ಕನ್ನಡಪ್ರಭ ವಾರ್ತೆ ಮೈಸೂರು
ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ, ಅಂಕಹಳ್ಳಿ, ಕೆಬ್ಬೆಪುರ ಮುಂತಾದ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರವಾಗಿ ಅವರು ಮತಯಾಚಿಸಿದರು.
ದೇಶದಲ್ಲಿ ಮೋದಿ ಅವರ ಆಡಳಿತ ದಿಕ್ಕು ತಪ್ಪಿದ್ದು ಕಾಪೊ೯ರೇಟ್ ಕುಳಗಳ ಸಾಲ ಮನ್ನಾ ಮಾಡಿ, ರೈತರ ಸಾಲ ಮನ್ನಾ ಮಾಡದೆ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆಯನ್ನೂ ನೀಡದೆ ಅನ್ಯಾಯ ಮಾಡುತಿದ್ದಾರೆ ಎಂದು ಆರೋಪಿಸಿದರು.ಸಂವಿಧಾನ ಬದಲಿಸುತ್ತೇವೆ ಎಂದು ಅವರ ಸಂಸದರು ಬಹಿರಂಗವಾಗಿ ಹೇಳಿಕೆ ಕೊಡುತಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನುಡಿದಂತೆ ನಡೆಯುವ ಜನಪರವಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಆದಿಜಾಂಬವ ಸಂಘದ ವಿಭಾಗೀಯ ಅಧ್ಯಕ್ಷ ಎಡತೊರೆ ನಿಂಗರಾಜ್, ಚಾಮರಾಜನಗರ ಜಿಲ್ಲಾಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಿಟ್ರೆಮಹದೇವು, ಮುಖಂಡರಾದ ನರಸಿಂಹ, ಗೋಪಾಲ್, ಅಂಕಹಳ್ಳಿ ಸಿದ್ದು, ದಾಸಯ್ಯ, ರಾಚಪ್ಪ, ಸೌರಭ್ ಮೊದಲಾದ ಹಲವು ಮುಖಂಡರು ಮತಯಾಚಿಸಿದರು.