ಹೊಸಕೋಟೆ: ಬ್ಯಾಂಬೂ ಆಫ್ ಬೆಂಗಳೂರು ನಮ್ಮ ಭಾರತ ದೇಶಕ್ಕೆ ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಿದಿರು ನೆಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೋಟೂರು ಗ್ರಾಮದ ದಿ ಗ್ರೀನ್ ಸ್ಕೂಲ್ ಆಫ್ ಬೆಂಗಳೂರು ಶಾಲೆಯಲ್ಲಿ ನಡೆದ ಬ್ಯಾಂಬೂ ಫಾರ್ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಕೇವಲ ವೈಜ್ಞಾನಿಕ ಕೌತುಕವಾಗಿ ಉಳಿದಿಲ್ಲ. ಮನುಕುಲ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟಲು ರಾಜ್ಯದಲ್ಲಿ 5.43 ಕೋಟಿ ಸಸಿ ನೆಡುವ ಯೋಜನೆ ರೂಪಿಸಲಾಗಿದೆ. ಸಸ್ಯ ಶ್ಯಾಮಲ ಯೋಜನೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಗುಡ್ಡ ಕುಸಿತ, ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸುತ್ತಿವೆ. ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ಹದಗೆಟ್ಟಿದೆ. ವಿಷಗಾಳಿ ಸೇವನೆಯಿಂದ ಸಾಕಷ್ಟು ಜನ ಸತ್ತಿದ್ದಾರೆ ಎಂದು ವಿಷಾದಿಸಿದರು.ನಮ್ಮ ರಾಜ್ಯದಲ್ಲಿಯೂ ಕಲುಷಿತ ನೀರು ಸೇವನೆಯಿಂದ ಸಾವುನೋವುಗಳು, ವಿವಿಧ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆಲ್ಲ ಮನುಷ್ಯನಲ್ಲಿರುವ ಸ್ವಾರ್ಥ, ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯವೇ ಕಾರಣ. ಇದು ಹೀಗೆ ಮುಂದುವರಿದರೆ ಮನುಕುಲಕ್ಕೆ ಮಾರಕವಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ, ಜಲಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಅರಿವು ಮೂಡಿಸಬೇಕು ಎಂದು ಹೇಳಿದರು.
ನಿವೃತ್ತ ಅರಣ್ಯ ಅಧಿಕಾರಿ ಪುನತೀ ಶ್ರೀಧರ್ ಮಾತನಾಡಿ, ಬಿದಿರು ಬೆಳೆಗೆ ಸಾಕಷ್ಟು ಅವಕಾಶಗಳಿವೆ. ಸರ್ಕಾರದ ಸಂಪೂರ್ಣ ಸಹಕಾರ ಬೇಕಿದೆ. ಅರಣ್ಯ ಹಾಗೂ ಕೈಗಾರಿಕೆ ಅಭಿವೃದ್ಧಿ ಆದರೆ ಸ್ಥಳೀಯರ ಆದಾಯ ಹೆಚ್ಚಾಗಲು ಸಾಧ್ಯ. ಬಿದಿರು ಆಮ್ಲಜನಕವನ್ನು ಹೆಚ್ಚಾಗಿ ಹೊರಸೂಸುವ ಹಿನ್ನೆಲೆಯಲ್ಲಿ ಪರಿಸರದಲ್ಲಿನ ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮುತ್ಸಂದ್ರ ಬಾಬುರೆಡ್ಡಿ, ನಿವೃತ್ತ ಅರಣ್ಯ ಅಧಿಕಾರಿ ಫುನಾತಿ ಶ್ರೀಧರ್, ಬಿಬಿಎಂಪಿ ಡಿಸಿಎಫ್ ಸ್ವಾಮಿ, ಸ್ಕೀಮ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ಗೌಡ, ಹಿರಿಯ ಪರಿಸರವಾದಿ ಪ್ರಕೃತಿ ಪ್ರಸನ್ನ, ಪ್ರಾಂಶುಪಾಲೆ ಉಷಾ ಅಯ್ಯರ್, ಮುಖಂಡ ಬಿ.ಎಂ.ಪ್ರಕಾಶ್, ವಿಜಯೇಂದ್ರ ಬಾಬು, ಮುತ್ಕೂರು ಮುನಿರಾಜು, ಹಾಜರಿದ್ದರು.ಬಾಕ್ಸ್ ...........
ರಾಜ್ಯದಲ್ಲಿ ಪ್ರತಿ ವರ್ಷ 5 ಕೋಟಿ ಸಸಿ ನೆಡುವ ಗುರಿಪರಿಸರವನ್ನು ಸಂರಕ್ಷಣೆ ಮಾಡುವ ದೃಷ್ಠಿಯಿಂದ ಪ್ರತಿ ವರ್ಷ ಅರಣ್ಯ ಇಲಾಖೆಯಿಂದ 5 ಕೋಟಿ ಸಸಿ ನೆಡುವ ಗುರಿ ಹೊಂದಿದೆ. ಅಗತ್ಯ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಹಾಗೆಯೇ ಶಾಲೆಗಳ ಆವರಣದಲ್ಲಿ ಮಕ್ಕಳಿಂದ ಸಸಿ ನೆಡುಸುವ ಕಾರ್ಯಕ್ರಮವನ್ನು ಸಸ್ಯ ಶ್ಯಾಮಲ ಯೋಜನೆ ಹೆಸರಿನಲ್ಲಿ ರೂಪಿಸಲಾಗಿದೆ. ಆದ್ದರಿಂದ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ದೊಡ್ಡ ಜವಾಬ್ದಾರಿ ಇದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ಫೋಟೋ : 29 ಹೆಚ್‌ಎಸ್‌ಕೆ 1 ಮತ್ತು 2
1. ಹೊಸಕೋಟೆ ತಾಕೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೋಟೂರು ಗ್ರಾಮದ ದಿ ಗ್ರೀನ್ ಸ್ಕೂಲ್ ಆಪ್ ಬೆಂಗಳೂರು ಶಾಲೆಯಲ್ಲಿ ಏರ್ಪಡಿಸಿದ್ದ ಬ್ಯಾಂಬೂ ಫಾರ್ ಬೆಂಗಳೂರು ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು.ಪೋಟೋ – 29 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕಿನ ಕೋಟೂರು ಗ್ರಾಮದ ಬ್ಯಾಂಬೂ ಆಫ್ ಬೆಂಗಳೂರು ಕಾರ್ಯಕ್ರಮದ ವೇದಿಕೆಗೆ ಸಚಿವ ಈಶ್ವರ್ ಖಂಡ್ರೆ ಬಿದಿರಿನ ಸೈಕಲ್ ಮೇಲೆ ಆಗಮಿಸಿದರು.