ಲೆಜೆಂಡ್ ಫುಟ್ಬಾಲ್ ಟೂರ್ನಮೆಂಟ್: ಹೊಯ್ಸಳ ತಂಡ ಗೆಲವು

KannadaprabhaNewsNetwork |  
Published : Apr 30, 2026, 02:30 AM IST
ಫುಟ್ಬಾಲ್‌ | Kannada Prabha

ಸಾರಾಂಶ

ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಲೆಜೆಂಡ್ ಫುಟ್ಬಾಲ್ ಟೂರ್ನಮೆಂಟ್ –೨೦೨೬ ರಲ್ಲಿ ಹಾಸನದ ಹೊಯ್ಸಳ ತಂಡ ಜಯ ದಾಖಲಿಸಿ ೫೦ ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.

ಸೋಮವಾರಪೇಟೆ: ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಲೆಜೆಂಡ್ ಫುಟ್ಬಾಲ್ ಟೂರ್ನಮೆಂಟ್ –೨೦೨೬ ರಲ್ಲಿ ಹಾಸನದ ಹೊಯ್ಸಳ ತಂಡ ಜಯ ದಾಖಲಿಸಿ ೫೦ ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.

ರನ್ನರ್ ಅಪ್ ಪ್ರಶಸ್ತಿಯನ್ನು ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ ಪಡೆಯುವ ಮೂಲಕ ೩೦ ಸಾವಿರ ರು. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.

ಬೆಸ್ಟ್ ಗೋಲ್‌ಕೀಪರ್ ಸುಂಟಿಕೊಪ್ಪ ತಂಡದ ಜಬ್ಬರ್, ಬೆಸ್ಟ್ ಸ್ಕೋರರ್ ಹೊಯ್ಸಳ ತಂಡದ ಹರೀಶ್, ಬೆಸ್ಟ್ ರಕ್ಷಣಾತ್ಮಕ, ಸರಣಿ ಪುರುಷೋತ್ತಮರಾಗಿ ವೇಣುಗೋಪಾಲ್ ಹಾಗೂ ಬೆಸ್ಟ್ ಸೀನಿಯರ್ ಆಟಗಾರ ಬಿ.ಎಸ್. ಯತೀಶ್ ಪ್ರಶಸ್ತಿಗಳನ್ನು ಪಡೆದರು. ಬಹುಮಾನವನ್ನು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿತರಿಸಿದರು. ಈ ಸಂದರ್ಭ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ್ತಿ ಪದ್ಮಪ್ರಿಯ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಬಾಲಕೃಷ್ಣ ನಂಬಿಯಾರ್, ಕಿರಗಂದೂರು ಪದ್ಮನಾಭ, ಚಕ್ರವರ್ತಿ ಸುರೇಶ್, ಕ್ರಿಯೇಟಿವ್ ಅಕಾಡೆಮಿ ಮಹೇಶ್, ಪ್ರದೀಪ್ ನೇಗಳ್ಳೆ, ಯಡೂರು ಚಂದ್ರ, ಪಿಡಿಒ ತಮ್ಮಯ್ಯ, ಗುತ್ತಿಗೆದಾರ ಸತೀಶ್, ಗಿರಿಧರ್ ಆಚಾರ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ