ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರಗೆ ಸನ್ಮಾನ

KannadaprabhaNewsNetwork |  
Published : Mar 22, 2026, 02:30 AM IST
20ಜಿಡಿಜಿ12 | Kannada Prabha

ಸಾರಾಂಶ

ವೇತನ ತಾರತಮ್ಯ, ಸೇವಾ ಭದ್ರತೆ, ಪಪೂ ಇಲಾಖೆಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ತರುವ ವಿಷಯ, ಪ್ರಾಚಾರ್ಯರ ಬಡ್ತಿ ಮುಂತಾದ ಸಮಸ್ಯೆಗಳ ಕುರಿತು ಸದನದಲ್ಲಿ ಸಂಕನೂರ ಅವರು ನೌಕರರ ಪರವಾಗಿ ಪರಿಣಾಮಕಾರಿಯಾಗಿ ವಿಷಯ ಮಂಡಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೀವ್ರ ಕಾಳಜಿ ತೋರಿಸಿದಕ್ಕಾಗಿ ನೌಕರರ ಬಳಗ ಸಂತಸ ವ್ಯಕ್ತಪಡಿಸಿತು.

ಗದಗ: ಕಳೆದ ಮೂರು ದಶಕಗಳಿಂದ ಪದವಿಪೂರ್ವ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತ ನಿರಂತರವಾಗಿ ಅವರ ನೋವು ನಲಿವುಗಳಲ್ಲಿ ಜತೆಗಿರುವ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ವಿ. ಸಂಕನೂರ ಅವರು ಹ್ಯಾಟ್ರಿಕ್ ಗೆಲುವು ಸಾಧಿಸುವುದು ಖಚಿತ ಎಂದು ನೌಕರರ ಸಂಘದ ಹಿರಿಯ ಮುಖಂಡ ಜಿ.ಎಂ. ಹಕಾರಿ ವಿಶ್ವಾಸ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಪ್ರೊ. ಎಸ್.ವಿ. ಸಂಕನೂರ ಅಭಿಮಾನಿ ಬಳಗದಿಂದ ಸಂಕನೂರ ಅವರ ಗೃಹಕಚೇರಿಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ವೇತನ ತಾರತಮ್ಯ, ಸೇವಾ ಭದ್ರತೆ, ಪಪೂ ಇಲಾಖೆಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ತರುವ ವಿಷಯ, ಪ್ರಾಚಾರ್ಯರ ಬಡ್ತಿ ಮುಂತಾದ ಸಮಸ್ಯೆಗಳ ಕುರಿತು ಸದನದಲ್ಲಿ ಸಂಕನೂರ ಅವರು ನೌಕರರ ಪರವಾಗಿ ಪರಿಣಾಮಕಾರಿಯಾಗಿ ವಿಷಯ ಮಂಡಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೀವ್ರ ಕಾಳಜಿ ತೋರಿಸಿದಕ್ಕಾಗಿ ನೌಕರರ ಬಳಗ ಸಂತಸ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ರಾಜ್ಯ ಪಪೂ ಉಪನ್ಯಾಸಕರ ಸಂಘ ಕೇಂದ್ರ ಕಾರ್ಯಕಾರಿಣಿ ಮಂಡಳಿ ಸದಸ್ಯ ಎಸ್.ಎಚ್. ಬೀರಕಬ್ಬಿ, ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಜಿಲ್ಲಾ ಅಧ್ಯಕ್ಷ ಎ.ಎಂ. ಅಂಗಡಿ, ಕೇಂದ್ರ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ವೈ.ಆರ್. ಬೇಲೇರಿ, ಕೆ.ಎಸ್. ಗಂಗನಗೌಡ, ಎಸ್.ಎ. ಆವಾರಿ, ಕಾರ್ಯದರ್ಶಿ ಎಸ್.ಐ. ಮೇಟಿ, ಉಪಾಧ್ಯಕ್ಷ ಪ್ರಾ.ಬಿ.ಎಸ್. ರಾಠೋಡ, ಡಿ.ಎಲ್. ಪಾಟೀಲ, ಬಿ.ವಿ. ಪಾಟೀಲ, ಈರಣ್ಣ ಹಾದಿಮನಿ, ಶರಣು ಚೇಗರೆಡ್ಡಿ, ಅಶ್ವಿನಿ ಜಾಡರ, ರುದ್ರೇಶ ಬಡಿಗೇರ, ಸುರೇಶ ಸಣ್ಣೇಲಿ, ಮಂಜುನಾಥ ಕೊಳ್ಳಿ, ಎಫ್.ಎಸ್. ಬೆಳವಗಿ, ವೈ.ಎಸ್. ವಾಲ್ಮಿಕಿ, ಎಂ.ಎಸ್. ಉಳ್ಳಾಗಡ್ಡಿ, ಪ್ರಶಾಂತ ಪಾಟೀಲ, ಪಪೂ ಮಹಾವಿದ್ಯಾಲಯದ ನೌಕರರ ಸಂಘ, ಕರ್ನಾಟಕ ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಸಂಕನೂರ ಸರ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಸಮಾಜಸೇವೆಗೆ ಮುಂದಾಗಿ

ಗದಗ: ಸಮಾಜ ಸೇವೆ ಮಾಡುವುದರೊಂದಿಗೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎಂದು ಜಿಲ್ಲಾ ಯುತ್‌ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ತಿಳಿಸಿದರು.ಬೆಟಗೇರಿಯ ಹೊಸಪೇಟೆ ಚೌಕ್ ನಗರದಲ್ಲಿ ಕನ್ನಡ ಜನಾಭಿವೃದ್ಧಿ ವೇದಿಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ವತಿಯಿಂದ ಡಾ. ಪುನೀತರಾಜಕುಮಾರ ಜನ್ಮದಿನಾಚರಣೆ ಅಂಗವಾಗಿ ನಡೆದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವ ಉದ್ಯಮಿ ಸೂರಜಸಿಂಗ್ ಜಮಾದಾರ ಮಾತನಾಡಿ, ಸತತವಾಗಿ 16 ವರ್ಷಗಳಿಂದ ಜನಸೇವೆ, ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ತಮ್ಮದೇ ಆದ ಕಾರ್ಯಗಳ ಮೂಲಕ ಈ ಭಾಗದಲ್ಲಿ ಜನಪ್ರಿಯತೆಯನ್ನು ಗಳಿಸಿರುವ ಹುಲ್ಲೇಶ ಭಜಂತ್ರಿ ಅವರ ಕಾರ್ಯ ಶ್ಲಾಘನೀಯ ಎಂದರು.ರಾಜೀವಗಾಂಧಿ ಬ್ರಿಗೇಡ್ ರಾಜ್ಯಾಧ್ಯಕ್ಷ ಬಿ.ಎಂ. ನದ್ದಿಮುಲ್ಲಾ, ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಸೈಯದಖಾಲಿದ ಕೊಪ್ಪಳ ಮಾತನಾಡಿದರು.

ಕನ್ನಡ ಜನಾಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಹುಲ್ಲೇಶ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ, ಹಿರಿಯರಾದ ಮನ್ಸೂಖಲಾಲ ಪುಣೇಕರ, ಚನ್ನಮಲ್ಲಪ್ಪ ತಟ್ಟಿ, ಕುಮಾರ ನೆಟಗತ್ತಿ, ಗಣೇಶ ಮುಟಗಾರ, ಬಸಣ್ಣ ಕೊತಂಬ್ರಿ, ಶಿವರಾಜ ಮಡಿವಾಳರ, ಶ್ರೀಕಾಂತ ಭಜಂತ್ರಿ, ಭೀಮಸೇನಸಾ ರಾಯಭಾಗಿ, ಜಿಲ್ಲಾಧ್ಯಕ್ಷ ಗಣೇಶ ಹಾತಲಗೇರಿ ಸೇರಿದಂತೆ ಇತರರು ಇದ್ದರು. ಉಮೇಶ ಹಿರೇಮಠ ಸ್ವಾಗತಿಸಿದರು. ಆರ್.ಎಲ್. ಮೇಳೆನ್ನವರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಳದಲ್ಲಿ ಮೂಲ ಸೌಕರ್ಯ ಇಲ್ಲದೇ ನಿವಾಸಿಗಳ ಪರದಾಟ
ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳ