ಹಳಿಯೂರು ಪ್ರೌಢಶಾಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮ
ಅತ್ಯಂತ ಪ್ರಾಚೀನ ಮತ್ತು ದೀರ್ಘಕಾಲದ ಬ್ಯಾಕ್ಟೀರಿಯಾ ಸೋಂಕಿನ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕುಷ್ಟರೋಗ ಸಾಂಕ್ರಾಮಿಕ ಕಾಯಿಲೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟ್ಟದಹಳ್ಳಿ ಯಿಂದ ಸಮೀಪದ ಹಳಿಯೂರು ಪ್ರೌಢಶಾಲೆಯಲ್ಲಿ ನಡೆದ ಸ್ಪರ್ಶ್ ಕುಷ್ಟರೋಗ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಪ್ರತಿ ವರ್ಷ ಜ.30 ರಿಂದ ಫೆ.13 ರವರೆಗೆ ಈ ಅಭಿಯಾನ ನಡೆಯುತ್ತದೆ, ಕುಷ್ಟರೋಗ ಮೈಕ್ರೋ ಬ್ಯಾಕ್ಟೀರಿಯಾಂ ಲೆಪ್ರೇ ಎಂಬ ಬ್ಯಾಕ್ಟೀರಿಯಾ ರೋಗಾಣುಕಾರಕ. ಇದು ಚರ್ಮದ ಮತ್ತು ನರಗಳ ಮೇಲೆ ಪ್ರಭಾವ ಉಂಟುಮಾಡುತ್ತದೆ. ಸೋಂಕಿರುವ ವ್ಯಕ್ತಿಯೊಂದಿಗೆ ದೀರ್ಘಕಾಲದ ಸಂಪರ್ಕದಲ್ಲಿರುವ ಆರೋಗ್ಯವಂತರಿಗೂ ಹರಡುತ್ತದೆ ಎಂದು ಹೇಳಿದರು. ನಿಧಾನ ಗತಿಯಲ್ಲಿ ಹರಡುವ ಈ ರೋಗ ಸರಿಸುಮಾರು ಆರು ತಿಂಗಳಿನಿಂದ ಏಳು ವರ್ಷ ಬೇಕಾಗಬಹುದು, ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಾಣಿಸಿಕೊಳ್ಳಬಹುದು, ಕೈ ಅಥವಾ ಕಾಲುಗಳಲ್ಲಿ ಸ್ಪರ್ಶ ಜ್ಞಾನವಿಲ್ಲದಿರುವುದು ಮತ್ತು ಜೋಮು ಹಿಡಿಯುವುದು, ಮುಖದ ಮೇಲೆ ಕಿವಿ ಮೇಲೆ ಎಣ್ಣೆ ಯಂತಹ ಹೊಳಪು ಇರುವುದು ಈ ರೋಗದ ಪ್ರಮುಖ ಲಕ್ಷಣ. 2030ರ ವೇಳೆಗೆ ಕುಷ್ಟರೋಗವನ್ನು ದೇಶದಿಂದ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದೇವೆ.1986 ರಿಂದ ಕರ್ನಾಟಕದಲ್ಲಿ ಬಹು ವಿಧ ಔಷಧಿ ಚಿಕಿತ್ಸೆ ಮೂಲಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತಿದೆ ಎಂದು ತಿಳಿಸಿದರು. ತಾಲೂಕು ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಪ್ರಭಾವತಿ ಮಾತನಾಡಿ ಕುಷ್ಟ ರೋಗವೆಂದು ಹೇಳಿದ ತಕ್ಷಣ ಜನ ಬೆಚ್ಚಿ ಬೀಳುವರು. ಕಾರಣ ಜನರ ಮೂಡ ನಂಬಿಕೆಗಳು ಎಂದರು. ಇದರಿಂದ ಹೊರ ಬರಬೇಕು ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದಲ್ಲಿ ಒಂದರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಅಲ್ಬೆಂಡಜೋಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು. ಪುರಸಭೆ ಸದಸ್ಯ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಸದಾಶಿವಸ ಶಾಲೆ ಮುಖ್ಯ ಶಿಕ್ಷಕರು ಮಂಜುನಾಥ್, ಶಿಕ್ಷಕ ಪ್ರದೀಪ್ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಜಿಲ್ಲಾ ಕುಷ್ಟರೋಗ ಮೇಲ್ವಿಚಾರಕರು, ತಾಲೂಕು ಆಶಾ ಮೇಲ್ವಿ ಚಾರಕರು, ಸಮುದಾಯ ಆರೋಗ್ಯ ಅಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರಗಳ ಕಾರ್ಯಕ್ರಮ ನಡಸಿ ಬಹುಮಾನ ನೀಡಲಾಯಿತು.ಪ್ರತಿಜ್ಞಾ ವಿಧಿ ಬೋಧಿಸಲಾಯಿತು.-
12ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಹಳಿಯೂರು ಪ್ರೌಢಶಾಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದಲ್ಲಿ ತಾಲೂಕು ಆರೋಗ್ಯಾದಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಮತ್ತಿತರು ಇದ್ದರು.