ಶಿವಮೊಗ್ಗ: ನಗರದ ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್‌ಕೇರ್‌ನ ಕ್ಯಾನ್ಸರ್ ವಿಭಾಗದಲ್ಲಿ ಶನಿವಾರ ಆಯೋಜಿಸಿದ್ದ ಕ್ಯಾನ್ಸರ್ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಖ್ಯಾತ ಸ್ತ್ರೀ ರೋಗ ತಜ್ಞೆ ಕರ್ನಲ್ ಡಾ.ಗುಂಜನ್ ಮಲ್ಹೋತ್ರಾ ಅವರು ಕ್ಯಾನ್ಸರ್ ಹಾಗೂ ಬದುಕನ್ನು ಗೆದ್ದ ಬಗ್ಗೆ ತಿಳಿಸಿದ್ದು, ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಕ್ಯಾನ್ಸರ್ ರೋಗಕ್ಕೆ ತುತ್ತಾದಾಗ ಅವರ ದೇಹದಲ್ಲಿ ಆಗುವ ಬದಲಾವಣೆಗಳೆಲ್ಲವನ್ನೂ ಬದಿಗೆ ಸರಿಸಿ 24 ವರ್ಷಗಳ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಡಾ.ಕರ್ನಲ್ ಗುಂಜನ್ ಮಲ್ಹೋತ್ರಾ ಅವರು ನಮ್ಮಲ್ಲಿ ಬದುಕುವ ಛಲ ಮತ್ತು ಆತ್ಮಸ್ಥೈರ್ಯ ಇದ್ದರೆ ಯಾವುದೇ ರೋಗದಿಂದ ಪಾರಾಗಬಹುದು ಎಂಬ ಆತ್ಮಸ್ಥೈರ್ಯವನ್ನು ತುಂಬಿದರು. ಕೋವಿಡ್ ಸಮಯದಲ್ಲಿ ಸ್ತನ ಕ್ಯಾನ್ಸರ್ ಬಂದಿತು. ಆಗ ನಾನು ಬದುಕುವುದಿಲ್ಲ ಎಂದು ಭಾವಿಸಿದ್ದೆ. ನನ್ನ ಆತ್ಮವಿಶ್ವಾಸ, ತಾಳ್ಮೆ, ಹಾರೈಕೆ ನಾನು ಬದುಕಲು ಕಾರಣವಾಯಿತು. ಸೈನ್ಯಕ್ಕೆ 24 ವರ್ಷ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಆಲೋಚನೆಗಳು ಪಾಸಿಟಿವ್ ಆಗಿರದಿದ್ದರೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಕ್ಯಾನ್ಸರ್ ಎಂಬ ಪದ ಕೇಳಿದ ತಕ್ಷಣ ಜೀವನ ಮುಗಿದು ಹೋಯಿತೆ ಎಂದೆ ಎಲ್ಲರೂ ಭಾವಿಸುತ್ತಾರೆ. ನನ್ನ ಕುಟುಂಬದಲ್ಲಿ ಎಲ್ಲರೂ ನನಗೆ ಬೆಂಬಲ ನೀಡಿ, ಧೈರ್ಯ ತುಂಬಿದರು. ಕ್ಯಾನ್ಸರ್ ರೋಗಿ ಅಥವಾ ಯಾರೇ ಅದರೂ ಜೀವನದಲ್ಲಿ ಮುಂದುವರೆಯಬೇಕು ಎಂದರು.
ಕ್ಯಾನ್ಸರ್ ರೋಗಿಗಳು ರೋಗಕ್ಕೆ ಹೆದರಿ ಖಿನ್ನತೆಗೆ ಒಳಗಾಗದೇ ಸಕರಾತ್ಮ ಆಲೋಚನೆ ಬೆಳೆಸಿಕೊಳ್ಳಬೇಕು. ಯಾವುದೇ ಸಂದರ್ಭ ಬಂದರೂ ನಮ್ಮನ್ನು ನಾವು ಪ್ರೀತಿಯಿಂದ ಕಾಣಬೇಕು ಎಂದು ಸಲಹೆ ನೀಡಿದರು.ಆಸ್ಪತ್ರೆಯ ವೈದ್ಯ ಡಾ.ಗುರುಚನ್ನ ಬಸವಯ್ಯ ಮಾತನಾಡಿ, ನಂಜಪ್ಪ ಆಸ್ಪತ್ರೆ ದೊಡ್ಡ ಕುಟುಂಬ. 1987ರಲ್ಲಿ ಪ್ರಾರಂಭವಾದ ಆಸ್ಪತ್ರೆ ಈಗ ಮಧ್ಯ ಕರ್ನಾಟಕದಲ್ಲಿ 2019ರಲ್ಲಿ ಬೆನಕಪ್ಪ, ಅವಿನಾಶ ಅವರ ಪರಿಶ್ರಮದಿಂದ ಅಂಕಾಲಜಿ ವಿಭಾಗ ಪ್ರಾರಂಭಿಸಲಾಯಿತು. ನಂತರ ನಿಧಾನವಾಗಿ ಒಂದೊಂದೆ ವಿಭಾಗ ಸೇರಿಸಲಾಯಿತು. ನ್ಯೂಕ್ಲಿಯರ್ ಮೆಡಿಸನ್‌ಗಳನ್ನು ಮಧ್ಯ ಕರ್ನಾಟಕದಲ್ಲಿ ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ 500 ಕ್ಯಾನ್ಸರ್ ಸರ್ಜರಿ ಮಾಡಿದ್ದೇವೆ. 12 ಸಾವಿರ ಕಿಮೋಥೆರಪಿ ಮಾಡಲಾಗಿದೆ. ಇಮ್ಯುನೊಥೆರಪಿ, ರೇಡಿಯೇಶನ್ 1400 ಮಾಡಲಾಗಿದೆ. ಮಧ್ಯ ಕರ್ನಾಟಕದಲ್ಲಿ ಬ್ರೇಕಿಟ್ ಥೆರಪಿ ಪ್ರಾರಂಭಿಸಿದ ಮೊದಲ ಆಸ್ಪತ್ರೆಯಾಗಿದೆ. ಇಲ್ಲಿ ಅಂಕೊ ಪೆಥಾಲಜಿ ಡಿಪಾರ್ಟ್‌ಮೆಂಟ್ ಇದೆ. ಇನ್ನೂ ಹೆಚ್ವಿನ ಅಂಕೋ ಸೆಂಟರ್‌ಗಳನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದೇವೆ. ಕ್ಯಾನ್ಸರ್ ಹೋರಾಟದಲ್ಲಿ ರೋಗಿ, ಅವರ ಕುಟುಂಬಸ್ಥರು ಏಕಾಂಗಿಯಲ್ಲ. ಅವರೊಂದಿಗೆ ನಂಜಪ್ಪ ಆಸ್ಪತ್ರೆ ಇದೆ ಎಂದರು.ಡಾ.ನಮ್ರತಾ ಉಡುಪಾ ಅವರು ಅತಿಥಿ ಪರಿಚಯಿಸಿದರು, ಡಿ.ಜಿ.ಬೆನಕಪ್ಪ ಅಧ್ಯಕ್ಷ, ಡಾ.ಅವಿನಾಶ್, ಡಾ.ನಮ್ರತಾ, ಡಾ.ನಂದಿತಾ, ಡಾ.ಭಾರತಿ, ಡಾ.ವಿಶಾಲಾಕ್ಷಿ ಮೋಗಿ, ಡಾ.ಶಶಿಕಲಾ, ಡಾ.ಗೋವರ್ಧನ್, ಡಾ.ಶರತ್ ಚಂದ್ರ, ಡಾ.ಪ್ರಿಯಂವದಾ, ಡಾ.ನರೇಂದ್ರ, ಎಚ್.ಸಿ.ಯೋಗೀಶ್ ಮತ್ತಿತರರು ಇದ್ದರು.ನನಗೆ ಕ್ಯಾನ್ಸರ್ ಇರುವುದೇ ಗೊತ್ತಿರಲಿಲ್ಲ. ಕೂದಲು ತುಂಬಾ ಉದುರುತ್ತಿತ್ತು. ನಮ್ಮ ಕುಟುಂಬ ಸ್ನೇಹಿತರೆಲ್ಲರೂ ನನಗೆ ಕೇಳುತ್ತಿದ್ದಾಗ ಅವರಿಗೆ ಏನೇನೋ ಸಬೂಬು ಹೇಳುತ್ತಿದ್ದೆ. ಬಳಿಕ ನಂಜಪ್ಪ ಆಸ್ಪತ್ರೆ ವೈದ್ಯರಾದ ಡಾ.ಗುರುಚನ್ನ ಬಸವಯ್ಯ ಹಾಗೂ ಅವರ ತಂಡದವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಚಿಕಿತ್ಸೆ ಪಡೆದ ಬಳಿಕ ಈಗ ನನ್ನ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಮೊದಲಿನಂತೆ ಎಲ್ಲ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಕ್ಯಾನ್ಸರ್ ಚಿಕಿತ್ಸೆಗೆ ಮಣಿಪಾಲ್ ಗೆ ಹೋಗಬೇಕಿತ್ತು. ಆದರೆ ನಂಜಪ್ಪ ಅದನ್ನು ತಪ್ಪಿಸಿದೆ.
- ಗಾಯತ್ರಿ, ಕ್ಯಾನ್ಸರ್ ರೋಗಿನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ವರ್ಕ್‌ಫ್ರಂಹೋಂ ಕಾರಣ ಊರಿಗೆ ಬಂದಿದ್ದೆ. ಒಮ್ಮೆ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಂಡಾಗ ನನಗೆ ಕ್ಯಾನ್ಸರ್ ಇರುವುದು ದೃಢವಾಗಿತ್ತು. ಆಗ ನಂಜಪ್ಪ ಆಸ್ಪತ್ರೆ ವೈದ್ಯರು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಆಗ ನಾನು ಸ್ಟ್ರಾಂಗ್ ಆದೆ. ನನಗೆ ಕ್ಯಾನ್ಸರ್ 4ನೇ ಹಂತದಲ್ಲಿತ್ತು. ಆದರೂ ವೈದ್ಯರೆಲ್ಲರೂ ನನಗೆ ಧೈರ್ಯ ತುಂಬಿದರು. ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಈಗ ಚೇತರಿಸಿಕೊಳ್ಳುತ್ತಿದ್ದೇನೆ. ಆದರೆ, ಇದು ಒಮ್ಮೆಲೇ ಗುಣವಾಗುವ ಕಾಯಿಲೆ ಅಲ್ಲ. ಇದು ಕ್ಯೂರ್ ಆಗಲು ವರ್ಷಗಳೆ ಬೇಕು. ರೋಗಿಗಳಿಗೆ ತಾಳ್ಮೆ ಮುಖ್ಯ.- ವಿಜಯ್ ಕುಮಾರ್, ಕ್ಯಾನ್ಸ್‌ರ್ ರೋಗಿನನಗೆ ಕ್ಯಾನ್ಸರ್ ಇರುವುದು ತಿಳಿದಾಗ ನಾನೂ ತುಂಬಾನೇ ಕುಗ್ಗಿ ಹೋಗಿದ್ದೆ. ಆಗ ನಂಜಪ್ಪ ಆಸ್ಪತ್ರೆಯ ವೈದರ ಸೂಚನೆ ಮೇರೆ ಇಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾದೆ. ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ತುಂಬಾನೇ ಭಯ ಇತ್ತು. ಯಾವ ಚಿಕಿತ್ಸೆ, ಹೇಗೆ ಇರಬೇಕು ಎಂಬ ಬಗ್ಗೆ ತಿಳಿದಿರಲಿಲ್ಲ. ಆದರೆ ಈ ಆಸ್ಪತ್ರೆಯಲ್ಲಿ ಈ ಎಲ್ಲದ್ದಕ್ಕೂ ಉತ್ತರ ಸಿಕ್ಕಿತು. ರೋಗಿಯ ಆರೋಗ್ಯವೇ ನಂಜಪ್ಪ ಆಸ್ಪತ್ರೆಗೆ ಮುಖ್ಯ ಎಂಬುದು ತಿಳಿದುಕೊಂಡೆ. ಆಸ್ಪತ್ರೆಯಲ್ಲಿ ಎಲ್ಲರೂ ನನ್ನನ್ನೂ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ನಾನು ಆರೋಗ್ಯವಾಗಿದ್ದೇನೆ.- ವಾಣಿ, ಕ್ಯಾನ್ಸರ್ ರೋಗಿ