ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಗ್ರಾಮೀಣ ಭಾಗದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಪ್ರತಿಷ್ಠಿತ ಆಕಾಶ್ ಸಂಸ್ಥೆ ಸಹಯೋಗದಲ್ಲಿ ಜೆಇಇ, ನೀಟ್, ಕೆಸೆಟ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡಲು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಮೆಡಿಕಲ್, ಇಂಜಿನಿಯರ್ ಕನಸು ನನಸು ಮಾಡಲು ಜ್ಞಾನ ಸಂಗಮ ಕಾಲೇಜು ನೆರವಾಗಲಿದೆ ಎಂದು ಜ್ಞಾನ ಸಂಗಮ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಆರ್ ನಟರಾಜು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾಗಿದ್ದು, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಗ್ರಾಮೀಣ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಕಾಶ್ ಸಂಸ್ಥೆ ಜೊತೆಗೂಡಿ ದಾಬಸ್‍ಪೇಟೆ ಹಾಗೂ ತುಮಕೂರಿನಲ್ಲಿ ಬ್ರಾಂಚ್ ತೆರೆದಿದ್ದು 8ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಇತ್ಯಾದಿ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಫೌಂಡೇಷನ್ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಆಕಾಶ್ ಸಂಸ್ಥೆಯ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಪ್ರೇಮ್ ಚಂದ್ ರಾಯ್ ಮಾತನಾಡಿ, 1988ರಿಂದ ಆಕಾಶ್ ಸಂಸ್ಥೆ ನೀಟ್, ಮೆಡಿಕಲ್, ಎಂಜಿನಿಯರಿಂಗ್ ಪರೀಕ್ಷೆಗಳಿಗೆ ತರಗತಿಗಳನ್ನು ನಡೆಸುತ್ತಿದೆ. ಕರ್ನಾಟಕದಲ್ಲೂ 25 ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಆಕಾಶ್ ಸಂಸ್ಥೆಯ 8 ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದಿದ್ದಲ್ಲದೆ, ಕರ್ನಾಟಕದ ಸಿಇಟಿ ಪರೀಕ್ಷೆಯಲ್ಲಿ ನಾಲ್ಕು ವರ್ಷದಿಂದ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳೇ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಹಾಗೂ ಸ್ಕಾಲರ್‌ಶಿಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಕುಮಾರಸ್ವಾಮಿ.ವಿ, ಪ್ರಾಂಶುಪಾಲರಾದ ಪುನೀತ್ ಕುಮಾರ್, ಸುಜಾತ, ಟ್ರಸ್ಟಿಗಳಾದ ಚಂದಿರಧರ, ಅವೈಜ್ ಅಹಮ್ಮದ್, ತುಮಕೂರು ಆಕಾಶ್ ಬ್ರಾಂಚ್ ಮ್ಯಾನೇಜರ್ ಗೌತಮ್, ಉಪನ್ಯಾಸಕರಾದ ಮಲ್ಲಿಕಾರ್ಜುನ್, ದಕ್ಷಿಣಮೂರ್ತಿ, ರಾಕೇಶ್ ಕುಮಾರ್, ವೀಣಾ ಇತರರಿದ್ದರು.
ಗ್ರಾಮೀಣ ಮಕ್ಕಳೇ ಹೆಚ್ಚಿರುವ ನಮ್ಮ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಜ್ಞಾನಸಂಗಮ ಕಾಲೇಜಿನಲ್ಲಿ ಆಕಾಶ್ ಅಕಾಡೆಮಿ ಸಹಯೋಗದೊಂದಿಗೆ ನೀಟ್ ಮತ್ತು ಜೆಇಇ ತರಬೇತಿ ಆರಂಭಿಸಿದ್ದೇವೆ. ಶೀಘ್ರದಲ್ಲೇ ಕಾರ್ಯಾಗಾರ ಆರಂಭವಾಗಲಿದೆ.-ಕುಮಾರಸ್ವಾಮಿ, ಜ್ಞಾನ ಸಂಗಮ ಕಾಲೇಜು ಸಂಸ್ಥಾಪಕ ಅಧ್ಯಕ್ಷ