ಲಕ್ಷ್ಮೇಶ್ವರ: ಸ್ವಯಂ ಸೇವಾ ಮನೋಭಾವವನ್ನು ಉತ್ತೇಜಿಸುವುದು, ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳನ್ನು ಬಲಪಡಿಸುವುದು ಸ್ವಚ್ಛತಾ ಸೇವಾ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ನಾವೆಲ್ಲರೂ ಗಾಂಧೀಜಿಯವರ ಆದರ್ಶ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಿದಾಗ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದಾಗ ಮಾತ್ರ ಅದರ ಆಶಯ ಸಂಪೂರ್ಣ ಯಶಸ್ಸು ಕಾಣುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗಾಂಧೀಜಿಯವರ ಕನಸು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಸಮರ್ಥ ಅರ್ಥ ಸಿಕ್ಕಂತಾಗುತ್ತದೆ ಎಂದರು.
ಎಲ್ಲರೂ ತಪ್ಪದೆ ಕಸವನ್ನು ಬುಟ್ಟಿಗೆ ಅಥವಾ ಕಸದ ಗಾಡಿಗೆ ಕೊಟ್ಟರೆ ಪಟ್ಟಣ ಸುಂದರವಾಗಿ ಕಾಣುತ್ತದೆ ಎಂದರು. ಈ ವೇಳೆ ಶಿರಹಟ್ಟಿ ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಪ್ರ. ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಮಂಡಳ ಯುವ ಘಟಕ ಅಧ್ಯಕ್ಷ ಬಸವರಾಜ ಚಕ್ರಸಾಲಿ, ನಗರ ಪ್ರಕಾರ್ಯದರ್ಶಿ ಪ್ರವೀಣ ಬೋಮಲೆ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ಅಶೋಕ ನೀರಾಲೋಟ, ಅನೀಲ ಮುಳಗುಂದ, ಶಿವಯೋಗಿ ಅಂಕಲಕೋಟಿ, ರಾಜಶೇಖರ ಶಿಗ್ಲಿಮಠ, ಮಂಜುನಾಥ ಹೊಗೆಸೊಪ್ಪಿನ, ರಾಮು ನಾಯಕ, ಮಂಜುನಾಥ ಗಜಾಕೋಶ, ವೀರೇಶ ಸಾಸಲವಾಡ, ಬಾಬಣ್ಣ ವಡಕಣ್ಣವರ, ಮಂಜುನಾಥ ಗದಗ, ಉಳವೇಶಗೌಡ ಪಾಟೀಲ, ಬಸವರಾಜ ಮಜ್ಜಿಗುಡ್ಡ, ವಿಜಯ ಬೂದಿಹಾಳ, ಬಿಜೆಪಿ ಕಾರ್ಯಕರ್ತರು ಇದ್ದರು.