ಹನೂರು ತೋಟದ ಮನೆಯಲ್ಲಿ ಚಿರತೆ ದಾಳಿ: ಎರಡು ನಾಯಿ ಸಾವು

KannadaprabhaNewsNetwork |  
Published : Jul 09, 2024, 12:59 AM ISTUpdated : Jul 09, 2024, 11:32 AM IST
8ಸಿಎಚ್‌ಎನ್‌58ಹನೂರು  ಎಲೆ ಮಾಳ ರಸ್ತೆಯಲ್ಲಿ ಬರುವ ತೋಟದ ಮನೆಯಲ್ಲಿ ಚಿರತೆ ನಾಯಿಯನ್ನು ಕೊಂದಿರುವುದು. | Kannada Prabha

ಸಾರಾಂಶ

ತೋಟದ ಮನೆಯಲ್ಲಿದ್ದ ಎರಡು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ಎರಡನ್ನೂ ಕೊಂದು ಒಂದನ್ನು ಅಲ್ಲೇ ಬಿಟ್ಟು ಮತ್ತೊಂದನ್ನು ಹೊತ್ತೊಯ್ದಿರುವ ಘಟನೆ ಹನೂರಿನ ಎಲ್ಲೆಮಾಳ ಗ್ರಾಮದಲ್ಲಿ ರಾತ್ರಿ ನಡೆದಿದೆ.

ಹನೂರು : ತೋಟದ ಮನೆಯಲ್ಲಿದ್ದ ಎರಡು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ಎರಡನ್ನೂ ಕೊಂದು ಒಂದನ್ನು ಅಲ್ಲೇ ಬಿಟ್ಟು ಮತ್ತೊಂದನ್ನು ಹೊತ್ತೊಯ್ದಿರುವ ಘಟನೆ ಎಲ್ಲೆಮಾಳ ಗ್ರಾಮದಲ್ಲಿ ರಾತ್ರಿ ನಡೆದಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಬಫರ್ ಜೋನ್‌ನ ಎಲ್ಲೇಮಾಳ ರಸ್ತೆಯ ರೈತ ನಾಗಮಧು ಅವರಿಗೆ ಸೇರಿದ ತೋಟದ ಮನೆಯಲ್ಲಿದ್ದ ಎರಡು ನಾಯಿಗಳನ್ನು ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಎರಡು ನಾಯಿಯನ್ನೂ ಕೊಂದು ಒಂದು ನಾಯಿಯನ್ನು ಹೊತ್ತೊಯ್ದಿದೆ.

ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಬಪ್ಪರ್ ಜೋನ್‌ನ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆ ತೋಟದ ಮನೆಯಲ್ಲಿ ಇದ್ದಂತಹ ಎರಡು ನಾಯಿಗಳನ್ನು ಕೊಂದು ಒಂದನ್ನು ಅಲ್ಲೇ ಬಿಟ್ಟು ಮತ್ತೊಂದನ್ನು ಹೊತ್ತೊಯ್ದಿರುವ ಹಿನ್ನೆಲೆ ತೋಟದ ಮನೆಯಲ್ಲಿ ವಾಸಿಸುತ್ತಿರುವ ಈ ಭಾಗದ ರೈತರು ಭಯ ಬೀತರಾಗಿದ್ದಾರೆ.

ಘಟನೆಯ ವಿಚಾರ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಪ್ರವೀಣ್ ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಿ ಘಟನಾ ಸ್ಥಳಕ್ಕೆ ತೆರಳಿದ ಸಿಬ್ಬಂದಿ ತೋಟದ ಮನೆಯಲ್ಲಿ ಇದ್ದಂತಹ ನಾಯಿಗಳನ್ನು ಕೊಂದು ಒಂದನ್ನು ಅಲ್ಲೇ ಬಿಟ್ಟು ಮತ್ತೊಂದನ್ನು ಹೊತ್ತೊಯ್ದಿರುವ ಬಗ್ಗೆ ರೈತ ನಾಗಮಧು ಅವರಿಂದ ಮಾಹಿತಿ ಪಡೆದು ರಾತ್ರಿ ವೇಳೆ ಆಗಿರುವ ಘಟನೆಯ ಬಗ್ಗೆ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಸಿಬ್ಬಂದಿ ವರ್ಗದವರು ರೈತ ನಾಗಮಧು ಅವರ ತೋಟದ ಮನೆಯ ಹಾಗೂ ಜಮೀನಿನ ಬಳಿ ಪರಿಶೀಲಿಸಿದ್ದಾರೆ. ಹೀಗಾಗಿ ರಾತ್ರಿವೇಳೆ ಚಿರತೆ ಬಂದು ಹೋಗಿರುವ ಬಗ್ಗೆ ಅಲ್ಲಿನ ರೈತರು ಹಾಗೂ ತೋಟದ ಮನೆಯಲ್ಲಿ ವಾಸಿಸುವ ನಿವಾಸಿಗಳು ತಮ್ಮ ಜನ ಜಾನುವಾರು ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಕ್ಷಣೆಯ ಸ್ಥಳದಲ್ಲಿ ಜಾನುವಾರನ್ನು ಕಟ್ಟಿ ಹಾಕಬೇಕು. ಈ ಭಾಗದಲ್ಲಿ ಚಿರತೆ ಕಂಡು ಬಂದರೆ ಅರಣ್ಯ ಇಲಾಖೆಗೆ ತಕ್ಷಣ ತಿಳಿಸಿ. ನಮ್ಮ ಸಿಬ್ಬಂದಿ ವರ್ಗದವರು ಘಟನೆ ಸ್ಥಳಕ್ಕೆ ಬರಲಿದ್ದಾರೆ. ಈ ಭಾಗದಲ್ಲಿ ರಾತ್ರಿ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ನಿಗವಹಿಸಲಿದ್ದಾರೆ. ರೈತರು, ಈ ಭಾಗದ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗೆ ಸಹಕಾರ ನೀಡಬೇಕು.

ಪ್ರವೀಣ್, ವಲಯ ಅರಣ್ಯ ಅಧಿಕಾರಿ, ಬಫರ್‌ ಜೋನ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ. 

ನಿತ್ಯ ತೋಟದ ಮನೆಯಲ್ಲಿ ಇರುತ್ತಿದ್ದ ನಾಯಿಗಳಿಗೆ ಊಟ ಹಾಕಿ ಸಂಜೆ ಮನೆಗೆ ಬಂದಿದ್ದೇವೆ. ಬೆಳಿಗ್ಗೆ ತೋಟಕ್ಕೆ ಹೋಗಿ ನೋಡಿದಾಗ ಒಂದು ನಾಯಿ ಸತ್ತು ಬಿದ್ದಿತ್ತು. ಇನ್ನೊಂದನ್ನು ಚಿರತೆ ಒತ್ತೊಯ್ದಿರುವ ಹೆಜ್ಜೆ ಗುರುತು ತೋಟದಲ್ಲೆಲ್ಲ ಇದೆ. ಹೀಗಾಗಿ ಈ ಭಾಗದಲ್ಲಿ ಕ್ರೂರ ಪ್ರಾಣಿಗಳು ಸಂಚರಿಸುವುದರಿಂದ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ನಾಗಮಧು, ರೈತ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...