ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒತ್ತಾಯ । ಡಿಡಿಪಿಐ, ಬಿಇಒಗೆ ಮನವಿ ಸಲ್ಲಿಕೆ
ಬಿಸಿಯೂಟ, ಮೊಟ್ಟೆ ವಿತರಣೆಗಾಗಿ ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ.ಕನ್ನಡಪ್ರಭ ವಾರ್ತೆ ಕೋಲಾರಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಾದ ಅಕ್ಷರ ದಾಸೋಹ, ಮೊಟ್ಟೆ ವಿತರಣೆ ಕಾರ್ಯಗಳ ಒತ್ತಡದಿಂದಾಗಿ ಶೈಕ್ಷಣಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ. ಈ ಕಾರ್ಯಕ್ರಮಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು ಡಿಡಿಪಿಐ, ಬಿಇಒ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು, ಆಯುಕ್ತರಿಗೆ ಮನವಿ ಸಲ್ಲಿಸಿದರು.ಶಿಕ್ಷಕರಿಗೆ ಅನಗತ್ಯ ಹೊರೆ
ಬಿಸಿಯೂಟ, ಮೊಟ್ಟೆ ವಿತರಣೆಗಾಗಿ ನಿತ್ಯ ಅಡುಗೆ ಅನಿಲ ಸರಬರಾಜು ಹಾಗೂ ಮೊಟ್ಟೆ ಬಾಳೆಹಣ್ಣು, ಚಿಕ್ಕಿ ಖರೀದಿ, ಸರಬರಾಜು, ವಿತರಣೆಯಿಂದ ಶಿಕ್ಷಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಿದ್ದು ಶೈಕ್ಷಣಿಕವಾಗಿ ಪ್ರಗತಿ ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.ಈ ನಡುವೆ ಬೆಲೆ ಏರಿಕೆಯಿಂದ ಮೊಟ್ಟೆ ವಿತರಣೆ ಶಿಕ್ಷಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹಾಗಾಗಿ ಯೋಜನಾ ಅನುಷ್ಠಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಶಾಲಾ ಅನುದಾನ ಸೆಳೆಯುವ ಚಕ್ಕರ್ ಮೇಕರ್ ಸರಳಿಕರಣ ಮಾಡಬೇಕು. ಚುನಾವಣಾ ಕಾರ್ಯ, ಮತಪಟ್ಟಿ ತಯಾರಿಕೆ, ಗಣತಿ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ನಡುವೆ ಮೊಟ್ಟೆ ಖರೀದಿಸಿ ಅದನ್ನು ಬೇಯಿಸಿ ವಿತರಿಸಲು ತೊಂದರೆಯಾಗಿದೆ.ಬಿಸಿಯೂಟಕ್ಕೆ ಸ್ವಂತ ಹಣ
ಬೋಧನೆಗೆ ಹಿನ್ನಡೆ:
೧ಕೆಎಲ್‌ಆರ್-೧೦........ಬಿಸಿಯೂಟ ವ್ಯವಸ್ಥೆಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಆಗ್ರಹಿಸಿ ಕೋಲಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಡಿಡಿಪಿಐಗೆ ಮನವಿ ಸಲ್ಲಿಸಿತು.