ಶಿಕ್ಷಣ ಜೀವನದ ದಾರಿದೀಪವಾಗಲಿ

KannadaprabhaNewsNetwork |  
Published : Jan 04, 2026, 03:30 AM IST
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು, ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಮುಂದುವರಿಯಬೇಕು. ಶಿಕ್ಷಣ ಎಂಬುದು ಪಠ್ಯ, ಪರೀಕ್ಷೆ, ಅಂಕಪಟ್ಟಿ, ಉದ್ಯೋಗ, ಸಂಬಳಕ್ಕೆ ಸೀಮಿತವಾಗದೆ ಜೀವನ ಕಟ್ಟಿಕೊಳ್ಳಲು ದಾರಿ ದೀಪವಾಗಬೇಕು. ಅಂದಾಗ ಬದುಕಿಗೆ ಅರ್ಥವಿರುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು, ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಮುಂದುವರಿಯಬೇಕು. ಶಿಕ್ಷಣ ಎಂಬುದು ಪಠ್ಯ, ಪರೀಕ್ಷೆ, ಅಂಕಪಟ್ಟಿ, ಉದ್ಯೋಗ, ಸಂಬಳಕ್ಕೆ ಸೀಮಿತವಾಗದೆ ಜೀವನ ಕಟ್ಟಿಕೊಳ್ಳಲು ದಾರಿ ದೀಪವಾಗಬೇಕು. ಅಂದಾಗ ಬದುಕಿಗೆ ಅರ್ಥವಿರುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಶಿವಾಪೂರ(ಹ) ಸಂಸದರ ಆದರ್ಶ ಗ್ರಾಮದಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿ.ಎಸ್.ಆರ್) ಯೋಜನೆಯಡಿ ಮಂಜೂರಾದ ಒಟ್ಟು ₹ 19 ಲಕ್ಷ ಶಾಲಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತಾರೆ. ಶಾಲೆಗೆ ಸೇರಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ಅನೇಕ ಪೋಷಕರು ಭಾವಿಸಿದ್ದಾರೆ. ಇದು ತಪ್ಪು, ಮಕ್ಕಳ ಎಲ್ಲ ಚಟುವಟಿಕೆ ಗಮನಿಸಿ, ಸಕಾಲದಲ್ಲಿ ಅವರನ್ನು ತಿದ್ದಬೇಕಿರುವುದು ಪೋಷಕರ ಹೊಣೆಗಾರಿಕೆ ಎಂದರು.

ಗ್ರಾಮೀಣ ಭಾಗದ ಶಾಲೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನ ಸಿ.ಎಸ್.ಆರ್ ನಿಧಿ ಯೋಜನೆಯಡಿ ಶಾಲೆಗಳಿಗೆ ಕಂಪ್ಯೂಟರ್, ಪ್ರೊಜೆಕ್ಟರ್, ಗ್ರೀನ್ ಬೋರ್ಡ್, ಡೆಸ್ಕ್, ಚೇರ್‌, ಟೇಬಲ್ ಹೀಗೆ ಹಲವಾರು ಸಲಕರಣೆಗಳನ್ನು ಶಿವಾಪೂರ(ಹ) ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಶಿವಾಪೂರ(ಹ) ಗ್ರಾಮದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಅಡವಿಸಿದ್ದೇಶ್ವರ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ₹ 50 ಲಕ್ಷ, ಮಾದರ ಸಮಾಜದ ಓಣಿಯ ದುರ್ಗಾದೇವಿ ದೇವಸ್ಥಾನದ ಎದುರುಗಡೆ ಶೆಲ್ಟರ್‌ ನಿರ್ಮಾಣ, ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ, ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಚಿ, ಬೆಳಗಲಿ, ಪಾಟೀಲ ಇವರ ತೋಟದ ರಸ್ತೆ ದುರಸ್ತಿ ಹೀಗೆ ₹ 1 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿ ಗ್ರಾಮದ ಅಭಿವೃದ್ಧಿಯಲ್ಲಿ ನಾನು ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಅದೇ ರೀತಿ ಬರುವಂತಹ ದಿನಗಳಲ್ಲಿ ಯುವಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಒಂದು ಓಪನ್ ಜಿಮ್ ಸೌಲಭ್ಯ ಒದಗಿಸಲು ಕೊಡಲು ಪ್ರಯತ್ನಿಸುತ್ತಿದ್ದೇನೆ. ಇನ್ನು, ಹೆಚ್ಚು ಸೇವೆ ಮಾಡಲು ಸಿದ್ದನಿದ್ದೇನೆ. ತಾವು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಬಿಇಒ ಪ್ರಕಾಶ ಹಿರೇಮಠ ಮಾತನಾಡಿ, ಇಂದಿನ ಶಿಕ್ಷಣ ಬಲವರ್ಧನೆ ಆಗಲು ಎಲ್ಲ ತರಹದ ಸಲಕರಣೆಗಳನ್ನು ನೀಡಿದ್ದಾರೆ ಎಂದು ಸಂಸದರ ಕಾರ್ಯವನ್ನು ಶ್ಲಾಘಿಸಿದರು. ಸಾನಿಧ್ಯವನ್ನು ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮಿಜೀಗಳು ವಹಿಸಿದ್ದರು. ಬೆಳಗಾವಿ ವಿಭಾಗದ ಎಚ್.ಪಿ.ಸಿ.ಎಲ್ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ವಿನಯಕಾಂತ ಅಬಿಗೇರಿ, ಸೇಲ್ಸ್ ಅಧಿಕಾರಿ ಸಾಯಿ ಚರಣ, ಮಲಗೌಡ ಪಾಟೀಲ, ಈಶ್ವರ ಬೆಳಗಲಿ, ಕೆಂಪಣ್ಣ ಮುಧೋಳ, ಶಿವಬಸು ಜುಂಜರವಾಡ, ಶಿವಬಸು ಬೆಳಗಲಿ, ಅಜ್ಜಪ್ಪ ಬೆಂಡವಾಡ, ಶೇಖಪ್ಪ ರಡೆರಟ್ಟಿ, ಶಿವಬಸು ತುಕ್ಕನ್ನವರ, ಮಹಾದೇವ ಬೆಳಗಲಿ, ಮಲ್ಲಪ್ಪ ಜುಂಜರವಾಡ, ಸುಭಾಸ ಸೋನವಾಲ್ಕರ, ಬಸವರಾಜ ಮದಲಮಟ್ಟಿ, ಶ್ರೀಕಾಂತ ಕೌಜಲಗಿ, ಬಸವರಾಜ ಸಾಯನ್ನವರ, ಮಹಾಂತೇಶ ಕುಡಚಿ, ಪಿಡಿಒ ಬಬಲಿ, ಈರಯ್ಯ ಹಿರೇಮಠ, ನಿರ್ವಾಣಿ ಹೆಬ್ಬಾಳ, ಪರಪ್ಪ ಗಿರೆಣ್ಣವರ, ಲಕ್ಕಪ್ಪ ಕಬ್ಬೂರ ಸೇರಿ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ಇದೆ : ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದು ದಾಖಲೆಗೆ ಅಭಿಮಾನಿಗಳ ಹರ್ಷ