ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ

KannadaprabhaNewsNetwork | Published : May 20, 2024 1:36 AM

ಸಾರಾಂಶ

ಜಮೀನದಲ್ಲಿ ಕೊಳವೆ ಬಾವಿ ಕೊರೆಯುಸುವ ಪೂರ್ವಭಾವಿಯಾಗಿ ಜಮೀನು ಮಾಲೀಕರು 15 ದಿನ ಮುಂಚಿತವಾಗಿ ತಹಸೀಲ್ದಾರ್, ಗ್ರಾಪಂ, ಗ್ರಾಮ ಲೆಕ್ಕಿಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗ, ಪಂಚಾಯತ ಎಂಜಿನಿಯರಿಂಗ್ ವಿಭಾಗ, ಇಲ್ಲವೆ ಪುರಸಭೆ ಇವರಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಲಿಖಿತ ಮಾಹಿತಿ ನೀಡಬೇಕು. ಈ ನಿಯಮಗಳನ್ನು ಪಾಲಿಸದ ಜಮೀನು ಮಾಲೀಕರಿಗೆ ಹಾಗೂ ಬೋರ್ವೆಲ್ ಏಜೆನ್ಸಿ, ಮಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಜಮೀನದಲ್ಲಿ ಕೊಳವೆ ಬಾವಿ ಕೊರೆಯುಸುವ ಪೂರ್ವಭಾವಿಯಾಗಿ ಜಮೀನು ಮಾಲೀಕರು 15 ದಿನ ಮುಂಚಿತವಾಗಿ ತಹಸೀಲ್ದಾರ್‌, ಗ್ರಾಪಂ, ಗ್ರಾಮ ಲೆಕ್ಕಿಗ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗ, ಪಂಚಾಯತ ಎಂಜಿನಿಯರಿಂಗ್‌ ವಿಭಾಗ, ಇಲ್ಲವೆ ಪುರಸಭೆ ಇವರಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಲಿಖಿತ ಮಾಹಿತಿ ನೀಡಬೇಕು. ಈ ನಿಯಮಗಳನ್ನು ಪಾಲಿಸದ ಜಮೀನು ಮಾಲೀಕರಿಗೆ ಹಾಗೂ ಬೋರ್‌ವೆಲ್‌ ಏಜೆನ್ಸಿ, ಮಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನಸೌಧದ ಸಬಾಭವನದಲ್ಲಿ ಕೊಳವೆ ಭಾವಿ ಏಜನ್ಸಿ, ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ,

ಕೊಳವೆ ಬಾವಿ ಕೊರೆಯುವ ಕುರಿತು ಪಾಲಿಸಬೇಕಾದ ನಿಯಮಗಳ ಸಭೆಯಲ್ಲಿ ಮಾತನಾಡಿದರು.

ಕೊಳವೆ ಬಾವಿ ಕೊರೆಯುವಾಗ ನೀರು ಬಾರದೇ ವಿಫಲವಾದ ಕೊಳವೆ ಬಾವಿಯಾದಲ್ಲಿ ಅದನ್ನು ಸ್ಥಳದಲ್ಲಿಯೇ ಬೋರ್‌ವೆಲ್‌ ಏಜೆನ್ಸಿ, ಇಲ್ಲವೆ ಜಮೀನ ಮಾಲಕರು ಮುಚ್ಚಬೇಕು. ಕೊಳವೆ ಬಾವಿ ಕೊರೆಯುವ ಕಾರ್ಯ ಮುಗಿದ ನಂತರ ಕೊರೆಯುವ ಏಜನ್ಸಿಯವರು ಕೊಳವೆ ಬಾವಿಗೆ ಸಾರ್ವಜನಿಕರ ಸುರಕ್ಷತೆಗಾಗಿ ಸ್ಟೀಲ್ ಪ್ಲೇಟಿನಿಂದ ಮುಚ್ಚಬೇಕು ಎಂದು ತಾಕೀತು ಮಾಡಿದರು.

ಕೊರೆದ ಕೊಳವೆಬಾವಿಯನ್ನು ಮುಚ್ಚಳದ ಮೇಲಕ್ಕೆ ಒಂದರಿಂದ ಎರಡು ಅಡಿಗಳಷ್ಟು ಹಸಿ ಮಣ್ಣಿನಿಂದ ಮುಚ್ಚಿ ಮುಳ್ಳಿನ ಗಿಡಗಳನ್ನು ಇಡಬೇಕು ಎಂದು ಹೇಳಿದ ಅವರು, ಕೊಳವೆ ಬಾವಿ ಕೊರೆಯುವಾಗ ಇದರಂತೆ 21 ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ಸೂಚಿಸಿದರು.

ತಹಸೀಲ್ದಾರ್‌ ಮಜುಳಾ ನಾಯಕ, ಗಣಿ ಮತ್ತು ಭೂ ಗರ್ಭ ಇಲಾಖೆಯ ಮೋಹನ್ ಕುಮಾರ ಎಸ್, ಪರಿಸರ ಮಾಲಿನ್ಯ ಇಲಾಖೆಯ ಬಸವರಾಜ ಮಮದಾಪುರ, ಪ್ರೋಬೆಷನರಿ ಡಿ.ಎಸ್.ಪಿ ಮುತ್ತುರಾಜ ಖಾದ್ರಿ ಮಾತನಾಡಿದರು.

ಸಭೆಯಲ್ಲಿ ಎಸ್.ಆರ್.ಮುಜಗೊಂಡ, ಏಜನ್ಸಿ ಮಾಲೀಕರಾದ ಎಂ.ಎಸ್.ಬೇವನೂರ, ಟಿ.ಎಸ್.ಬಿರಾದಾರ, ಎಸ್.ಆರ್.ಕನ್ನೂರ, ಆರ್.ಎಸ್.ಬಿರಾದಾರ,ಜಿ.ಎಸ್.ಮಾದರ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪುರ,ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ, ಪಿ.ಎಸ್.ಐ ಎಚ್.ಎಂ.ಹೊಸಮನಿ, ಉಪ ತಹಸೀಲ್ದಾರ್‌ ಎ.ಎಸ್.ಗೋಟ್ಯಾಳ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Share this article