ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಇಂದಿನ ದಿನಮಾನಗಳಲ್ಲಿ ಟಿವಿ, ಮೊಬೈಲ್ ಹಾವಳಿಯಿಂದಾಗಿ ಪೌರಾಣಿಕ ನಾಟಕಗಳು ನಶಿಸುತ್ತಿವೆ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಕುಪ್ಪಹಳ್ಳಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಪಿತೃ ಪಕ್ಷದ ಅಂಗವಾಗಿ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಸುಂದರ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮಿಣ ಜನರಿಗೆ ಮನರಂಜನೆಯ ಬಹುಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ನಮ್ಮ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರಿಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು ಎಂದರು.ಪುರಾಣದ ಪಾತ್ರಗಳ ಮೂಲಕ ಬದುಕಿನ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿಸುತ್ತಾ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದರು. ಇಂದು ಮೊಬೈಲ್ ಸಂಸ್ಕೃತಿ ಎಲ್ಲವನ್ನೂ ಮರೆಮಾಚುತ್ತಿದೆ. ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಪಿತೃಪಕ್ಷ ಪುರಾತನ ಕಾಲದಿಂದಲೂ ನಡೆಯುತ್ತಿದ್ದು, ಹಿರಿಯರನ್ನು ಪೂಜಿಸುವ ಸಂಪ್ರದಾಯಿಕ ಶ್ರೇಷ್ಠ ಹಬ್ಬವಾಗಿದೆ ಎಂದರು.ಈ ವೇಳೆ ಪುರಸಭಾ ಸದಸ್ಯ ಬಸ್ ಸಂತೋಷ್, ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಜಯರಾಮೇಗೌಡ, ನಿವೃತ್ತ ಶಿಕ್ಷಕ ರಾಮೇಗೌಡ, ಗ್ರಾಪಂ ಸದಸ್ಯ ದರ್ಶನ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಸುನಿಲ್, ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಸೋಮನಾಯ್ಕ, ಮುಖಂಡರಾದ ವಿಶ್ವನಾಥ್, ಉಮೇಶ್ ನಾಯ್ಕ, ರಂಗಣ್ಣ,ರವೀಂದ್ರ, ರಾಮಯ್ಯ, ಅಲೆನಹಳ್ಳಿ ಕುಮಾರ್, ಪ್ರಸನ್ನ, ಕೆ.ಟಿ ಮಹೇಶ್ ಕುಮಾರ್, ಪ್ರಭಾಕರ್, ಡ್ರಾಮಾ ಮಾಸ್ಟರ್ ಸುನಿಲ್, ಕಲಾವಿದರಾದ ನಂಜುಂಡ, ರಘು ಹೊಸಹೊಳಲು ಸೇರಿದಂತೆ ಕುಪ್ಪಳ್ಳಿ ಗ್ರಾಮಸ್ಥರಿದರು.
ಸೆ.14 ರಂದು ಧಮ್ಮ ಚಕ್ಕ ಪಬತ್ತನಾ ಸುತ್ತ ಆಚರಣೆ - ಬಿ.ಅನ್ನದಾನಿಮಂಡ್ಯ:
ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಸೆ.14ರಂದು ಬೆಳಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಧಮ್ಮ ಚಕ್ಕ ಪಬತ್ತನಾ ಸುತ್ತ ಆಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಅನ್ನದಾನಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿ.ನರಸೀಪುರ ಬುದ್ಧ ವಿಹಾರದ ಪೂಜ್ಯಭಂತೇ ಸುಗತಪಾಲ ಬಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಎಸ್.ಮರಿಸ್ವಾಮಿ ಸಮಾರಂಭ ಉದ್ಘಾಟಿಸುವರು. ಸಭಾದ ಕರ್ನಾಟಕ ಅಧ್ಯಕ್ಷ ಎಸ್.ಸಿದ್ದರಾಜು ಭಾಗವಹಿಸುವರು ಎಂದರು.
ಬಿಎಸ್‌ಐ ರಾಜ್ಯ ಉಪಾಧ್ಯಕ್ಷ ಎಂ.ಸಿ.ಶಿವರಾಜು, ಮಹೇಂದ್ರ ಕಾಂಕಳೆ, ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರೊ.ಸಿದ್ದರಾಮು, ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಕೆ.ಎಂ.ಸುರೇಶ್, ಸಭಾದ ಜಿಲ್ಲಾ ಖಜಾಂಚಿ ಕೆ.ಸಿದ್ದಯ್ಯ, ಉಪಾಧ್ಯಕ್ಷೆ ಕೆ.ಪದ್ಮಾವತಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಯರಾಮು ಚೋಕನಹಳ್ಳಿ, ಪ್ರೊ.ಸಿದ್ದರಾಮು, ಕೆ.ಸಿದ್ದಯ್ಯ, ಕೆ.ವೆಂಕಟಾಚಲ ಇದ್ದರು.