರಾಜೇಂದ್ರಕುಮಾರ್, ವಿಜಯ್‌ಗೋವಿಂದ್ ಅಶೋಕ್‌ಕುಮಾರ್‌ದಾಸ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ