ಯುವ ಜನತೆಯೇ ಭಾರತದ ದೊಡ್ಡ ಶಕ್ತಿ

KannadaprabhaNewsNetwork |  
Published : Jun 01, 2025, 02:18 AM IST
16 | Kannada Prabha

ಸಾರಾಂಶ

ಭಾರತ ಅಭಿವೃದ್ಧಿ ಆಗುತ್ತಿರುವುದು ಶಿಕ್ಷಣದಿಂದ ಮಾತ್ರ ಅಲ್ಲ. ಇಲ್ಲಿನ ಸಂಸ್ಕೃತಿ, ನಮ್ಮ ಮಾನವ ಸಂಪನ್ಮೂಲದಿಂದಲೂ ಅಭಿವೃದ್ಧಿ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಜನತೆಯೇ ಭಾರತದ ದೊಡ್ಡ ಶಕ್ತಿ. ಮಾನವ ಸಂಪನ್ಮೂಲದಲ್ಲಿ ಶಕ್ತಿ ತುಂಬುವುದೇ ಯುವಜನರು ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್. ಜಗದೀಶ್ ನೇತೃತ್ವದಲ್ಲಿ ನಿವೇದಿತನಗರದ ಎಸ್.ಆರ್. ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಭಾರತ ಅಭಿವೃದ್ಧಿ ಆಗುತ್ತಿರುವುದು ಶಿಕ್ಷಣದಿಂದ ಮಾತ್ರ ಅಲ್ಲ. ಇಲ್ಲಿನ ಸಂಸ್ಕೃತಿ, ನಮ್ಮ ಮಾನವ ಸಂಪನ್ಮೂಲದಿಂದಲೂ ಅಭಿವೃದ್ಧಿ ಆಗುತ್ತಿದೆ. ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜ ಸೇವೆ ಮಾಡಲು ಮುಂದಾಗಬೇಕು. ತಮ್ಮ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ರಘು ಮಾತನಾಡಿ, ಪೋಷಕರು ಮಕ್ಕಳ ಬಗ್ಗೆ ಕನಸು ಕಾಣುವುದರ ಜೊತೆಗೆ ಅವರ ಬದುಕು ರೂಪಿಸುವ ಕೆಲಸ ಮಾಡಬೇಕು. ಪೋಷಕರು ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಅವರಿಗರ ದಾರಿ ತೋರಿಸಬೇಕು. ಪ್ರಪಂಚದ ಎಲ್ಲ ಸಾಧಕರು ಕಷ್ಟದಲ್ಲೇ ಮೇಲೆ‌ ಬಂದಿದ್ದಾರೆ. ಪೋಷಕರು ಮಕ್ಕಳಿಗೆ ಕಷ್ಟ ಪರಿಚಯವನ್ನು ಮಾಡಬೇಕು ಎಂದರು.ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ ಗೌಡ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಂದೆ ತಾಯಿಗಳನ್ನು ಗೌರವದಿಂದ ಕಾಣವ ಜೊತೆಗೆ ಚೆನ್ನಾಗಿ ನೋಡಿಕೊಳ್ಳಬೇಕು. ದೇಶದ ಉತ್ತಮ ಪ್ರಜೆ ಆಗಿ ಬೆಳೆಯಬೇಕು. ಶಿಕ್ಷಣದ ಜೊತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು ಎಂದು ತಿಳಿಸಿದರು.ನಗರ ಪಾಲಿಕೆ ‌ಮಾಜಿ ಸದಸ್ಯ ಜೆ.ಎಸ್. ಜಗದೀಶ್ ಮಾತನಾಡಿ, 14 ವರ್ಷದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಿದ್ದೇವೆ. ಸಾವಿರಾರು ಮಕ್ಕಳನ್ನು ಪುರಸ್ಕರಿಸಿದ್ದೇವೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರಮುಖ ಘಟ್ಟ. ಇಂತಹ ಘಟ್ಟವನ್ಬು ಯಶಸ್ವಿಯಾಗಿ ಪೂರೈಸಿದ ಮಕ್ಕಳನ್ನು ಉತ್ತೇಜನ ನೀಡುವ ದೃಷ್ಟಿಯಿಂದ ಪುರಸ್ಕರಿಸಲಾಗುತ್ತಿದೆ‌ಎಂದರು.2024- 25ನೇ ಸಾಲಿನ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ 300 ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು. ರಾಜರಾಜೇಶ್ವರಿನಗರದ ಅಕ್ಕನ ಬಳಗದಿಂದ ವಚನ ಗಾಯನ ನೆರವೇರಿತು.ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಆಯರಹಳ್ಳಿ ವಿರೂಪಾಕ್ಷ, ಶಿವಕುಮಾರ್, ಲೋಹಿತ್ ಶರ್ಮ, ಶ್ರೀನಿವಾಸ್, ಸತ್ಯಾನಂದ ವಿಟ್ಟು, ಪ್ರಸನ್ನಕುಮಾರ್, ವಿಜಯ್ ಕುಮಾರ್, ರವಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ