ಕಾರ್ಬನ್ ಎಮಿಶನ್ ಮುಕ್ತ ಭಾರತ ನಮ್ಮೆಲ್ಲರ ಆದ್ಯತೆಯಾಗಲಿ: ಡಾ. ನಾರಾಯಣ ಸಬಾಹಿತ್

KannadaprabhaNewsNetwork |  
Published : Sep 27, 2026, 02:45 AM IST
ಮಹಾವೀರ ಕಾಲೇಜಿನಲ್ಲಿ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನಕಾರ್ಬನ್ ಎಮಿಶನ್ ಮುಕ್ತ ಭಾರತ ನಮ್ಮೆಲ್ಲರ ಆದ್ಯತೆಯಾಗಲಿ: ಡಾ. ನಾರಾಯಣ ಸಬಾಹಿತ್ | Kannada Prabha

ಸಾರಾಂಶ

ಜಾಗತಿಕವಾಗಿ 2.4 ಬಿಲಿಯನ್ ಜನಸಂಖ್ಯೆಗೆ ವಾಸಯೋಗ್ಯವಾಗಿರುವ ನಮ್ಮ ಭೂಮಿಯಲ್ಲಿ ಈಗಾಗಲೇ 8.3 ಬಿಲಿಯನ್ ಜನಸಂಖ್ಯೆಯಿದೆ. ಭಾರತದಲ್ಲೂ 1.2 ಬಿಲಿಯಕ್ಕೆ ಬದಲಾಗಿ 1.48 ಬಿಲಿಯನ್ ಜನಸಂಖ್ಯೆಯ ಒತ್ತಡವಿದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇದೀಗ ಬರೇ ಲ್ಯಾಪ್ ಟಾಪ್ ಉತ್ಪಾದನೆಯೊಂದರಿಂದಲೇ ಜಲ ಸಂಪನ್ಮೂಲ ಸಹಿತ ಪರಿಸರ ಅಪಾಯದಲ್ಲಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಜಾಗತಿಕವಾಗಿ 2.4 ಬಿಲಿಯನ್ ಜನಸಂಖ್ಯೆಗೆ ವಾಸಯೋಗ್ಯವಾಗಿರುವ ನಮ್ಮ ಭೂಮಿಯಲ್ಲಿ ಈಗಾಗಲೇ 8.3 ಬಿಲಿಯನ್ ಜನಸಂಖ್ಯೆಯಿದೆ. ಭಾರತದಲ್ಲೂ 1.2 ಬಿಲಿಯಕ್ಕೆ ಬದಲಾಗಿ 1.48 ಬಿಲಿಯನ್ ಜನಸಂಖ್ಯೆಯ ಒತ್ತಡವಿದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇದೀಗ ಬರೇ ಲ್ಯಾಪ್ ಟಾಪ್ ಉತ್ಪಾದನೆಯೊಂದರಿಂದಲೇ ಜಲ ಸಂಪನ್ಮೂಲ ಸಹಿತ ಪರಿಸರ ಅಪಾಯದಲ್ಲಿದೆ. ಹಾಗಾಗಿ ಸುಸ್ಥಿರ ಅಭಿವೃದ್ಧಿಗಾಗಿ 2070ರೊಳಗೆ ಶೂನ್ಯ ಕಾರ್ಬನ್ ಎಮಿಶನ್ ಗುರಿ ನಮ್ಮ ಮುಂದಿದೆ. ಕನಿಷ್ಠ 2050 ರೊಳಗೆ ಭಾರತೀಯರು ಇದನ್ನು ಸಾಧಿಸಬೇಕು. ಮಾಹೆ ಈ ನಿಟ್ಟಿನಲ್ಲಿ 2040ರೊಳಗೆ ಶೂನ್ಯ ಕಾರ್ಬನ್ ಎಮಿಶನ್ ಗುರಿ ಹೊಂದಿದೆ ಎಂದು ಮಾಹೆ ಸಲಹೆಗಾರ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಡಾ. ನಾರಾಯಣ ಸಬಾಹಿತ್ ಹೇಳಿದರು.

ಅವರು ಮಂಗಳೂರು ವಿ.ವಿಯ ಅರ್ಥಶಾಸ್ತ್ರ ಸಂಘದ ಸಹಯೋಗದೊಂದಿಗೆ ಮೂಡುಬಿದಿರೆಯ ಮಹಾವೀರ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗವು ಶನಿವಾರ ಹಮ್ಮಿಕೊಂಡ ''''''''''''''''ಹಣಕಾಸಿನ ಒಳಗೊಳ್ಳುವಿಕೆ, ಕೌಶಲ ಭಾರತ ಮತ್ತು ಉದ್ಯಮಶೀಲತೆ: ಸಮಗ್ರ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆ ಕುರಿತ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ನೀರು, ವಿದ್ಯುತ್ , ಸೌರ ಶಕ್ತಿ, ಪವನ ಶಕ್ತಿಯ ಸದ್ಬಳಕೆಯ ಜತೆಗೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ನಿರ್ವಹಿಸುವ ಗ್ರೀನ್ ಕ್ಲಬ್ ಮೂಲಕ ಜಾಗೃತಿ ಆರಂಭವಾಗಬೇಕಿದೆ ಎಂದವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ರಿಸರ್ವ್ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಸ್ವಪ್ನಿಲ್ ಶಾನು ಭಾರ್ಗವ್ ಮಾತನಾಡಿ ಕೌಶಲ ಆರ್ಥಿಕತೆಯ ಮೂಲ ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಎಂಜಿನಿಯರಿಂಗ್ , ಮೆಡಿಕಲ್ ಶಿಕ್ಷಣದ ನಡುವೆ ಆರ್ಥಿಕ , ವಾಣಿಜ್ಯ ಶಿಕ್ಷಣವೂ ಬದುಕಿನಲ್ಲಿ ಮಹತ್ವದ್ದಾಗಿದೆ. ಇದರ ವಿದ್ಯಾರ್ಥಿಗಳಿಗೂ ಉಜ್ವಲ ಭವಿಷ್ಯವಿದೆ ಎಂದರು.

ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥೆ ಗೀತಾ ಕುಮಾರಿ, ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಲೆ. ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ಅತಿಥೇಯ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿ ಮಂಗಳೂರು ವಿವಿಯ ಅರ್ಥಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ| ಶ್ರೀಲತಾ ಕಮಿಲ ವಂದಿಸಿದರು. ಸಮ್ಮೇಳನದ ಸಂಚಾಲಕರ ಬಳಗದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಹ ಪ್ರಾದ್ಯಾಪಕ ಡಾ. ಮಹೇಶ್ ಶೆಟ್ಟಿ ಎಚ್. ಕಾರ್ಯಕ್ರಮ ನಿರೂಪಿಸಿದರು.

ಡಿಜಿಟಲ್ ಆರ್ಥಿಕತೆ ಮತ್ತು ಸಬಲೀಕರಣ!

ಆರ್ಥಿಕ ಚಟುವಟಿಕೆಗಳಿಗಾಗಿ ಭಾರತದಲ್ಲಿ ಕ್ರಾಂತಿಯ ರೂಪದಲ್ಲಿ ತೆರೆಯಲಾದ ಜನ ಧನ ಖಾತೆಗಳಲ್ಲಿ 78% ಖಾತೆಗಳು ಗ್ರಾಮೀಣ ಜನತೆಯದ್ದಾಗಿವೆ. ಈ ಪೈಕಿ 56% ಮಹಿಳೆಯರದ್ದಾಗಿವೆ. 89% ವಯಸ್ಕ ಭಾರತೀಯರಲ್ಲೀಗ ಬ್ಯಾಂಕ್ ಖಾತೆಯಿದೆ. ದಿನವೊಂದಕ್ಕೆ 60 -70 ಕೋಟಿ ರೂ ಡಿಜಿಟಲ್ ಪೇ ವಹಿವಾಟು ನಡೆಸುವ ಭಾರತ ಜಾಗತಿಕ ಡಿಜಿಟಲ್ ಪೇ ವ್ಯವಹಾರದಲ್ಲಿ 49% ಹೊಂದಿದೆ. ಹೀಗೆ ಡಿಟಿಟಲ್ ವ್ಯಾಪ್ತಿಗೆ ಒಳಪಡಿಸಲಾಗಿದೆ ಎನ್ನುವುದಕ್ಕಿಂತ ಅವರ ಸಬಲೀಕರಣವಾಗಿದೆ ಎನ್ನುವುದೇ ಅರ್ಥಪೂರ್ಣ ಎಂದು ಬ್ಯಾಂಕ್ ಆಫ್ ಬರೋಡದ ಮುಖ್ಯ ವ್ಯವಸ್ಥಾಪಕ ಎಂ. ರವೀಂದ್ರ ರೈ ಹೇಳಿದರು. ಸಮಾರಂಭದಲ್ಲಿ ಆನ್ ಲೈನ್ ಮೂಲಕ ಪಾಲ್ಗೊಂಡ ಅವರು ಸಾಲ ಸಹಿತ ಆರ್ಥಿಕ ಶಿಸ್ತು, ಸ್ಟಾರ್ಟಪ್ , ಉದ್ಯಮಗಳಿಗೆ ಬೆಂಬಲ, ಹಸುರೀಕರಣಕ್ಕೆ ಆದ್ಯತೆಯೊಂದಿಗೆ ನಾವು ಬೆಳೆಯಬೇಕಾಗಿದೆ ಎಂದ ಅವರು ಉತ್ತರ ಭಾರತದಲ್ಲಿ ಸಾಂಪ್ರದಾಯಿಕ ಗಾಣದ ಮೂಲಕ ಕಬ್ಬಿನ ಹಾಲು ತೆಗೆದು ಮಾರುವಾತ ಡಿಜಿಪೇ ಮೂಲಕ ಹಣ ಸ್ವೀಕರಿಸಿದ ಅಭಿವೃದ್ಧಿಯ ಭಾರತದ ಉದಾಹರಣೆಯನ್ನು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶ ವಿಗ್ರಹ ವಿಸರ್ಜನೆ ಸಂದರ್ಭ ನಾಲ್ಕು ಮಂದಿಗೆ ವಿದ್ಯುತ್ ಸ್ಪರ್ಶ : ಇಬ್ಬರು ಗಂಭೀರ
ಕಾರಿಡರ್‌ ಆವರಣಗೋಡೆ ಕುಸಿತ: ಓರ್ವ ಗಂಭೀರ, ಮೂವರಿಗೆ ಗಾಯ