ದಲಿತರು ದೇವರ ಬದಲು ಬುದ್ಧ, ಬಸವರ ಪೂಜಿಸಲಿ

KannadaprabhaNewsNetwork |  
Published : Jan 28, 2025, 12:47 AM IST
25 ಎಚ್‍ಆರ್‍ಆರ್ 05ಹರಿಹರದ ಮೈತ್ರಿ ವನದಲ್ಲಿ ಶನಿವಾರ ಕದಸಂಸಯ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಮತ್ತು ಸರ್ವ ಸದಸ್ಯರ ಸಭೆ ನಡೆಯಿತು. | Kannada Prabha

ಸಾರಾಂಶ

ದಲಿತರು ದೇವರ ಫೋಟೊಗಳ ಬದಲು ಬುದ್ಧ, ಬಸವ, ಡಾ.ಅಂಬೇಡ್ಕರ್, ಜ್ಯೋತಿಬಾ ಫುಲೆ ಅವರಂಥ ಮಹಾತ್ಮರ ಫೋಟೋಗಳನ್ನು ಪೂಜಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ( ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ ಹೇಳಿದ್ದಾರೆ.

- ಸಮಿತಿ ರಾಜ್ಯಾಧ್ಯಕ್ಷ ಮುನಿಕೃಷ್ಣಪ್ಪ ಸಲಹೆ । ದಸಂಸ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ - - - ಕನ್ನಡಪ್ರಭ ವಾರ್ತೆ ಹರಿಹರ

ದಲಿತರು ದೇವರ ಫೋಟೋಗಳ ಬದಲು ಬುದ್ಧ, ಬಸವ, ಡಾ.ಅಂಬೇಡ್ಕರ್, ಜ್ಯೋತಿಬಾ ಫುಲೆ ಅವರಂಥ ಮಹಾತ್ಮರ ಫೋಟೋಗಳನ್ನು ಪೂಜಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ( ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುನಿಕೃಷ್ಣಪ್ಪ ಹೇಳಿದರು.

ನಗರದ ಮೈತ್ರಿ ವನದಲ್ಲಿ ನಡೆದ ಸಂಘಟನೆಯ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ, ಸರ್ವ ಸದಸ್ಯರ ಸಭೆ ಹಾಗೂ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶತಮಾನಗಳಿಂದ ನಮ್ಮನ್ನು ಊರಾಚೆ ಇಟ್ಟ ಬ್ರಾಹ್ಮಣರು, ಮೇಲ್ವರ್ಗದವರ ಮನೆಗಳಲ್ಲಿರುವ ದೇವರ ಫೋಟೋಗಳನ್ನು ನಾವೂ ಪೂಜೆ ಮಾಡಿದರೆ ಉಪಯೋಗವಿಲ್ಲ. ನಮ್ಮನ್ನು ಅಸ್ಪೃಶ್ಯತೆಯ ಸಂಕೋಲೆಯಿಂದ ಬಿಡಿಸಲು ತಮ್ಮ ಜೀವನ ತ್ಯಾಗ ಮಾಡಿದ ಮಹಾತ್ಮರನ್ನು ಆರಾಧಿಸಬೇಕೆಂದು ತಿಳಿಸಿದರು.

ಧರ್ಮದ ಹೆಸರಲ್ಲಿ ಅಮಾನವೀಯ ಪರಂಪರೆ, ಪದ್ಧತಿಗಳನ್ನು ಖಡಾಖಂಡಿತವಾಗಿ ವಿರೋಧಿಸಿದವರು ಪ್ರೊ. ಬಿ.ಕೃಷ್ಣಪ್ಪ. ಅವರನ್ನು ಕರ್ನಾಟಕದ ಅಂಬೇಡ್ಕರ್ ಎಂದೇ ಕರೆಯಲಾಗುತ್ತದೆ. ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಪಾಲು ನೀಡಲು ಸರ್ಕಾರ ಒಪ್ಪದ ಕಾರಣ 1955ರಲ್ಲಿ ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇಂತಹ ಮಹಾತ್ಮರ ಆದರ್ಶವನ್ನು ನಾವೂ ಅನುಸರಿಸಬೇಕು, ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.

ರಾಜ್ಯ ಸಂಚಾಲಕ ಡಿ.ಆರ್. ಪಾಂಡುರಂಗಸ್ವಾಮಿ ಮಾತನಾಡಿ, ರಾಜ್ಯದ ಸಮಸ್ತ ದಲಿತರಲ್ಲಿ ಹೋರಾಟದ ಕಿಚ್ಚು ಮರುಕಳಿಸಲು ಪ್ರೊ. ಬಿ.ಕೃಷ್ಣಪ್ಪ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು. ಅವರ ಸಮಾಧಿ ಸ್ಥಳವಿರುವ ಮೈತ್ರಿವನಕ್ಕೆ ನಾಡಿನ ದಲಿತರು ಭೇಟಿ ನೀಡಬೇಕು ಎಂದರು.

ರಾಜ್ಯ ಸಂಘಟನಾ ಸಂಚಾಲಕರಾದ ಕೊಡಿಗಲ್ ರಮೇಶ್, ತರೀಕೆರೆ ಎನ್.ವೆಂಕಟೇಶ್, ಮಾರುತಿ ಬಿ. ಹೊಸಮನಿ, ಎ.ಎಲ್. ಭಾಸ್ಕರ್, ಟಿ.ಎನ್. ಗೋವಿಂದಪ್ಪ, ಶಿವಾನಂದ ಎಂ. ಸಾವಳಗಿ, ಭರಮಪ್ಪ, ಟಿ.ಎಂ. ಅಂಜಯ್ಯ, ಎಚ್.ಮುನಿಯಪ್ಪ, ಸುನೀತಾ ರಾಜ್, ಭವಾನಿ ಎಂ.ವಿ. ಬಾಳೆಹೊನ್ನೂರು, ತಿಪ್ಪಮ್ಮ, ಜಿಲ್ಲಾ ಸಂಚಾಲಕರಾದ ಹರಮಘಟ್ಟ ರಂಗಪ್ಪ, ಆರ್.ಶ್ರೀನಿವಾಸ್, ಸತೀಶ್ ಭಟ್ಟರ್ಕಿ ಮಾತನಾಡಿದರು.

ರಾಜ್ಯ ಸಮಿತಿ ಸದಸ್ಯರಾದ ಆರ್.ಶಿವಕುಮಾರ್, ಎಂ.ಎಸ್.ಶಂಕರ್, ಸತೀಶ್ ಕಂಟಲಗೆರೆ, ತಾಲೂಕು ಸಮಿತಿ ಸದಸ್ಯರಾದ ಯಮನೂರು ಆರ್.ಪಿ., ಸಂತೋಷ ಎನ್.ಜಿ., ಕರಿಬಸಪ್ಪ ಗಂಗನರಸಿ, ಪ್ರಕಾಶ ಎ.ಕೆ., ತಿಪ್ಪೇಶ ದೇವರೆಡ್ಡಿ, ರುದ್ರೇಶ ಚನ್ನಗಿರಿ, ಗಣೇಶ, ಹರೀಶ್ ಬೇತೂರು, ಚಿಕ್ಕಬಿದರಿ ನಾಗಪ್ಪ, ಫಕ್ಕಿರೇಶ್ ಯಾದವ ಇದ್ದರು.

- - - -25ಎಚ್‍ಆರ್‍ಆರ್05.ಜೆಪಿಜಿ:

ಹರಿಹರದ ಮೈತ್ರಿ ವನದಲ್ಲಿ ಶನಿವಾರ ಕದಸಂಸಯ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಮತ್ತು ಸರ್ವ ಸದಸ್ಯರ ಸಭೆ ನಡೆಯಿತು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ